Advertisement

ಕೃಷಿಗೆ ನೆರವಾಗುವ ಸ್ವಯಂಚಾಲಿತ ರೋಬೋಟ್‌

09:36 PM Jun 17, 2019 | Sriram |

ಕುಂದಾಪುರ: ಮೂಡ್ಲಕಟ್ಟೆ ಎಂಜಿನಿಯರಿಂಗ್‌ ಕಾಲೇಜಿನ ಕಂಪ್ಯೂಟರ್‌ ಸೈನ್ಸ್‌ ವಿಭಾಗದ ವಿದ್ಯಾರ್ಥಿಗಳು ಕೃಷಿಸ್ನೇಹಿ “ಅಗ್ರಿಕಲ್ಚರಲ್‌ ಡಾಕ್ಟರ್‌’ ಎನ್ನುವ ಹೊಸ ರೋಬೋಟ್‌ ಒಂದನ್ನು ತಯಾರಿಸಿದ್ದಾರೆ.

Advertisement

ಕಂಪ್ಯೂಟರ್‌ ಸೈನ್ಸ್‌ ವಿಭಾಗದ ಮುಖ್ಯಸ್ಥ ಪ್ರೊ| ಮೆಲ್ವಿನ್‌ ಡಿ’ಸೋಜಾ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಮಂಜುನಾಥ, ಗುರುಚರಣ್‌, ಸಂದೇಶ ಹೆಗ್ಡೆ ಮತ್ತು ಶ್ವೇತಾ ಅವರು ಈ ರೋಬೋಟ್‌ ತಯಾರಿಸಿದ್ದಾರೆ.

ಏನಿದರ ಪ್ರಯೋಜನ
ಈ ರೋಬೋಟ್‌ ಸ್ವಯಂ ಚಾಲಿತವಾಗಿದ್ದು, ಹೊಲದಲ್ಲಿರುವ ಪೈರಿನ ರೋಗವನ್ನು ಪತ್ತೆ ಹಚ್ಚಿ ಅದಕ್ಕೆ ಬೇಕಾಗುವ ಕ್ರಿಮಿನಾಶಕ ಮತ್ತು ಇತರ ಔಷಧಗಳನ್ನು ಸಿಂಪಡಿಸುತ್ತದೆ. ಯಾವುದೇ ಮಾನವನ ಸಹಾಯವಿಲ್ಲದೆ ಕಾರ್ಯನಿರ್ವಹಿಸಲಿದ್ದು, ಅನೇಕ ಉಪಯೋಗಕಾರಿ ಲಕ್ಷಣಗಳನ್ನು ಹೊಂದಿದೆ.

ಮಣ್ಣಿನ ಫಲವತ್ತತೆ ಮತ್ತು ನೀರಿನಾಂಶವನ್ನು ಪತ್ತೆ ಹಚ್ಚುವ ಮಾಹಿತಿಯನ್ನು ನೀಡುತ್ತದೆ. ವೈದ್ಯರ ರೀತಿ ಕಾರ್ಯನಿರ್ವಹಿಸಲಿದ್ದು, ರೈತರು ತಮ್ಮ ಬೆಳೆಗಳಲ್ಲಿ ಕಂಡುಬರುವ ರೋಗಗಳನ್ನು ನಿವಾರಣೆ ಹೇಗೆ ಮಾಡುವುದು ಎನ್ನುವ ಸಮಸ್ಯೆಗೆ ಪರಿಹಾರವಾಗಲಿದೆ. ಇದಕ್ಕೆ ಬೇಕಾಗುವ ವಿದ್ಯುತನ್ನು ಸೌರಶಕ್ತಿಯ ಮೂಲಗಳಿಂದ ಪಡೆಯುವಂತಹ ವ್ಯವಸ್ಥೆಯನ್ನೂ ಮಾಡಲಾಗಿದೆ.

ಈ ರೋಬೋಟ್‌ ಮೇಲೆ ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಪ್ರಬಂಧ ಮಂಡಿಸಿದ್ದು, ಬಹುಮಾನಗಳು ಬಂದಿವೆ. ಬೆಂಗಳೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಕಾನ್ಫರೆನ್ಸ್‌ನಲ್ಲಿ ಕೂಡ ವಿದ್ಯಾರ್ಥಿಗಳು ಪ್ರಬಂಧ ಮಂಡಿಸಿದ್ದು, ಅತ್ಯುತ್ತಮ ಸಂಶೋಧನ ಪ್ರಬಂಧ ಎನ್ನುವ ಪ್ರಮಾಣ ಪತ್ರ ನೀಡಲಾಗಿದೆ. ಬೈಟ್ಸ್‌ ಸಂಸ್ಥೆ, ನಡೆಸುವ ಪ್ರಾಜೆಕ್ಟ್ ಸ್ಪರ್ಧೆಯಲ್ಲಿ ಭಾಗವಹಿಸಿ, ಅಂತಿಮ ಘಟ್ಟಕ್ಕೆ ತಲುಪಿದ್ದು, ಸದ್ಯದಲ್ಲೇ
ಫೈನಲ್‌ ಸ್ಪರ್ಧೆ ನಡೆಯಲಿದೆ.

Advertisement

ಪ್ರಾಜೆಕ್ಟ್‌ನ ರೋಬೋಟ್‌ ಮೇಲ್ಮೈ ಮತ್ತು ಅಂಗಾಂಗಗಳ ತಯಾರಿಕೆಗೆ, ಮೆಕ್ಯಾನಿಕಲ್‌ ವಿಭಾಗದ ಉಪನ್ಯಾಸಕ ಪ್ರೊ| ಪ್ರಶಾಂತ್‌ ಸಹಕರಿಸಿದ್ದು, ವಿದ್ಯಾರ್ಥಿಗಳನ್ನು ಕಾಲೇಜಿನ ಪ್ರಾಂಶುಪಾಲ ಡಾ | ಕಟಯ್ಯ ಜಿ. ಎಸ್‌. ಮತ್ತು ಆಡಳಿತ ಮಂಡಳಿಯ ಅಧ್ಯಕ್ಷ ಸಿದ್ದಾರ್ಥ್ ಜೆ. ಶೆಟ್ಟಿ ಅಭಿನಂದಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next