ಶಿಡ್ಲಘಟ್ಟ: ರಾಜ್ಯದ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಡೊನೇಷನ್‌ಗಳ ಹಾವಳಿ ಹೆಚ್ಚಾಗಿದ್ದು ಕೂಡಲೇ ಇದಕ್ಕೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿ ಎನ್‌ಎಸ್‌ಯುಐ ಸಂಘಟನೆ ಪದಾಧಿಕಾರಿಗಳು ಸರ್ಕಾರವನ್ನು ಒತ್ತಾಯಿಸಿದರು.
ಎನ್‌ಎಸ್‌ಯುಐ ರಾಜ್ಯ ಸಂಚಾಲಕ ಕುಂದಲಗುರ್ಕಿ ಮುನೀಂದ್ರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಕಚೇರಿ ಶಿರಸ್ತೇದಾರ ಮಂಜುನಾಥ್ ರಿಗೆ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ಶೈಕ್ಷಣಿಕ ವರ್ಷ ಆರಂಭವಾಗುವ ಮುನ್ನವೇ ಬಡ ಪೋಷಕರನ್ನು ಸುಲಿಗೆ ಮಾಡುವ ಯೋಜನೆಯನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ಮಾಡಲು ಹೊರಟಿದ್ದು ಶಾಲೆಗಳ ಮೂಲಕ ದೂರವಾಣಿ ಕರೆ ಮತ್ತು ಸಂದೇಶಗಳ ಮೂಲಕ ಡೊನೇಷನ್, ಶುಲ್ಕ ಪಾವತಿಸಲು ಒತ್ತಡ ಹೇರುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಲಾಕ್‌ಡೌನ್ ಪರಿಸ್ಥಿತಿಯಲ್ಲಿ ಶಾಲಾ ಶುಲ್ಕ ಭರಿಸುವುದು ಕಷ್ಟ. ಸರ್ಕಾರ ಕೂಡಲೇ ಬಡ ವಿದ್ಯಾ ರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಖಾಸಗಿ ಶಾಲಾ ಆಡಳಿತ ಮಂಡಳಿಗೆ ನಿರ್ದೇಶನ ನೀಡಿ,ಶುಲ್ಕ ವಿನಾಯಿತಿ , ಕಡಿಮೆ ಹಣ ವಸೂಲಿಗೆ ಕ್ರಮ ಕೈಗೊಳ್ಳಬೇಕೆಂದರು. ಖಾಸಗಿ ಶಾಲೆ ಮತ್ತು ಕಾಲೇಜು ಟ್ರಸ್ಟ್‌ಗಳ ಹೆಸರಿನಲ್ಲಿ ಸರ್ಕಾರಗಳಿಂದ ಅನೇಕ ರೀತಿಯ ವಿನಾಯ್ತಿ ಪಡೆದುಕೊಳ್ಳುತ್ತಿವೆ.
ಶಾಲಾ-ಕಾಲೇಜಿನ ಆಡಳಿತ ಮಂಡಳಿ ಶುಲ್ಕ ವಿನಾಯ್ತಿ ನೀಡಿದ್ದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಜೊತೆಗೆ ಶಿಕ್ಷಣ ಸಂಸ್ಥೆಗಳ ಕೊಡುಗೆಯೂ ಅಪಾರವಾಗಲಿದೆ ಎಂದರು.
ಮನವಿ ಸ್ವೀಕರಿಸಿ ಮಾತನಾಡಿದ ಶಿರಸ್ತೇದಾರ ಮಂಜುನಾಥ್, ಇಲಾಖೆ ಹಿರಿಯ ಅಧಿಕಾರಿಗಳ ಮೂಲಕ ಮನವಿಯನ್ನು ಸರ್ಕಾರದ ಗಮಕ್ಕೆ ತರುವ ಕೆಲಸ ಮಾಡುತ್ತೇವೆಂದರು. ಎನ್‌ಎಸ್‌ಯುಐ ತಾಲೂ ಕು ಉಪಾಧ್ಯಕ್ಷ ಆಫ್ರೀದ್ ಪಾಷ, ತಾಲೂಕು ಮುಖಂಡ ರಾದ ಎಂ.ಲೋಕೇಶ್, ವೈ.ಕಾರ್ತಿಕ್ ಇದ್ದರು.