Advertisement

ಚಳಿಗಾಲದ ಸ್ಪೆಷಲ್ ತಿಂಡಿ ಅವರೇಕಾಳಿನ ಸಮೋಸ

06:19 PM Dec 22, 2020 | Nagendra Trasi |

ಎಲ್ಲೆಡೆ ಈ ಬಾರಿಯ ಚಮು ಚಮು ಚಳಿ ಚಳಿಗಾಲ ಶುರುವಾಗಿದ್ದು. ಏನಾದರೂ ಖಾರಖಾರವಾಗಿ ತಿನ್ನಬೇಕೆಂಬ ಬಾಯಿಚಪಲ ಹುಟ್ಟುತ್ತದೆ. ನೀವು ವಿವಿಧ ರೀತಿಯ ಸಮೋಸವನ್ನು ತಿಂದಿರಬಹುದು . ಆದರೆ ಅವರೇಕಾಳಿನ ಸಮೋಸ ತುಂಬಾನೇ ವಿಶೇಷ. ಇದನ್ನು ನಿಮ್ಮ ಮನೆಯಲ್ಲಿ ತಯಾರಿಸಬಹುದು.

Advertisement

ಬೇಕಾಗುವ ಸಾಮಾಗ್ರಿಗಳು: 
ಗೋಧಿಹಿಟ್ಟು  2 ಕಪ್, ಮೈದಾಹಿಟ್ಟು  2 ಕಪ್,  ಅವರೇಕಾಳು 1ಕಪ್, ಸಣ್ಣಗೆ ಕತ್ತರಿಸಿಟ್ಟ (ಬೀನ್ಸ್  ,ಕ್ಯಾರೆಟ್, ಈರುಳ್ಳಿ , ಬೀಟ್ರೂಟ್ ಸೇರಿ 2 ಕಪ್)  ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು , ಶುಂಠಿ, ಕರಿಯಲು ಬೇಕಾದಷ್ಟು ಎಣ್ಣೆ , ಲಿಂಬೆಹಣ್ಣು 1, ಗರಂಮಸಾಲೆಪುಡಿ 1 ಚಮಚ, ರುಚಿಗೆ ಉಪ್ಪು.

ತಯಾರಿಸುವ ವಿಧಾನ : ಗೋಧಿಹಿಟ್ಟು , ಮೈದಾಹಿಟ್ಟಿಗೆ ಸ್ವಲ್ಪ ಉಪ್ಪು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.
ಅವರೇಕಾಳಿನ ಜೊತೆ ಎಲ್ಲ ತರಕಾರಿಗಳನ್ನು ಸ್ವಲ್ಪ ಉಪ್ಪು ಹಾಕಿ ಬೇಯಿಸಿ ಗರಂ ಮಸಾಲೆ ಪುಡಿಯನ್ನು ಸೇರಿಸಿ. ಕೊತ್ತಂಬರಿ ಸೊಪ್ಪು, ಕರಿಬೇವು, ಶುಂಠಿ ಹಾಕಿ ಪಲ್ಯದಂತೆ ಮಾಡಿಟ್ಟುಕೊಳ್ಳಿ. ಆರಿದ ನಂತರ ಲಿಂಬೆರಸ ಸೇರಿಸಿ.

ಗೋಧಿ/ಮೈದಾ ಹಿಟ್ಟಿನ ಮಿಶ್ರಣವನ್ನು ಪೂರಿಯಂತೆ ಲಟ್ಟಿಸಿ, ಸರಿ ಅರ್ಧಕ್ಕೆ ಕತ್ತರಿಸಿ.  ಒಂದೊಂದು ಭಾಗವನ್ನು ಶಂಕುವಿನ ಆಕಾರದಲ್ಲಿ ಸುತ್ತಿ ಅದರ ಒಳಗೆ ಮಾಡಿಟ್ಟ ಪಲ್ಯದ ಮಿಶ್ರಣವನ್ನು ತುಂಬಿಸಿ.

ಮಿಶ್ರಣ ಹೊರಬಾರದಂತೆ ಸುತ್ತಲೂ ಸರಿಯಾಗಿ ಒತ್ತಿ. ಎಣ್ಣೆಯನ್ನು ಕಾಯಲು ಇಟ್ಟು ಒಂದೊಂದೇ ಸಮೋಸವನ್ನು ಹಾಕುತ್ತಾ ನಿಧಾನವಾಗಿ ಹೊಂಬಣ್ಣ ಬರುವವರೆಗೆ ಕಾಯಿಸಿರಿ.  ಸ್ವಾದಿಷ್ಟವಾದ ಅವರೇಕಾಳಿನ ಸಮೋಸ ಸವಿಯಲು ಸಿದ್ಧ…

Advertisement
Advertisement

Udayavani is now on Telegram. Click here to join our channel and stay updated with the latest news.

Next