Advertisement

ಪರಿವಾರ ಜನಾಂಗಕ್ಕೆ ನೀಡುತ್ತಿರುವ ಕಿರುಕುಳ ತಪ್ಪಿಸಿ

07:44 AM Mar 12, 2019 | |

ಮೈಸೂರು: ನಾಯಕ ಜನಾಂಗದ ಪರ್ಯಾಯ ಪದವಾದ ಪರಿವಾರ ಕುರಿತು ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಈ ಜನಾಂಗಕ್ಕೆ ಆಗುತ್ತಿರುವ ಕಿರುಕುಳ ತಪ್ಪಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ನಗರದ ಸಿಆರ್‌ ಇ ಸೆಲ್‌ ಕಚೇರಿಯಲ್ಲಿ ಸಂಸದ ಪ್ರತಾಪ್‌ಸಿಂಹ ಅವರಿಗೆ ನಾಯಕ ಜನಾಂಗದ ಮುಖಂಡರು ಮನವಿ ಸಲ್ಲಿಸಿದರು.

Advertisement

ಸಂಸದ ಪ್ರತಾಪಸಿಂಹ ಅವರನ್ನು ಭೇಟಿ ಮಾಡಿದ ಮುಖಂಡರು ನಾಯಕ ಸಮುದಾಯದ ಪರ್ಯಾಯ ಪದವಾದ ಪರಿವಾರವಿನ್ನೂ° ಪರಿಶಿಷ್ಟ ಪಂಗಡಕ್ಕೆ ಸೇರಿಲ್ಲ ಎಂದು ಅಧಿಕಾರಿಗಳು ನೀಡುತ್ತಿರುವ ಕಿರುಕುಳದ ಬಗ್ಗೆ ಚರ್ಚೆ ನಡೆಸಿದರು.

ನಾಯಕ ಸಮುದಾಯಕ್ಕೆ ಜಾತಿ ಪ್ರಮಾಣಪತ್ರ ನೀಡಿಕೆ ವಿಚಾರದಲ್ಲಿ ಸಿಆರ್‌ ಇ ಸೆಲ್‌ ನೀಡುತ್ತಿರುವ ಕಿರುಕುಳವನ್ನು ತಪ್ಪಿಸಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರ ಮೈಸೂರು ಮತ್ತು ಚಾಮರಾಜನಗರದ ಪರಿವಾರ ಪದ ನಾಯಕ ಜನಾಂಗದ ಪರ್ಯಾಯ ಪದವೆಂದು ಒಪ್ಪಿವೆ. ಕೇಂದ್ರ ಸಚಿವಾಲಯದವರು ಕೂಡ ಒಪ್ಪಿದ್ದಾರೆ.

ಕಳೆದ ಸಂಸತ್‌ ಅಧಿವೇಶನದಲ್ಲಿ ಈ ಬಗ್ಗೆ ರಾಜ್ಯಸಭೆಯಲ್ಲಿ ಮಸೂದೆ ಮಂಡಿಸಲಾಗಿದೆ. ಹೈಕೋರ್ಟ್‌ ನೀಡಿರುವ ಆದೇಶವನ್ನು ಸಹ ಒದಗಿಸಿ, ನಾಯಕ ಜನಾಂಗದ ಮೇಲಾಗುತ್ತಿರುವ ಕಿರುಕುಳದ ಬಗ್ಗೆ ತಿಳಿಸಿ,ಮುಂದೆ ನಾಯಕ ಜನಾಂಗಕ್ಕೆ ಕಿರುಕುಳ ನೀಡದಂತೆ ಸಿಆರ್‌ಇ ಸೆಲ್‌ ಎಸ್ಪಿ ಅವರಿಗೆ ಮನವರಿಕೆ ಮಾಡಿಕೊಡಲಾಯಿತು.

ವಿಧಾನ ಪರಿಷತ್‌ ಮಾಜಿ ಸದಸ್ಯ ಸಿದ್ದರಾಜು, ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಅಪ್ಪಣ್ಣ, ವಕೀಲ ಪಡುವಾರಹಳ್ಳಿ ಎಂ.ರಾಮಕೃಷ್ಣ, ದೇವಪ್ಪನಾಯಕ, ದೇವರಾಜು ಟಿ. ಕಾಟೂರು, ಗೋಪಿ, ಕ್ಯಾತನಹಳ್ಳಿ ಸಿ. ನಾಗರಾಜ್‌, ಹಿನಕಲ್‌ ಚಂದ್ರ, ಸಾಹುಕಾರಹುಂಡಿ ಮಹದೇವು,ಪ್ರಭಾಕರ್‌,ಶಿವಕುಮಾರ್‌, ಪ್ರಕಾಶ್‌, ಕುಮಾರಬೀಡು ರಾಜೇಂದ್ರ, ಗಂಗಡಹೊಸಹಳ್ಳಿ ಶಂಕರನಾಯಕ, ಬಿಳಿಕೆರೆ ಪಾಲಾಕ್ಷ, ರಘು ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next