ಹಿರಿಯೂರು: ಕುಮಾರಣ್ಣನವರ ಭರವಸೆಗಳ ಬಗ್ಗೆ ಯೋಚನೆ ಬೇಡ. ಏಕೆಂದರೆ ಅವರು ಅ ಧಿಕಾರಕ್ಕೆ ಬರಲ್ಲ. ಈ ಚುನಾವಣೆಯಲ್ಲಿ ಅ ಧಿಕಾರಕ್ಕೆ ಬಾರದೇ ಇದ್ದರೆ ಪಕ್ಷ ವಿಸರ್ಜನೆ ಮಾಡುವುದಾಗಿ ಕುಮಾರಣ್ಣ ಹೇಳಿದ್ದಾರೆ.
ಅದಕ್ಕಾಗಿ ನಾನು ಕಾಯುತ್ತಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ನಗರದ ನೆಹರು ಮೈದಾನದಲ್ಲಿ ಸೋಮವಾರ ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, 200 ಯೂನಿಟ್ ವಿದ್ಯುತ್ ಉಚಿತವಾಗಿ ಹೇಗೆ ಕೊಡುತ್ತಾರೆಂದು ಬಿಜೆಪಿಯವರು ಪ್ರಶ್ನಿಸಿದ್ದಾರೆ.
10,000 ಮೆಗಾ ವ್ಯಾಟ್ ಇದ್ದ ವಿದ್ಯುತ್ ಉತ್ಪಾದನೆಯನ್ನು 20 ಸಾವಿರ ಮೆಗಾ ವ್ಯಾಟ್‌ಗೆ ಹೆಚ್ಚಳ ಮಾಡಿದ್ದೇವೆ. ಆದರೆ ಬಿಜೆಪಿ ಸರ್ಕಾರ ಸಿಲಿಂಡರ್ ಬೆಲೆಯನ್ನು 400 ರೂ.ನಿಂದ 1150 ರೂ.ಗಳಿಗೆ ಏರಿಸಿದೆ. ಜನರಿಗೆ ಒಳಿತು ಮಾಡದ ಸರ್ಕಾರವಿದು. ಪ್ರಧಾನಿ ಮೋದಿ ಸುಳ್ಳಿನ ಮನುಷ್ಯ.
ಲಕ್ಷಾಂತರ ಜನರಿಗೆ ಉದ್ಯೋಗ ಕೊಡುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದರು. ಹತ್ತು ಜನರಿಗಾದರೂ ಉದ್ಯೋಗ ಕೊಟ್ರಾ, ಜಾತಿವಾದಿ ಬಿಜೆಪಿ ಜಾತಿ-ಧರ್ಮ ಮುಂದಿಟ್ಟುಕೊಂಡು ಮತ ಕೇಳುತ್ತಿದೆ. ಆದರೆ ಕಾಂಗ್ರೆಸ್ ಮಾತ್ರ ಜಾತ್ಯತೀತವಾಗಿ ಮತಯಾಚನೆ ಮಾಡುತ್ತದೆ ಎಂದರು.