Advertisement
ಆರ್ಥಿಕತೆಯಲ್ಲಿನ ಸರಕು ಮತ್ತು ಸೇವೆಗಳ (ಜಿಎಸ್‌ಟಿ) ಮೇಲಿನ ಅಸಮರ್ಪಕವಾದ ಪರಿಣಾಮಕಾರಿ ಬಹುಬೇಡಿಕೆಗಳ ಕೊರತೆಯ ಪರಿಣಾಮದಿಂದಾಗಿ ಉದ್ಯೋಗ ಸಮಸ್ಯೆ ಸಂಭವಿಸುತ್ತದೆ ಎಂದು ಕೇನ್ಸ್‌ನ ಅರ್ಥಶಾಸ್ತ್ರ ಹೇಳುತ್ತದೆ. ಭಾರತವನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ಈ ಸಮಸ್ಯೆಯೂ ಒಂದು ಎನ್ನುವುದನ್ನು ಎಲ್ಲರೂ ಒಪ್ಪಬೇಕಾಗಿದೆ. ಬಹುಶಃ ಈ ಕಾರಣದಿಂದಾಗಿಯೇ ಭಾರತದಲ್ಲಿ ಹಲವು ಭಾರಿ ನಿರುದ್ಯೋಗಿಗಳು ಸರ್ಕಾರದ ವಿರುದ್ಧ ದಂಗೆ ಎಬ್ಬಿಸಿದ್ದನ್ನು ನಾವು ನೆನಪಿಗೆ ತಂದುಕೊಳ್ಳಬಹುದು ಮತ್ತು ಉದ್ಯೋಗವನ್ನು ಅರಸಿಕೊಂಡು ವಿದೇಶದತ್ತ ಸಾಗುವುದನ್ನು ನಾವು ಇಂದಿಗೂ ಕಾಣುತ್ತೇವೆ. ಭಾರತದಂಥ ಯುವಜನಾಂಗ ಹೆಚ್ಚಿರುವ ದೇಶಗಳಲ್ಲಿ ಉದ್ಯೋಗಾವಕಾಶಗಳು ಹೆಚ್ಚಾಗದೆ ಇದ್ದರೆ ಅದು ಹುಟ್ಟಿ ಹಾಕುವ ಸಮಸ್ಯೆಗಳು ಊಹೆಗೂ ನಿಲುಕದಷ್ಟು ತೀವ್ರವಾಗಿರುತ್ತದೆ ಎಂದು ಈಗಾಗಲೇ ಆರ್ಥಿಕ ಸಮಸ್ಯೆ ಖಚಿತವಾಗಿ ಸೂಚಿಸಿದೆ. ಈ ಸಮಸ್ಯೆಗಳ ದಿಕ್ಕು-ದೆಸೆಗಳನ್ನು ಗಮನಿಸಿದ ಕೇಂದ್ರ ಸರ್ಕಾರ ಆರ್ಥಿಕ ತಜ್ಞರ ಜೊತೆಗೆ ಸಮಾಲೋಚನೆ ನಡೆಸಿ ದುಡಿಯುವ ಕೈಗಳಿಗೆ ಕೆಲಸ ನೀಡುವುದೇ ದೇಶದ ಆರ್ಥಿಕ ಬೆಳವಣಿಗೆಯ ಮುಖ್ಯ ಗುರಿಯಾಗಬೇಕು ಎನ್ನುವುದನ್ನು ಮನಗಂಡಿದ್ದು ನಿರುದ್ಯೋಗಿಗಳ ಪಾಲಿಗೆ ಸಂತಸ ತಂದಿರುವುದಂತೂ ಸತ್ಯ. ಜಾಗತೀಕರಣವಾಗಿ ಬೆಳೆಯುತ್ತಿರುವ ಆಟೋಮೊಬೈಲ್ ಉದ್ಯಮ ಕ್ಷೇತ್ರಕ್ಕೆ ಸರ್ಕಾರ ಒತ್ತು ನೀಡುತ್ತಿರುವುದು ಆರ್ಥಿಕ ಬೆಳವಣಿಗೆಯಾಗುದಕ್ಕೆ ಒಳ್ಳೆಯ ಯೋಜನೆಯಾಗಿದೆ.
Related Articles
Advertisement
ಹೀಗಿದ್ದರೂ ಆಟೊಮೊಬೈಲ್ ವಲಯ ದೇಶದಾದ್ಯಂತ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಬಹುಶಃ ಅದಕ್ಕೆ ಸರ್ಕಾರದ ಯೋಜನೆಗಳ ಕಾರ್ಯ ವಿಳಂಬವೂ, ಆ ಯೋಜನೆಯ ಸಮಿತಿಗಳ ನಿರಾಸಕ್ತಿಯೂ ಕಾರಣವಾಗಿರಬಹುದು.
ಕಾರ್ಮಿಕ ಇಲಾಖೆಯ ಅಂಕಿಅಂಶಗಳ ಪ್ರಕಾರ 2017ರ ಅವಧಿಯಲ್ಲಿ ಪ್ರಮುಖ ಎಂಟು ವಲಯಗಳಲ್ಲಿ 1,36,000 ಹೊಸ ಉದ್ಯೋಗಗಳು ಸೃಷ್ಟಿಯಾಗಿದೆಯಾದರೂ ಈ ವರ್ಷ ಭಾರತದಲ್ಲಿ ಮತ್ತೆ ನಿರುದ್ಯೋಗ ಸಮಸ್ಯೆ ಏರಿಕೆಯಾಗಿದೆ ಎಂದು ತಿಳಿಯಬಹುದಾಗಿದೆ. ಇದು ಸರ್ಕಾರಕ್ಕೆ ಬಹು ದೊಡ್ಡ ಸವಾಲಾಗಿ ಪರಿಣಮಿಸಿದ್ದಂತು ನೂರಕ್ಕೆ ನೂರು ನಿಜ. ಎಷ್ಟು ಸಾಧ್ಯವೋ ಅಷ್ಟು ಉದ್ಯೋಗಗಳನ್ನು ನೀಡಬೇಕು ಎನ್ನುವ ದೃಷ್ಟಿಯಲ್ಲಿ ಸರ್ಕಾರ ಅನೇಕ ಯೋಜನೆಗಳನ್ನು ತಂದರೂ ಕೂಡ ಸ್ವಾಭಾವಿಕ ನಿರುದ್ಯೋಗ ಸಮಸ್ಯೆಗಳ ದರವನ್ನು ಮೀರಿ ನಿರುದ್ಯೋಗದ ಪ್ರಮಾಣವನ್ನು ಇಳಿಸುವ ಪ್ರಯತ್ನ ಸಹಜವಾಗಿ ವಿಫಲವಾಗಿದೆ. ಆದರೂ ದೇಶದಾದ್ಯಂತ ಆಟೋಮೊಬೈಲ್ ಇಂಡಸ್ಟ್ರಿಗಳಲ್ಲಿ ಪರಿಸ್ಥಿತಿ ಆಶಾಕಿರಣವಾಗಿ, ವೇಗವಾಗಿ ಬೆಳವಣಿಗೆ ಹೊಂದುತ್ತಿರುವುದನ್ನು ನೋಡಿದರೆ ನಿರುದ್ಯೋಗಿಗಳ ಪಾಲಿಗೆ ಹೊಸ ಬದುಕು ಕಟ್ಟಿಕೊಳ್ಳುವುದಕ್ಕೆ ಉತ್ತಮ ಪ್ಲಾಟ್‌ಫಾರ್ಮ್ ವಾಹನೋದ್ಯಮ ನೀಡುತ್ತದೆ ಎನ್ನುವುದು ಸತ್ಯ.
– ಶ್ರೀರಾಜ್ ಎಸ್. ಆಚಾರ್ಯಆಳ್ವಾಸ್ ಕಾಲೇಜು, ಮೂಡಬಿದಿರೆ