Advertisement

ಅವೆಂಜರ್‌ ಚೇಂಜ್‌

01:01 PM Jan 22, 2018 | |

ಬಜಾಜ್‌ (ಅವೆಂಜರ್‌) ಬದಲಾಗಿದೆ! ಕ್ರೂಸರ್‌ ಸೆಗ್ಮೆಂಟ್‌ನಲ್ಲಿ ಬ್ರ್ಯಾಂಡ್‌ ಆಗಿರುವ ಬೈಕ್‌ಗಳ ಸಾಲಿನಲ್ಲಿ ಬಜಾಜ್‌ ಕಂಪನಿಗೆ ವಿಶೇಷವಾದ ಹೆಸರಿದೆ. ಆಗಾಗ ಈ ಮೂಲಕ ದ್ವಿಚಕ್ರ ಮಾರುಕಟ್ಟೆಯಲ್ಲಿ ಸುದ್ದಿ ಮಾಡುತ್ತಲೇ ಇರುತ್ತದೆ. ಈಗ ತನ್ನ ಜನಪ್ರಿಯ ಬೈಕ್‌ಗಳಲ್ಲಿ ಒಂದಾದ ಅವೆಂಜರ್‌ನಲ್ಲಿ ಕೆಲವೊಂದು ಬದಲಾವಣೆ ಮಾಡಿ ಮತ್ತೆ ಮಾರುಕಟ್ಟೆಗೆ ಪರಿಚಯಿಸಿದೆ.

Advertisement

ಗ್ರಾಹಕನ ಬೇಡಿಕೆ ಹಾಗೂ ದೂರುಗಳನ್ನು ಆಧರಿಸಿಯೇ ಒಂದಿಷ್ಟು ಬದಲಾವಣೆ ಮಾಡಿಕೊಂಡಿರುವ ಬಜಾಜ್‌ ಕ್ರೂಸ್‌ 220 ಹಾಗೂ ಸ್ಟ್ರೀಟ್‌ 220 ಬೈಕ್‌ಗಳನ್ನು ಪರಿಚಯಿಸಿದೆ. ಈ ಎರಡೂ ಶ್ರೇಣಿಯ ಬೈಕ್‌ಗಳೂ ಅವೆಂಜರ್‌ ಬ್ರ್ಯಾಂಡ್‌ ಮೌಲ್ಯವನ್ನು ಇನ್ನಷ್ಟು ಹೆಚ್ಚಸಲಿವೆ ಎನ್ನುವ ಲೆಕ್ಕಾಚಾರದಲ್ಲಿ ಕಂಪನಿ ಇದೆ.

ದ್ವಿಚಕ್ರ ವಾಹನ ಮಾರುಕಟ್ಟೆಂಲ್ಲಿ ಈಗಾಗಲೇ ಹೊಸ ಟ್ರೆಂಡ್‌ ಸೃಷ್ಟಿಸಿರುವ ಬಜಾಜ್‌, ಈ ಎರಡು ಬೈಕ್‌ಗಳ ಸಾಮರ್ಥ್ಯವನ್ನು ಇನ್ನಷ್ಟು ವೃದ್ಧಿಸಿ, ವಿನ್ಯಾಸದಲ್ಲೂ ಕೆಲವೊಂದು ಸಣ್ಣ-ಪುಟ್ಟ ಬದಲಾವಣೆ ಮಾಡಿದೆ. ಪರಿಚಯಿಸಿದೆ. ಗುರುತಿಸಬೇಕಾದ ಇನ್ನೊಂದು ಅಂಶ ಏನೆಂದರೆ ಈ ಎರಡು ಬೈಕ್‌ಗಳಲ್ಲಿ ಹಿಂಬದಿ ಸವಾರನಿಗೂ ಪ್ರಯಾಣ ಆರಾಮದಾಯಕ ಆಗಿರುವಂತೆ ಕೆಲವೊಂದು ಬದಲಾವಣೆ ಮಾಡಲಾಗಿದೆ ಎನ್ನುವುದು ಕಂಪನಿ ಅಂಬೋಣ.

ಅತ್ಯಾಧುನಿಕ ತಂತ್ರಜ್ಞಾನ ಅಳವಡಿಕೆ: ಹೊಸ ಅವೆಂಜರ್‌ ಸರಣಿ ಬೈಕ್‌ಗಳಲ್ಲಿ, ಇದೀಗ ಕಾರುಗಳಲ್ಲಿ ಅಳವಡಿಸಲಾಗುವ ಅತ್ಯಾಧುನಿಕ ತಂತ್ರಜ್ಞಾನಗಳನ್ನೂ ಪರಿಚಯಿಸಲಾಗುತ್ತಿದೆ. ಡಿಜಿಟಲ್‌ ಡಿಸ್ಪೆನಲ್ಲಿ ಬೈಕ್‌ನ ಕಾರ್ಯಕ್ಷಮತೆಯ ಎಲ್ಲಾ ಮಾಹಿತಿಗಳೂ ಲಭ್ಯ.

ಜೊತೆಗೆ ಕ್ರೂಸ್‌ 220 ಹಾಗೂ ಸ್ಟ್ರೀಟ್‌ 220 ಬೈಕ್‌ಗಳಲ್ಲಿ ಆಯಿಲ್‌ ಕೂಲರ್‌ ಅಳವಡಿಸಲಾಗಿದೆ. ಯಾವುದೇ ಪ್ರಕಾರದ ಹವಾಮಾನದಲ್ಲಿಯೂ ಸಲೀಸಾಗಿ ಎಂಜಿನ್‌ ಚಲಿಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಹಿಂಡ್‌ ಶೀಲ್ಡ್‌ನ ವಿನ್ಯಾಸವನ್ನು ಇನ್ನಷ್ಟು ಸುಂದರಗೊಳಿಸಲಾಗಿದೆ. ಒಟ್ಟಾರೆ, ಎಲ್‌ಇಡಿ ಡಿಆರ್‌ಎಲ್‌ ಹೆಡ್‌ಲ್ಯಾಂಪ್‌ನೊಂದಿಗೆ ಹೊಸತನ ಪಡೆದುಕೊಂಡಿದೆ ಎನ್ನಲಡ್ಡಿ ಇಲ್ಲ.

Advertisement

ಇನ್ನಷ್ಟು ಸಾಮರ್ಥ್ಯದ ಎಂಜಿನ್‌: ಹೌದು, ಅವೆಂಜರ್‌ನ ಎಂಜಿನ್‌ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಿರುವ ಬಜಾಜ್‌ ಕಂಪನಿ, ತನಗೆ ಬಂದ ದೂರುಗಳನ್ನಾಧರಿಸಿ ಗುಣಮಟ್ಟವನ್ನು ಹೆಚ್ಚಿಸಿದ್ದಾಗಿ ಹೇಳಿಕೊಂಡಿದೆ. 220 ಸಿಸಿ ಸಾಮರ್ಥ್ಯ ಹೊಂದಿರುವ ಕ್ರೂಸ್‌ ಹಾಗೂ ಸ್ಟ್ರೀಟ್‌ ಬೈಕ್‌ಗಳಲ್ಲೂ ಡಿಟಿಎಸ್‌-ಐ ಎಂಜಿನ್‌ ಬಳಕೆ ಮಾಡಿದೆ. 19ಪಿಎಸ್‌ ಪವರ್‌ ಸಾಮಥ್ಯದೊಂದಿಗೆ 17.5ಎನ್‌ಎಂ ಟಾರ್ಕ್‌ ಒಳಗೊಂಡಿದೆ. ಇದುವರೆಗಿನ ಹೆಚ್ಚಿನ ಕ್ರೂಸರ್‌ ಬೈಕ್‌ಗಳಿಗೆ ಪ್ರಬಲ ಪೈಪೋಟಿ ನೀಡಬಲ್ಲ ಶಕ್ತಿ ಈ ಬೈಕ್‌ಗಳದ್ದಾಗಿದೆ.

ಯಾವೆಲ್ಲಾ ಬಣ್ಣಗಳಲ್ಲಿ ಲಭ್ಯ?: ಕ್ರೂಸ್‌220 ಔಬರ್ನ್ ಬ್ಯಾಕ್‌ ಹಾಗೂ ಮೂನ್‌ ವೈಟ್‌ಗಳಲ್ಲಿ ಲಭ್ಯ. ಸ್ಟ್ರೀಟ್‌220 ಮ್ಯಾಟ್‌ ಬ್ಲ್ಯಾಕ್‌ ಮತ್ತು ವೈಟ್‌ಗಳಲ್ಲಿ ಲಭ್ಯವಿದೆ.

* ಬೆಂಗಳೂರಿನಲ್ಲಿ ಎಕ್ಸ್‌ ಶೋ ರೂಂ ಬೆಲೆ 93,000 ರೂ.
* ಪ್ರತಿ ಲೀಟರ್‌ಗೆ 45ಕಿ.ಮೀ. ಮೈಲೇಜ್‌

ಸ್ಪೆಸಿಫಿಕೇಷನ್‌ ಏನೇನು?
– ಐದು ಸ್ಪೀಡ್‌ ಗೇರ್‌ಬಾಕ್ಸ್‌
– 2210 ಮಿ.ಮೀ. ಉದ್ದ, 806ಮಿ.ಮೀ. ಅಗಲ
– 16ಮೀ. ಮೀ. ಗ್ರೌಂಡ್‌ ಕ್ಲಿಯರೆನ್ಸ್‌
– ಇಂಧನ ಶೇಖರಣೆ ಸಾಮರ್ಥ್ಯ 13 ಲೀಟರ್‌
– ಮುಂಭಾಗದಲ್ಲಿ 260ು.ಮೀ ಡಿಸ್ಕ್ ಬ್ರೇಕ್‌, ಹಿಂಭಾಗದಲ್ಲಿ 130ಮಿ.ಮೀ. ಡ್ರಮ್‌ ಬ್ರೇಕ್‌

* ರೈಡರ್ ಅಗ್ನಿ

Advertisement

Udayavani is now on Telegram. Click here to join our channel and stay updated with the latest news.

Next