ಸಿನಿಮಾಗಳ ಶೀರ್ಷಿಕೆ ವಿಭಿನ್ನವಾಗಿದ್ದರೆ ಬೇಗನೇ ಪ್ರೇಕ್ಷಕರ ಗಮನ ಸೆಳೆಯಬಹುದು ಎಂಬ ಲೆಕ್ಕಾಚಾರದೊಂದಿಗೆ ಹೊಸ ಹೊಸ ಸಿನಿಮಾಗಳು ಸೆಟ್ಟೇರುತ್ತಿವೆ.
ಆದರೆ, ಅಂತಿಮವಾಗಿ ಪ್ರೇಕ್ಷಕ ನೋಡುವುದು ಸಿನಿಮಾದ ಕಂಟೆಂಟ್‌ನ್ನಷ್ಟೇ. ಈಗ ಇದೇ ರೀತಿ ವಿಭಿನ್ನ ಟೈಟಲ್‌ನೊಂದಿಗೆ ಸಿನಿಮಾವೊಂದು ಆರಂಭವಾಗಿ, ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಅದು “ಅವಳು ಲೈಲಾ ಅಲ್ಲ, ನಾನು ಮಜ್ನು ಅಲ್ಲ’. ಸಂಪೂರ್ಣ ಹೊಸಬರೇ ಸೇರಿಕೊಂಡು ಮಾಡಿರುವ ಈ ಚಿತ್ರ ಸೆ.08ಕ್ಕೆ ತೆರೆಕಾಣುತ್ತಿದೆ.
‘ ಪೂರ್ಣ ಪ್ರಮಾಣದ ಲವ್‌ಸ್ಟೋರಿಯಾಗಿರುವ ಈ ಚಿತ್ರದ ಮೂಲಕ ಅಜಯ್ ಕುಮಾರ್ ನಾಯಕರಾಗಿ ಎಂಟ್ರಿಕೊಡುತ್ತಿದ್ದಾರೆ. ರಾಯಚೂರು ಮೂಲದ ಅಜಯ್ ಅವರಿಗೆ ಸಿನಿಮಾದಲ್ಲಿ ನಟಿಸಬೇಕೆಂಬ ಕನಸಿತ್ತಂತೆ. ಅದಕ್ಕಾಗಿ ಸಾಕಷ್ಟು ಶ್ರಮಪಟ್ಟ ಅಜಯ್ ಈಗ ಹೀರೋ ಆಗಿದ್ದಾರೆ.
ಚಿತ್ರದ ಬಗ್ಗೆ ಮಾತನಾಡುವ ಅವರು, “ಇದೊಂದು ಹೊಸ ಬಗೆಯ ಲವ್‌ಸ್ಟೋರಿ. ನಮ್ಮ ಲುಕ್, ಮ್ಯಾನರಿಸಂಗೆ ತಕ್ಕಂತೆ ಈ ಸಿನಿಮಾದಲ್ಲಿ ನನ್ನ ಪಾತ್ರ ಸಾಗುತ್ತದೆ. ರೆಗ್ಯುಲರ್ ಶೈಲಿ ಬಿಟ್ಟು ಈ ಸಿನಿಮಾ ಮಾಡಿದ್ದೇವೆ.ಜನರಿಗೆ ಇಷ್ಟವಾಗುತ್ತದೆ ಎಂಬ ವಿಶ್ವಾಸವಿದೆ’ ಎನ್ನುತ್ತಾರೆ. ಈ ಚಿತ್ರವನ್ನು ಯಲ್ಲು ಪುಣ್ಯಕೋಟಿ ನಿರ್ದೇಶಿಸಿದ್ದು, ಸಿನಿಮಾದ ಬಗ್ಗೆ ಖುಷಿಯಿಂದ ಮಾತನಾಡಿದರು.
ಇನ್ನು ಚಿತ್ರದಲ್ಲಿ ನಿಹಾರಿಕ ಹಾಗೂ ಅಶ್ವಿನಿ ನಾಯಕಿಯರು. ಅವರಿಬ್ಬರೂ ಕೂಡಾ ಸಿನಿಮಾದ ಬಿಡುಗಡೆ ಸಮಯದಲ್ಲಿ ಪ್ರಮೋಶನ್‌ಗೆ ಸಹಕರಿಸುತ್ತಿಲ್ಲ ಎಂಬ ಅಳಲು ಚಿತ್ರತಂಡದ್ದು.