Advertisement
ತಾಲೂಕಿನ ಪುರಾಣ ಪ್ರಸಿದ್ಧ ಆವಣಿ ಶ್ರೀರಾಮಲಿಂಗೇಶ್ವರ ಕ್ಷೇತ್ರವು ಪುರಾಣ ಪ್ರಸಿದ್ದ ಸ್ಥಳವಾಗಿದ್ದು, ರಾಮಾಯಣದ ರಾಮ, ಲಕ್ಷ್ಮಣ, ಸೀತಾಮಾತೆ ವಾಸವಾಗಿದ್ದ ಸ್ಥಳ, ಅಶ್ವಮೇಧಯಾಗದ ಕುದುರೆಯನ್ನು ಕಟ್ಟಿಹಾಕಿದ ಲವಕುಶರ ಜನ್ಮಸ್ಥಳ ಹಾಗೂ ವಾಸದ ಮನೆ ಎಂಬ ಐತಿಹ್ಯ ಇದೆ.
Related Articles
Advertisement
ವಿವಿಧೆಡೆಯಿಂದ ಎತ್ತುಗಳು ಆಗಮನ: ಪ್ರಸ್ತುತ ಜನಗಳ ಜಾತ್ರೆಯಾಗಿ ಪರಿಣಮಿಸುತ್ತಿದ್ದು, ಅದರಲ್ಲೂಈ ಬಾರಿ ಕಾಲುಬಾಯಿ ಜ್ವರ ಕಡಿವಾಣಕ್ಕಾಗಿ ಪಶು ವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ತುಳಸಿರಾಮ್ ಮಾರ್ಗದರ್ಶನದಂತೆ ವೈದ್ಯರು ಹಲವಾರು ಕ್ರಮ ಗಳನ್ನು ಕೈಗೊಂಡಿರುವ ಹಿನ್ನೆಲೆಯಲ್ಲಿ ಮಂಗಳವಾರವೇ ಹೊಸಕೋಟೆ ತಾಲೂಕು ಡಿ.ಶೆಟ್ಟಿಹಳ್ಳಿ, ಮಾಲೂರು ತಾಲೂಕು ಮಾಸ್ತಿ, ಕೋಲಾರ ತಾಲೂಕು ನರಸಾಪುರ,ತಂಬಿಹಳ್ಳಿ, ಆಂಧ್ರದ ವಿ.ಕೋಟೆ, ಬೈರಕೂರು, ಕುರುಡುಮಲೆ ಸೇರಿದಂತೆ ರಾಜ್ಯ ಮತ್ತು ಅಂತರ ರಾಜ್ಯಗಳಿಂದ ನೂರಾರು ಜೊತೆಗಳ ಎತ್ತುಗಳು ಜಾತ್ರೆಗೆ ಆಗಮಿಸಿವೆ.
ನೀರು, ಮೇವಿನ ವ್ಯವಸ್ಥೆ ಕಲ್ಪಿಸಲಿ: ಜಾನುವಾರುಗಳಿಗೆ ಉಚಿತ ಮೇವು ಮತ್ತು ನೀರಿನ ಸೌಕರ್ಯಒದಗಿಸಬೇಕೆಂದು ಮಾರಾಟ ಮಾಡಲು ಬಂದು ಬೀಡು ಬಿಟ್ಟಿರುವ ಮಾಸ್ತಿ ಕೃಷ್ಣಪ್ಪ ತಾಲೂಕು ಆಡಳಿತಕ್ಕೆ ಮನವಿ ಮಾಡಿದ್ದಾರೆ.
ಒಂದು ವಾರ 60, ರಥೋತ್ಸವ ದಿನ 160 ರಿಂದ 170 ಬಸ್ :
ಫೆ.13 ರಂದು ನಡೆಯಲಿರುವ ಜಿಲ್ಲೆಯಲ್ಲಿಯೇ ಅತೀದೊಡ್ಡದಾದ 62 ಅಡಿಗಳ ಎತ್ತರದ ಶೃಂಗಾರ ಭರಿತಬ್ರಹ್ಮರಥೋತ್ಸವಕ್ಕೆ ಕರ್ನಾಟಕ ಹಾಗೂ ಹೊರ ರಾಜ್ಯಗಳಿಂದ ಲಕ್ಷಾಂತರ ಜನರು ಪಾಲ್ಗೊಳ್ಳುವುದರಿಂದ ಸುಗಮ ಸಂಚಾರಕ್ಕಾಗಿ ಕೆಎಸ್‌ಆರ್‌ಟಿಸಿ ಅನುವು ಮಾಡಿಕೊಟ್ಟಿದೆ. ಜಾತ್ರೆಯಲ್ಲಿಯೇ ಘಟಕ ಸ್ಥಾಪಿಸಿ ಮುಳಬಾಗಿಲು,ಕೋಲಾರ, ಕೆ.ಜಿ.ಎಫ್, ಶ್ರೀನಿವಾಸಪುರ, ಮಾಲೂರುಡಿಪೋಗಳಿಂದ ಒಂದು ವಾರ ಕಾಲ ವಿಶೇಷವಾಗಿ ಪ್ರತಿನಿತ್ಯ ಎಲ್ಲಾ ಮಾರ್ಗಗಳಲ್ಲಿ 60 ಬಸ್‌ಗಳನ್ನು ಮತ್ತುರಥೋತ್ಸವದಂದು 160-170 ಬಸ್‌ಗಳನ್ನು ಆವಣಿಗೆಜಾತ್ರೆಗೆ ಹಾಕಿರುತ್ತಾರೆ. ಅಲ್ಲದೇ ಕೆ.ಎಸ್.ಆರ್‌ಟಿ.ಸಿಅಧಿಕಾರಿಗಳು ಜಾತ್ರೆಯಲ್ಲಿ ಹಾಜರಿದ್ದು, ಎಲ್ಲಾಮಾರ್ಗಗಳಲ್ಲಿ ಸಾಕಷ್ಟು ಬಸ್‌ಗಳನ್ನು ಓಡಿಸುವ ಮೂಲಕ ಸಂಚಾರಕ್ಕೆ ಅನುವು ಮಾಡಿಕೊಟ್ಟಿರುತ್ತಾರೆ.
ಜಾನುವಾರುಗಳಿಗೆ ನೀರು ಕುಡಿಸಲು ರಾಮಾಪುರ ಕೆರೆಗೆ ಹೋಗುವ ಸ್ಥಿತಿ :
ಸದರೀ ಜಾತ್ರೆಯಲ್ಲಿ ನೀರಿನ ಸೌಕರ್ಯ ಕಲ್ಪಿಸಲು ಒಪ್ಪಿಕೊಂಡಿರುವ ಆವಣಿ ಗ್ರಾಪಂ ಪಿಡಿಒ ಇದುವರೆಗೂ ಜಾತ್ರೆಯಲ್ಲಿ ನಿರ್ಮಿಸಿರುವ ತೊಟ್ಟಿಗಳಿಗೆನೀರು ತುಂಬಿಸದೇ ಇರುವುದರಿಂದ ಜನರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಮನೆಗಳ ಆವರಣಗಳಲ್ಲಿರುವ ತೊಟ್ಟಿಗಳಿಂದಲೇ ಕಾಡಿ ಬೇಡಿ ತೆಗೆದುಕೊಂಡು ಹೋಗುವುದು ಕಂಡುಬಂತು. ಕೆಲವು ರೈತರು ಜಾನುವಾ ರುಗಳನ್ನು ದೂರದ ರಾಮಾಪುರ ಕೆರೆಗೆ ಹೊಡೆದುಕೊಂಡು ನೀರು ಕುಡಿಸಿಕೊಂಡು ಬರುತ್ತಿದ್ದ ಪರಿಸ್ಥಿತಿನಿರ್ಮಾಣವಾಗಿತ್ತು. ಪಿಡಿಒ, ಜಾನುವಾರುಗಳಜಾತ್ರೆಯಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸಬೇಕಾಗಿದ್ದರೂ ಇತ್ತ ಸುಳಿಯದೇ ಇರುವುದರಿಂದಜಾನುವಾರುಗಳನ್ನು ಮಾರಲು ಬಂದಿರುವ ರೈತರು ಕತ್ತಲಲ್ಲಿಯೇ ಇರುವಂತಾಗಿದೆ.
ಸುಳಿಯದ ಅಧಿಕಾರಿಗಳು :
ಜಾತ್ರೆಯಲ್ಲಿ ಜನರು ಮತ್ತು ಜಾನುವಾರುಗಳಿಗೆ ನೀರಿನ ಸೌಕರ್ಯಕಲ್ಪಿಸಲೆಂದು ಪೂರ್ವಬಾವಿ ಸಭೆಯಲ್ಲಿಒಪ್ಪಿಕೊಂಡಿರುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ಇತ್ತ ಕಡೆ ಸುಳಿಯಲಿಲ್ಲವೆಂದು ಜನರು ಆರೋಪಿಸಿದರು.
ಜಾತ್ರೆಯಲ್ಲಿ ಜನರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಸೌಕರ್ಯಕ್ಕಾಗಿ ವಿವಿಧ ಇಲಾಖೆ ಅಧಿಕಾರಿಗಳಿಗೆಪೂರ್ವಭಾವಿ ಸಭೆಯಲ್ಲಿ ಸೂಚಿಸಲಾಗಿರುತ್ತದೆ. ದಿನವೇ (ಮಂಗಳವಾರ) ನೀರು ಸರಬರಾಜುಮಾಡಬೇಕಾಗಿದ್ದರೂ ಮಾಡಿರಲಿಲ್ಲ. ಬುಧವಾರದಿಂದ ಕ್ರಮ ಕೈಗೊಳ್ಳಲಿದ್ದಾರೆ. ●ಸುಬ್ರಹ್ಮಣ್ಯಂ, ಆವಣಿ ರಾಜಸ್ವ ನಿರೀಕ್ಷಕ
-ಎಂ.ನಾಗರಾಜಯ್ಯ