Advertisement

 ವಾಹನ ಮಾರುಕಟ್ಟೆ 50 ಐಷಾರಾಮಿ ಕಾರುಗಳು

12:51 AM Jan 27, 2021 | Team Udayavani |

ಹೊಸದಿಲ್ಲಿ/ ಮಣಿಪಾಲ: ಐಷಾರಾಮಿ ಕಾರು ಉತ್ಪಾದಕ ಕಂಪೆನಿಗಳಿಗೆ 2020 ನಿರುತ್ಸಾಹದ ವರ್ಷವಾಗಿತ್ತು. ಹೊಸ ವರ್ಷದಲ್ಲಿ ಈ ಕಂಪೆನಿಗಳು ಹೊಸ ಉತ್ಸಾಹದೊಂದಿಗೆ ಮರಳುವ ಯೋಜನೆ ಹೊಂದಿವೆ.

Advertisement

ಭಾರತದ ಲಕ್ಷುರಿ ಕಾರುಗಳ ವಿಭಾಗದಲ್ಲಿ ಸಿಂಹಪಾಲು ಹೊಂದಿ ರುವ ಮರ್ಸಿಡಿಸ್‌ ಬೆಂಜ್‌, ಬಿಎಂಡಬ್ಲ್ಯು ಮತ್ತು ಆಡಿ ಹಿಂದಿನ ನಷ್ಟ ಗಳಿಂದ ಚೇತರಿಸಿಕೊಳ್ಳುವುದಕ್ಕಾಗಿ 50 ಹೊಸ ಮಾದರಿಯ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸಲಿವೆ.

ಕೋವಿಡ್ ದಿಂದ ಕಳೆದ ವರ್ಷ 30 ಲಕ್ಷ ರೂ.ಗಿಂತ ಅಧಿಕ ಬೆಲೆಯ ಇಂಥ ಕಾರು ಮಾರಾಟ ಕುಸಿದಿತ್ತು. 2019ಕ್ಕೆ ಹೋಲಿ ಸದರೆ ಶೇ. 40ರಷ್ಟು ಮಾರಾಟ ಇಳಿಕೆಯಾಗಿತ್ತು. ಬಿಎಂಡಬ್ಲ್ಯು ಇಂಡಿಯಾ 25, ಬೆಂಜ್‌ 15 ಹೊಸ ಮಾದರಿಗಳನ್ನು ಪರಿಚಯಿಸಲಿವೆ.

ಕರಾವಳಿಯಲ್ಲಿ ಲಕ್ಷುರಿ ಕಾರು ಮಾರಾಟ ;

ದಕ್ಷಿಣ ಕನ್ನಡ :

Advertisement

ಕಂಪೆನಿ             2018    2019     2020

ಆಡಿ                 20        21         2

ಬಿಎಂಡಬ್ಲ್ಯೂ    30        38         29

ಬೆಂಝ್           45        42        26

ಜಾಗ್ವಾರ್‌        12         14        9

ಉಡುಪಿ :

ಕಂಪೆನಿ     2018      2019     2020

 ಆಡಿ                 17         7            1

ಬಿಎಂಡಬ್ಲ್ಯೂ   14         17          9

 ಬೆಂಝ್           17         14         2

Advertisement

Udayavani is now on Telegram. Click here to join our channel and stay updated with the latest news.

Next