Advertisement

Paris; ಸ್ಟೀಪಲ್‌ಚೇಸ್‌ ಫೈನಲ್‌ಗೆ ಸಾಬ್ಲೆ, ಈ ಸಾಧನೆ ಮೊದಲ ಭಾರತೀಯ

10:16 PM Aug 06, 2024 | Team Udayavani |

ಪ್ಯಾರಿಸ್‌: ಅಥ್ಲೀಟ್‌ ಅವಿನಾಶ್‌ ಮುಕುಂದ್‌ ಸಾಬ್ಲೆ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಸದ್ದು ಮಾಡಿದ್ದಾರೆ. ಒಲಿಂಪಿಕ್ಸ್‌ ಇತಿಹಾಸದಲ್ಲಿ 3,000 ಮೀ. ಸ್ಟೀಪಲ್‌ಚೇಸ್‌ ಸ್ಪರ್ಧೆಯ ಫೈನಲ್‌ ತಲುಪಿದ ಮೊದಲ ಭಾರತೀಯನೆಂಬುದು ಇವರ ಹೆಗ್ಗಳಿಕೆ.

Advertisement

ಸೋಮವಾರ ರಾತ್ರಿ ಸೇಂಟ್‌-ಡೆನಿಸ್‌ನಲ್ಲಿ ನಡೆದ 2ನೇ ವಿಭಾಗದ ಹೀಟ್‌ನಲ್ಲಿ ಸಾಬ್ಲೆ 5ನೇ ಸ್ಥಾನಿಯಾದರು. ಅವರು 8:15.43 ನಿಮಿಷಗಳಲ್ಲಿ ಸ್ಪರ್ಧೆ ಮುಗಿಸಿದರು. ಆದರೆ ಇದು ಅವರ ವೈಯಕ್ತಿಕ ಶ್ರೇಷ್ಠ ನಿರ್ವಹಣೆಗಿಂತ ಕೆಳ ಮಟ್ಟದ ಸಾಧನೆ. ಕಳೆದ ಪ್ಯಾರಿಸ್‌ ಡೈಮಂಡ್‌ ಲೀಗ್‌ನಲ್ಲಿ ಅವರು 8.09.91 ನಿಮಿಷಗಳ ಸಾಧನೆಗೈದದ್ದು ದಾಖಲೆಯಾಗಿದೆ.

ಮೊರಾಕ್ಕೋದ ಮೊಹಮ್ಮದ್‌ ಹೀಟ್‌ನಲ್ಲಿ ಅಗ್ರಸ್ಥಾನಿಯಾದರು (8:10.62). ಇಥಿಯೋಪಿಯಾದ ಸ್ಯಾಮ್ಯುಯೆಲ್‌ ಫೈರ್‌ವೂ ದ್ವಿತೀಯ (8:11.61), ಕೀನ್ಯಾದ ಅಬ್ರಹಾಂ ಕಿಬಿವೋಟ್‌ ತೃತೀಯ ಸ್ಥಾನ ಪಡೆದರು (8:12.02). ಮೊದಲ 1,000 ಮೀ. ವೇಳೆ ಅವಿನಾಶ್‌ ಸಾಬ್ಲೆ, ಕಿಬಿವೋಟ್‌ ಅವರಿಗೆ ಬಲವಾದ ಸ್ಪರ್ಧೆಯೊಡ್ಡಿದರು. ಇದು 3 ವಿಭಾಗಗಳ ಹೀಟ್‌ ಸ್ಪರ್ಧೆಯಾಗಿದ್ದು, ಪ್ರತೀ ಹೀಟ್‌ನಲ್ಲಿ ಮೊದಲ 5 ಸ್ಥಾನ ಪಡೆದವರು ಫೈನಲ್‌ಗೆ ಆಯ್ಕೆಯಾಗುತ್ತಾರೆ. ಗುರುವಾರ ಫೈನಲ್‌ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next