Advertisement
ಇದಕ್ಕೆ ಕಾರಣ ಇಪ್ಪತ್ತು ದಿನಗಳಲ್ಲಿ ನಗರದಲ್ಲಿ ವರದಿಯಾದ ಕಟ್ಟಡ ಕುಸಿತ ಘಟನೆಗಳು ! ಕೊರೊನಾ ಮೊದಲ ಮತ್ತು ಎರಡನೇ ಅಲೆಯು ತೀವ್ರವಿದ್ದ ಸಂದರ್ಭದಲ್ಲಿ ಬಾಡಿಗೆ ಅಥವಾ ಭೋಗ್ಯಕ್ಕೆಂದು ಮನೆ ಕೇಳಿಕೊಂಡು ಬರುವವರನ್ನು ಕಟ್ಟಡ ಮಾಲೀಕರು ಕೊರೊನಾ ನೆಗೆಟಿವ್ ವರದಿ ಇದೆಯೇ? ಇತ್ತೀಚೆಗೆ ಕೊರೊನಾ ಬಂದಿತ್ತಾ? ಎಲ್ಲಿ ಕೆಲಸ ಮಾಡುತ್ತೀರೀ? ಎಂಬ ನಾನಾ ಪ್ರಶ್ನೆಗಳನ್ನು ಕೇಳುತ್ತಿದ್ದರು. ಯಾಕೆ ಎಂದು ಕೇಳಿದರೆ ಮನೆಯಲ್ಲಿ ಹಿರಿಯರು, ಚಿಕ್ಕಮಕ್ಕಳಿದ್ದಾರೆ ಆರೋಗ್ಯ ರಕ್ಷಣೆಗೆ ಮುಂಜಾಗ್ರತೆ ಎಂದು ಉತ್ತರಿಸುತ್ತಿದ್ದರು.
Related Articles
Advertisement
ಘಟನೆಗಳಿಂದ ಎಚ್ಚೆತ್ತ ಬಾಡಿಗೆದಾರರು!: ಸೆ.27 ಲಕ್ಕಸಂದ್ರ, ಅ.8 ರಂದು ಕುಸಿದ ಕಸ್ತೂರಿ ನಗರದ ಕಟ್ಟಡ, ಅ.13 ರಂದು ಕಮಲನಗರ ಕಟ್ಟಡ, ಅ.17 ರಂದು ರಾಜಾಜಿನಗರ ಕಟ್ಟಡ ಸೇರಿದಂತೆ ಬಹುತೇಕ ಕಟ್ಟಡ ಕುಸಿತ ಪ್ರಕರಣಗಳಲ್ಲಿ ಬಾಡಿಗೆ ದಾರರು ಅತಂತ್ರವಾಗಿದ್ದಾರೆ. ಒಂದು ಕ್ಷಣ ಮೈರೆತಿದ್ದರು ಜೀವಕ್ಕೆ ಹಾನಿಯಾಗುತ್ತಿತ್ತು. ಇನ್ನು ಘಟನೆಯಿಂದ ಜೀವಹಾನಿಯಾಗದಿ ದ್ದರೂ, ಜೀವನ ಪೂರ್ತಿ ದುಡಿದು ಸಂಪಾ ದಿಸಿದ್ದ ಹಣದಲ್ಲಿ ಖರೀದಿಸಿದ್ದ ಗೃಹೋಪಯೋಗಿ ವಸ್ತುಗಳು, ಒಡವೆ, ಪ್ರಮುಖ ಕಾಗದ ಪತ್ರಗಳು ನಾಶವಾದವು.
ದಿನಪೂರ್ತಿ ಬೀದಿಯಲ್ಲಿ ನಿಂತು ಕಣ್ಣೀರು ಹಾಕಿದ್ದರು. ಅಲ್ಲದೆ, ಮಾಲೀಕರು ಲೀಸ್ ಹಣ , ಬಾಡಿಗೆ ಮುಂಗಡ ಹಣ ಹಿಂದಿರುಗಿಸದ ಪರಿಸ್ಥಿತಿಯಲಿದ್ದಾರೆ. ಇಂದಿಗೂ ಹಲವರು ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆದಿದ್ದಾರೆ. ಬಾಡಿಗೆದಾರರಿಗೆ ಉಂಟಾದ ನಷ್ಟವನ್ನು ಬಿಬಿಎಂಪಿ ಬರಿಸುವುದಿಲ್ಲ ಎಂದು ತಿಳಿಸಿದ್ದು, ಮಾಲೀಕರನ್ನೆ ಅವಲಂಭಿಸಬೇಕಿದೆ. ಆದರೆ, ಘಟನೆಯಿಂದ ಮಾಲೀಕರು ಕೂಡಾ ಹಣ ಹಿಂದಿರುಗಿಸುವ ಅಥವಾ ನಷ್ಟ ಪರಿಹಾರ ಮಾಡಿಕೊಡುವ ಸ್ಥಿತಿಯಲ್ಲಿಲ್ಲ. ಈ ಎಲ್ಲಾ ಅಂಶಗಳಿಂದ ಬಾಡಿಗೆದಾರರು ಎಚ್ಚೆತ್ತಕೊಂಡಿದ್ದಾರೆ.
- ಅಕ್ಟೋಬರ್‌ನಿಂದೀಚೆಗೆ ನಗರದಲ್ಲಿ 10ಕ್ಕೂ ಹೆಚ್ಚು ಕಟ್ಟಡಗಳು ಕುಸಿತ
- ಘಟನೆಗಳಿಂದ ಎಚ್ಚೆತ್ತ ಬಾಡಿಗೆದಾರರು!
- ಕಟ್ಟಡದ ಗೋಡೆ ಬಿರುಕು ಬಿಟ್ಟಿದೆಯೇ? ಅಥವಾ ನೀರು ತೊಟ್ಟಿಕ್ಕುತ್ತಿದೆಯೇ?
- ಮಾಲೀಕರು ಕಟ್ಟಡ ನಿರ್ವಹಣೆ ಮಾಡಲಾಗುತ್ತಿದೆಯೇ.
- ಸಾಧ್ಯವಾದರೆ ಕಾಗದ ಪತ್ರ ಪಡೆದು ಅನುಮತಿ ಅನುಸಾರ ನಿರ್ಮಿಸಿದ್ದಾರೆಯೇ?
- ಮನೆಯ ಅಕ್ಕಪಕ್ಕ ಶಿಥಿಲ ಕಟ್ಟಡಗಳಿವೆಯೇ?
- ರಾಜಕಾಲುವೆ, ಕೆರೆ ಒತ್ತುವರಿ ಮಾಡಲಾಗಿದೆಯೇ?
- 30 ವರ್ಷದ ಹಿಂದಿನ ಕಟ್ಟಡವಾಗಿದ್ದರೆ ಗುಣಮಟ್ಟ ಪರೀಕ್ಷೆ ಮಾಡಿಸಿದ್ದಾರೆಯೇ?
- ನಿಯಮಕ್ಕಿಂತ ಹೆಚ್ಚು ಅಂತಸ್ತು ನಿರ್ಮಿಸಿದ್ದಾರೆ?