Advertisement
ದೊಡ್ಡ ಗಾತ್ರ, ಹೆಚ್ಚಿನ ಸ್ಥಳಾವಕಾಶವುಳ್ಳ ಹೊಸ ವಿವಿಧ ಸೌಲಭ್ಯಗಳನ್ನು ಒಳಗೊಂಡಿದೆ. ಆಕರ್ಷಕ ಎಲ್‌ಇಡಿ ಹೆಡ್ ಲ್ಯಾಂಪ್ ಇದ್ದು, ಫ್ರಂಟ್ ಲೈಟ್ ಗೈಡ್ಸ್ ಮತ್ತು ಆಕರ್ಷಕ ಹಿಂಬದಿಯ ಲ್ಯಾಂಪ್ ಮತ್ತು ಗ್ರ್ಯಾಬ್ ರೇಲ್ ರಿಫ್ಲೆಕ್ಟರ್ ಒಳಗೊಂಡಿದೆ. ಡಿಸ್ಕ್ ಮಾದರಿಯಲ್ಲಿ ಡೈಮಂಡ್ ಕಟ್ ಅಲಾಯ್ ಚಕ್ರಗಳಿದ್ದು, ಇದು ಸ್ಕೂಟರ್‌ನ ಒಟ್ಟಾರೆ ನೋಟವನ್ನು ಹೆಚ್ಚಿಸಲಿದೆ.
Related Articles
Advertisement
ಟಿವಿಎಸ್ ಮೋಟರ್ ಕಂಪನಿಯ ಹಿರಿಯ ಉಪಾ ಧ್ಯಕ್ಷ (ಮಾರ್ಕೆಟಿಂಗ್) ಕಮ್ಯುಟರ್, ಕಾರ್ಪೊರೇಟ್ ಬ್ರಾಂಡ್ ಡೀಲರ್ ಟ್ರಾನ್ಸ್‌ಫಾರ್ಮೆಷನ ಅನಿರುದ್ಧ ಹಲ್ದಾರ್ ಮಾತನಾಡಿ, ಟಿವಿಎಸ್ ಜ್ಯುಪಿಟರ್ ಎಂದಿಗೂ ಜ್ಯಾದಾ ಕಾ ಫಾಯದಾ ಚಿಂತನೆಗೆ ಪೂರಕ ವಾಗಿದ್ದು, ದೇಶದಲ್ಲಿಯೇ ಹೆಚ್ಚು ಪ್ರೀತಿ ಪಾತ್ರ ಸ್ಕೂಟರ್ ಆಗಿದೆ. ಭಾರತೀಯ ಗ್ರಾಹಕರು ಸಂಚಾರ ಪರಿಹಾರಕ್ರಮಗಳ ಹುಡುಕಾಟದಲ್ಲಿ ಇದ್ದಾಗ ಹೊಸತನವನ್ನು ಕೊಡಲು, ಗ್ರಾಹಕರಿಗೆ ಜ್ಯಾದಾ ಸೆ ಭೀ ಜ್ಯಾದಾ ಸೌಲಭ್ಯಗಳನ್ನು ಕೊಡಲು ಪ್ರೇರೇಪಣೆ ನೀಡಿದೆ.
ಸೀಟಿನಡಿಯ ವಿಶಾಲವಾದ ಎರಡು ಹೆಲ್ಮೆಟ್ ಇಡಬಹುದಾದಷ್ಟು ಸಂಗ್ರಹಣಾ ಸ್ಥಳಾವ ಕಾಶ, ಅತಿದೊಡ್ಡದಾದ ಸೀಟು, ಉನ್ನತ ಮೈಲೇಜ್ ಹೊಂದಿದ್ದು, ಆಕರ್ಷಕ ವಿನ್ಯಾಸ ಮತ್ತು ಸೌಲಭ್ಯಗಳು ಗ್ರಾಹಕರಿಗೆ ಸಂಚಾರದ ಪ್ರೀಮಿಯಂ ಅನುಭವ ನೀಡಲಿವೆ ಎಂದು ತಿಳಿಸಿದರು.