Advertisement

“ಒತ್ತಡ ನಿಭಾಯಿಸುವುದು ಅಗತ್ಯ’: ಆವೇಶ್‌ ಖಾನ್‌

11:50 PM Apr 05, 2022 | Team Udayavani |

ಮುಂಬಯಿ: ಐಪಿಎಲ್‌ನಂತಹ ಕೂಟಗಳಲ್ಲಿ ಬೌಲರ್‌ಗಳಿಗೆ ಬಿಡುವು ಸಿಗುವುದು ಅಪರೂಪ. ಒತ್ತಡವನ್ನು ನಿಭಾಯಿಸಿದರೆ ನಾವಿಲ್ಲಿ ಯಶಸ್ಸು ಸಾಧಿಸಬಹುದು ಎಂದು ಯುವ ವೇಗಿ ಆವೇಶ್‌ ಖಾನ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ಆವೇಶ್‌ ಖಾನ್‌ ಸೋಮವಾರದ ಪಂದ್ಯದಲ್ಲಿ ಸನ್‌ರೈಸರ್ ಹೈದರಾಬಾದ್‌ ವಿರುದ್ಧ ತಂಡದ ಗೆಲುವಿನ ರೂವಾರಿಯಾಗಿದ್ದರು. ತನ್ನ 4 ಓವರ್‌ಗಳ ದಾಳಿಯಲ್ಲಿ ಕೇವಲ 24 ರನ್‌ ಬಿಟ್ಟುಕೊಟ್ಟಿದ್ದ ಅವರು ನಾಲ್ಕು ಅಮೂಲ್ಯ ವಿಕೆಟ್‌ ಹಾರಿಸಿದ್ದರು. ಇಷ್ಟು ಮಾತ್ರವಲ್ಲದೇ 18ನೇ ಓವರನ್ನು ಅಮೋಘವಾಗಿ ಎಸೆದು ತನ್ನ ತಂಡ 12 ರನ್ನುಗಳಿಂದ ಗೆಲ್ಲಲು ಸಹಕರಿಸಿದ್ದರು.

ಟೆಸ್ಟ್‌ ಆಡದ ಅತ್ಯಂತ ದುಬಾರಿ ಭಾರತೀಯ ಆಟಗಾರರಾದ ಆವೇಶ್‌ ಅವರನ್ನು ತನ್ನ ಮೂಲ ಬೆಲೆ (20 ಲಕ್ಷ ರೂ.)ಗಿಂತ 25 ಪಟ್ಟು ಹೆಚ್ಚಿಗೆ ನೀಡಿ ಲಕ್ನೋ ಫ್ರಾಂಚೈಸಿ ಖರೀದಿಸಿತ್ತು.

ಐಪಿಎಲ್‌ನಂತಹ ಕೂಟಗಳಲ್ಲಿ ಪ್ರತಿಯೊಂದು ಪಂದ್ಯದಲ್ಲೂ ಬೌಲರ್‌ಗಳಿಗೆ ಬಹಳಷ್ಟು ಒತ್ತಡಗಳಿರುತ್ತದೆ. ಈ ಒತ್ತಡವನ್ನು ನಿಭಾಯಿಸುವುದು ಅತ್ಯಂತ ಪ್ರಾಮುಖ್ಯವಾಗಿರುತ್ತದೆ. ನಾನು ತಂಡದ ಪ್ರಮುಖ ಬೌಲರ್‌ ಎಂದು ಭಾವಿಸಿಲ್ಲ. ಆದರೆ ತಂಡಕ್ಕಾಗಿ ಪ್ರತಿ ಬಾರಿಯೂ ವಿಕೆಟ್‌ ಪಡೆಯಲು ಪ್ರಯತ್ನಿಸುವೆ ಎಂದು ಪಂದ್ಯದ ಬಳಿಕ ಆವೇಶ್‌ ಹೇಳಿದ್ದಾರೆ.

ಇದನ್ನೂ ಓದಿ:ಐಪಿಎಲ್‌: ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಆರ್‌ಸಿಬಿಗೆ ರೋಚಕ ಜಯ

Advertisement

ಒಂದು ವೇಳೆ ನಾನು ಪ್ರಮುಖ ಬೌಲರೆಂದು ಆಲೋಚಿಸಿದರೆ ಸಹಜವಾಗಿ ಒತ್ತಡ ಬೀಳುತ್ತದೆ. ಇದು ಅನಗತ್ಯ. ಇದರ ಬದಲು ವಿಕೆಟ್‌ ಪಡೆಯುವ ಉದ್ದೇಶದೊಂದಿಗೆ ಬೌಲಿಂಗ್‌ ನಡೆಸಿದರೆ ಯಶಸ್ಸು ಸಾಧಿಸಬಹುದು ಎಂದವರು ತಿಳಿಸಿದರು.

ಗೆಲುವಿನ ಕಾರಣಕ್ಕಾಗಿ ನನ್ನ ಕೊಡುಗೆ ತಂಡಕ್ಕೆ ಸಿಕ್ಕಿರುವುದು ಖುಷಿ ತಂದುಕೊಟ್ಟಿದೆ. ಮೊದಲ ಪಂದ್ಯದಲ್ಲಿ 11 ರನ್‌ ಕಾಪಾಡುವ ಅವಕಾಶ ಲಭಿಸಿದ್ದರೂ ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ವಿಕೆಟ್‌ ಪಡೆಯುವುದರತ್ತ ಗಮನ ಹರಿಸಿರುವುದು ಒಳ್ಳೆಯ ಫ‌ಲ ನೀಡಿದೆ ಎಂದು ಆವೇಶ್‌ ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next