Advertisement
ಮಹಾರಾಷ್ಟ್ರದ ಮಾಂಡ್ವಾ ಗ್ರಾಮದ ಕೃಷಿಕನ ಮಗನಾದ ಅವಿನಾಶ್ ಸಬ್ಲೆ 3 ದಿನಗಳ ಅಂತರದಲ್ಲಿ 2 ಸಲ ಪುರುಷರ 3,000 ಮೀ. ಸ್ಟೀಪಲ್‌ಚೇಸ್ ಸ್ಪರ್ಧೆಯ ತಮ್ಮ ರಾಷ್ಟ್ರೀಯ ದಾಖಲೆಯನ್ನು ತಿದ್ದಿ ಬರೆದದ್ದು ವಿಶೇಷ. ಮಂಗಳವಾರದ ಮೊದಲ ಸುತ್ತಿನ ಹೀಟ್ಸ್‌ನಲ್ಲಿ 8 ನಿಮಿಷ, 25.33 ಸೆಕೆಂಡ್‌ಗಳ ಸಾಧನೆಗೈದಿದ್ದರು. ಇದರೊಂದಿಗೆ ತಮ್ಮ 8 ನಿಮಿಷ, 28.94 ಸೆಕೆಂಡ್‌ಗಳ ರಾಷ್ಟ್ರೀಯ ದಾಖಲೆಯನ್ನು ಮೊದಲ ಸಲ ಅಳಿಸಿದರು. ಬಳಿಕ ಫೈನಲ್‌ನಲ್ಲಿ 8 ನಿಮಿಷ, 21.37 ಸೆಕೆಂಡ್‌ಗಳಲ್ಲಿ ದೂರ ಕ್ರಮಿಸಿ ಹೊಸ ದಾಖಲೆ ಸ್ಥಾಪಿಸಿದರು.ಇದು ಒಂದು ವರ್ಷದಲ್ಲಿ ಸಬ್ಲೆ ನಿರ್ಮಿಸಿದ 4ನೇ ರಾಷ್ಟ್ರೀಯ ದಾಖಲೆ. ಒಲಿಂಪಿಕ್ ಅರ್ಹತೆಯ ಮಾನದಂಡ 8 ನಿಮಿಷ, 22 ಸೆಕೆಂಡ್ ಆಗಿದೆ.
(8:01.35 ಸೆಕೆಂಡ್). ಕೆ.ಟಿ. ಇರ್ಫಾನ್, ದೇವೇಂದರ್ ವಿಫಲ
ಪುರುಷರ 20 ಕಿ.ಮೀ. ರೇಸ್‌ನಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ಕೆ.ಟಿ. ಇರ್ಫಾನ್ 27ನೇ ಸ್ಥಾನದೊಂದಿಗೆ ಸ್ಪರ್ಧೆ ಮುಗಿಸಿದರು (1 ಗಂಟೆ, 35 ನಿಮಿಷ, 21 ಸೆಕೆಂಡ್). ಭಾರತದ ಮತ್ತೋರ್ವ ಸ್ಪರ್ಧಿ ದೇವೇಂದರ್ ಸಿಂಗ್ 36ನೇ ಸ್ಥಾನಿಯಾದರು (1:41:48 ಸೆಕೆಂಡ್). ರೇಸ್‌ನಲ್ಲಿ ಒಟ್ಟು 52 ಮಂದಿ ಪಾಲ್ಗೊಂಡಿದ್ದು, ಇವರಲ್ಲಿ ಸ್ಪರ್ಧೆಯನ್ನು ಪೂರ್ತಿಗೊಳಿಸಿದ್ದು 40 ಮಂದಿ ಮಾತ್ರ.
Related Articles
Advertisement