Advertisement

ಹಿಮಪಾತ : ಓರ್ವ ಸೈನಿಕ ಸಮಾಧಿ, ಐವರು ಅವಶೇಷಗಳಡಿಯಲ್ಲಿ 

03:06 PM Feb 20, 2019 | |

ಕಿನ್ನೌರ್‌: ಹಿಮಾಚಲ ಪ್ರದೇಶದ ಕಿನ್ನೌರ್‌ ಜಿಲ್ಲೆಯ ನಂಗ್ಯ ಪ್ರಾಂತ್ಯದಲ್ಲಿ ಬುಧವಾರ ಸಂಭವಿಸಿದ ಭಾರೀ ಹಿಮಪಾತದಲ್ಲಿ  ಸಿಲುಕಿ ಓರ್ವ ಸೈನಿಕ ಹುತಾತ್ಮರಾಗಿದ್ದು, ಇನ್ನೂ ಐವರು ಅವಶೇಷಳಡಿಯಲ್ಲಿ ಸಿಲುಕಿರುವ ಬಗ್ಗೆ ವರದಿಯಾಗಿದೆ. 

Advertisement

ಐಟಿಬಿಪಿ ಪೊಲೀಸ್‌ ಪಡೆಗಳು ಅವಶೇಷಳಡಿಯಲ್ಲಿ ಸಿಲುಕಿದವರ ರಕ್ಷಣೆಗಾಗಿ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ  ಎಂದು ಎಎನ್‌ಐ ವರದಿ ಮಾಡಿದೆ. 

ಬೆಳಗ್ಗೆ 11 ಗಂಟೆಯ ವೇಳೆಗೆ ಹಿಮಪಾತ ಸಂಭವಿಸಿದ್ದು, 6 ಮಂದಿ ಯೋಧರು ಹಿಮದಲ್ಲಿ ಹೂತು ಹೋಗಿದ್ದು ಓರ್ವರನ್ನು ರಕ್ಷಿಸಲಾಗಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಅವರು ಕೊನೆಯುಸಿರೆಳೆದಿದ್ದಾರೆ. 

ದುರಂತ ನಡೆದಿರುವ ಸ್ಥಳದಲ್ಲಿ ಈ ಮೊದಲು ಈ ಪ್ರಮಾಣದಲ್ಲಿ ಹಿಮಪಾತ ನಡೆದಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next