Advertisement

ಆಟೋ ರಿಕ್ಷಾ- ಕಾರು ಢಿಕ್ಕಿ: ಆಟೋ ಚಾಲಕನಿಗೆ ಗಾಯ

09:42 PM Jul 30, 2023 | Team Udayavani |

ವಿಟ್ಲ: ಆಟೋ ರಿಕ್ಷಾ ಮತ್ತು ಕಾರು ನಡುವೆ ಅಪಘಾತ ಸಂಭವಿಸಿ ಆಟೋ ಚಾಲಕ ಗಾಯಗೊಂಡಿರುವ ಘಟನೆ ಸೂರಿಕುಮೇರು ಜಂಕ್ಷನ್‌ನಲ್ಲಿ ನಡೆದಿದೆ. ಆಟೋ ಚಾಲಕ, ಸೂರಿಕುಮೇರು ನಿವಾಸಿ ಹನೀಫ್‌ ಗಾಯಗೊಂಡಿದ್ದಾರೆ.

Advertisement

ರಿಕ್ಷಾ ಸೂರಿಕುಮೇರಿನಿಂದ ಮಾಣಿ ಕಡೆಗೆ ಸಾಗುತ್ತಿದ್ದಾಗ ಕಾರು ಢಿಕ್ಕಿಯಾಗಿ ಈ ಅವಘಡ ಸಂಭವಿಸಿದೆ. ಈ ಕಾರು ಫರಂಗಿಪೇಟೆಯಲ್ಲಿ ವಾಹನಕ್ಕೆ ಢಿಕ್ಕಿ ಹೊಡೆದು ಬಂದಿತ್ತೆಂದು ನಾಗರಿಕರು ಆಡಿಕೊಳ್ಳುತ್ತಿದ್ದುದು ಕೇಳಿ ಬಂತು. ಕಾರಿನಲ್ಲಿ ಮದ್ಯದ ಬಾಟಲಿ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ.

ಅಪಘಾತದ ಬಳಿಕ ಕಾರಿನ ಚಾಲಕ ಮತ್ತು ಸಾರ್ವಜನಿಕರ ನಡುವೆ ಮಾತಿನ ಚಕಮಕಿಯೂ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next