Advertisement

UP Hathras Tragedy: 2.5 ಲಕ್ಷ ಜನ ಸೇರಿದ್ದು ಕಾಲ್ತುಳಿತಕ್ಕೆ ಕಾರಣ!

01:08 AM Jul 04, 2024 | Team Udayavani |

ಹಾಥರಸ್‌: ಉತ್ತರಪ್ರದೇಶದ ಹಾಥರಸ್‌ ಜಿಲ್ಲೆಯ ಫ‌ುಲ್‌ರಾಯ್‌ ಗ್ರಾಮದಲ್ಲಿ ಮಂಗಳವಾರ ಅಪರಾಹ್ನ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 121ಕ್ಕೇರಿದೆ. ಈ ಪೈಕಿ ನಾಲ್ವರನ್ನಷ್ಟೇ ಗುರುತಿಸಲು ಸಾಧ್ಯವಾಗಿದೆ!

Advertisement

ಬಾಬಾ ನಾರಾಯಣ ಹರಿ (ಸಾಕರ್‌ ವಿಶ್ವ ಹರಿ ಭೋಲೆ ಬಾಬಾ) ನಡೆಸಿಕೊಟ್ಟ ಸತ್ಸಂಗದ ಬಳಿಕ ಭಾರೀ ದುರಂತ ಸಂಭವಿಸಿತ್ತು. ವಿಶೇಷ ಎಂದರೆ ಬಾಬಾ ಭೋಲೆ ಎಲ್ಲಿದ್ದಾರೆ ಎಂಬುದು ಇನ್ನೂ ಪತ್ತೆಯಾಗಿಲ್ಲ.

ಕಾರ್ಯಕ್ರಮದ ಸಂಘಟಕರ ವಿರುದ್ಧ ಪೊಲೀಸರು ಎಫ್ಐಆರ್‌ ದಾಖಲಿಸಿಕೊಂಡಿದ್ದಾರೆ.

ಸಂಘಟಕರು ಸಾಕ್ಷಿಗಳನ್ನು ನಾಶ ಮಾಡಲು ಯತ್ನಿಸಿದ್ದಾರೆ, ಕೇವಲ 80,000 ಜನರು ಸೇರುವ ಜಾಗದಲ್ಲಿ 2.5 ಲಕ್ಷ ಮಂದಿ ಸೇರಿದ್ದಾರೆ. ಈ ಬಗ್ಗೆ ಪೂರ್ವಭಾವಿಯಾಗಿ ಪೊಲೀಸರಿಗೆ ಸಂಘಟಕರು ಮಾಹಿತಿ ನೀಡಿರಲಿಲ್ಲ. ಸಂಘಟಕರು ತನಿಖೆಗೆ ಸಹಕರಿಸುತ್ತಿಲ್ಲ, ಜನರ ಸಂಖ್ಯೆ ತಿಳಿಯದಂತೆ ಮಾಡಲು ದೂರದ ಬಯಲು ಜಾಗಕ್ಕೆ ಸಂಘಟಕರು ಚಪ್ಪಲಿಗಳನ್ನು ಎಸೆದಿದ್ದಾರೆ ಎಂದು ಎಫ್ಐಆರ್‌ನಲ್ಲಿ ತಿಳಿಸಲಾಗಿದೆ.

ಬಾಬಾ ಭೋಲೆ ತಮ್ಮ ಉಪನ್ಯಾಸ ಮುಗಿಸಿ ಮಧ್ಯಾಹ್ನ 3.30ಕ್ಕೆ ವಾಹನ ಹತ್ತಿದಾಗ, ಜನರು ಅವರು ತುಳಿದ ಮಣ್ಣನ್ನು ತೆಗೆದುಕೊಳ್ಳಲು ಮುನ್ನುಗ್ಗಿದ್ದಾರೆ. ಇದರಿಂದ ಕಾಲ್ತುಳಿತ ಉಂಟಾಗಿದ್ದು, ಬಹುತೇಕರು ಉಸಿರುಗಟ್ಟಿಯೇ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಹತ್ರಾಸ್‌ ಜಿಲ್ಲಾಸ್ಪತ್ರೆಯಲ್ಲಿ ಸಾಮಾನ್ಯ ನಡೆಯುವುದಕ್ಕಿಂತ ನಾಲ್ಕು ಪಟ್ಟು ಹೆಚ್ಚಿನ ಪ್ರಮಾಣದಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆ.

Advertisement

ಎಫ್ಐಆರ್‌ನಲ್ಲಿ ಬಾಬಾ ಭೋಲೆ ಹೆಸರಿಲ್ಲ
ದೂರಿನಲ್ಲಿ ಬಾಬಾ ಭೋಲೆ ಹೆಸರಿದ್ದರೂ ಎಫ್ಐಆರ್‌ನಲ್ಲಿ ಅವರ ಹೆಸರನ್ನು ಸೇರಿಸಿಲ್ಲ. ಹಾಗೆಯೇ ಪೊಲೀಸರು ಮತ್ತು ಆಡಳಿತದ ತಪ್ಪಿಲ್ಲ ಎಂದು ಹೇಳಲಾಗಿದೆ. ಪೊಲೀಸರು ಅನಾಹುತವನ್ನು ತಡೆಯಲು ತಮ್ಮಿಂದಾದ ಎಲ್ಲ ಪ್ರಯತ್ನ ನಡೆಸಿದ್ದಾರೆ. ಆದರೆ ಸಂಘಟಕರು ಕಾರ್ಯಕ್ರಮಕ್ಕೆ ಒಪ್ಪಿಗೆ ಪಡೆಯುವಾಗ ಭಕ್ತರ ಸರಿಯಾದ ಸಂಖ್ಯೆ ನೀಡಿಲ್ಲ, ಸಂಚಾರದಟ್ಟಣೆ ನಿಯಂತ್ರಿಸಲು ಸಹಕರಿಸಿಲ್ಲ. ಬದಲಿಗೆ ಸಾಕ್ಷ್ಯ ನಾಶ ಮಾಡಲು ಯತ್ನಿಸಿದ್ದಾರೆ ಎಂದು ಎಫ್ಐಆರ್‌ನಲ್ಲಿ ಹೇಳಲಾಗಿದೆ.

ದುರಂತಕ್ಕೆ ಕಾರಣ
1. ಅನುಮತಿ ಪಡೆದದ್ದು 80 ಸಾವಿರ ಮಂದಿಗೆ. ಸೇರಿದ್ದು 2.5 ಲಕ್ಷ ಮಂದಿ
2. ಕಾಲ್ತುಳಿತ ಉಂಟಾದ ಬಳಿಕ ಸಂಘಟಕರು ಪರಿಸ್ಥಿತಿ ನಿಭಾಯಿಸಲು ನೆರವು ನೀಡಲಿಲ್ಲ
3. ಬಾಬಾ ಪಾದಧೂಳಿ ಪಡೆಯಲು ನುಗ್ಗಿದ್ದವರನ್ನು ತಡೆದಿದ್ದರಿಂದ ದುರಂತ
4. ದೊಡ್ಡ ಸಂಖ್ಯೆಯ ಜನರು ಸೇರಿ ದ್ದರೂ ಜನರ ಪ್ರವೇಶ-ನಿರ್ಗಮನಕ್ಕೆ ದಾರಿ ಇರಲಿಲ್ಲ.
5. ಬಿಕ್ಕಟ್ಟು ಸಂಭವಿಸಿದ ಸ್ಥಳದಲ್ಲಿಸೂಕ್ತ ವೈದ್ಯಕೀಯ ವ್ಯವಸ್ಥೆ ಇರಲಿಲ್ಲ
6. ಭೋಲೇ ಬಾಬಾ ವಾಹನಕ್ಕೆ ಸೂಕ್ತ ಬೆಂಗಾವಲು ವಾಹನಗಳು ಇರಲಿಲ್ಲ
7. ಬೃಹತ್‌ ಪ್ರಮಾಣದಲ್ಲಿ ಸೇರಿದ್ದವರನ್ನು ನಿಯಂತ್ರಿಸಲು ಕಾರ್ಯಕರ್ತರ ಕೊರತೆ

ನ್ಯಾಯಾಂಗ ತನಿಖೆಗೆ ಆದೇಶ
ಅಧಿಕಾರಿಗಳ ಸಭೆ ನಡೆಸಿರುವ ಸಿಎಂ ಯೋಗಿ ಆದಿತ್ಯನಾಥ್‌ ಪ್ರಕರಣದ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ. 121 ಮಂದಿ ಸಾವಿನಲ್ಲಿ ಹರಿಯಾಣದ ನಾಲ್ವರು, ರಾಜಸ್ಥಾನ ಮತ್ತು ಮಧ್ಯಪ್ರದೇಶದ ತಲಾ ಒಬ್ಬರು ಸೇರಿದ್ದಾರೆ.

“ಆಶ್ರಮದ’ ಸುತ್ತ ಪೊಲೀಸ್‌
ಕೋಟೆ: ಒಳಗಿದ್ದಾರಾ ಬಾಬಾ?
ಫ‌ುಲ್‌ರಾಯ್‌ನಲ್ಲಿ ಕಾಲ್ತುಳಿತ ಸಂಭವಿಸಿದ ಮರುದಿನವಾದ ಬುಧವಾರ ಧಾರ್ಮಿಕ ಉಪನ್ಯಾಸಕರೊಬ್ಬರ ಆಶ್ರಮವೊಂದರ ಸುತ್ತ ಪೊಲೀಸರ ಕೋಟೆ ಕಟ್ಟಲಾಗಿದೆ. ಈ ಆಶ್ರಮದಲ್ಲಿ ಸಾಕರ್‌ ವಿಶ್ವ ಹರಿ ಭೋಲೆ ಬಾಬಾ ಇದ್ದಾರಾ? ಯಾಕೆ ಈ ಭದ್ರತೆ ನೀಡಲಾಗಿದೆ? ಎನ್ನುವುದಕ್ಕೆ ಪೊಲೀಸರು ಯಾವುದೇ ಉತ್ತರ ನೀಡಿಲ್ಲ. ಆದರೆ ಕೆಲವು ಪೊಲೀಸ್‌ ಮೂಲಗಳು ಬಾಬಾ ಒಳಗಿದ್ದಾರೆ ಎಂದು ಹೇಳಿವೆ. ಸದ್ಯ ಆಶ್ರಮಕ್ಕೆ ಮಾಧ್ಯಮ ಸೇರಿದಂತೆ ಯಾರಿಗೂ ಪ್ರವೇಶ ನೀಡುತ್ತಿಲ್ಲ.

ಎಂತಹ ದುರಂತ ಸಂಭವಿಸಿ
ದರೂ ಅದನ್ನು ರಾಜಕೀಯ ಗೊಳಿಸುವ ಸ್ವಭಾವ ಕೆಲವರದು. ಪ್ರತಿ ಯೊಬ್ಬರಿಗೆ ಈ ಧಾರ್ಮಿಕ ಉಪನ್ಯಾಸಕ ಯಾರೊಂದಿಗೆ ಚಿತ್ರ ತೆಗೆಸಿಕೊಂಡಿದ್ದಾರೆ, ಯಾರೊಂದಿಗೆ ರಾಜಕೀಯ ಸಂಬಂಧ ಹೊಂದಿದ್ದಾರೆ ಎಂದು ಗೊತ್ತಿದೆ. ಹಿಂದೆ ನಡೆದ ರ್ಯಾಲಿಗಳಲ್ಲೂ ಅದನ್ನು ನೋಡಿರುತ್ತೀರಿ. ಜನರ ಜೀವದೊಂದಿಗೆ ಚೆಲ್ಲಾಟ ವಾಡಿದ್ದಾರೋ ಅವರನ್ನು ಬಾಧ್ಯಸ್ಥ ರನ್ನಾಗಿ ಮಾಡ ಲಾಗುತ್ತದೆ.
-ಯೋಗಿ ಆದಿತ್ಯನಾಥ್‌, ಉ.ಪ್ರ. ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next