Advertisement
ವಿಜಯಪುರ ಮಹಾನಗರದಲ್ಲಿ ಈಗಾಗಲೇ ಹಳೆಯ ಆಟೋ ಹಾಗೂ ಟಂಟಂ ಸೇರಿ 4,468 ಆಟೋಗಳಿದ್ದು ಯಾವ ಆಟೋಕ್ಕೂ ಮೀಟರ್ ಅಳವಡಿಕೆ ಇಲ್ಲ. ಬದಲಾಗಿ ನಗರದ ಮಹಾತ್ಮ ಗಾಂಧೀಜಿ ವೃತ್ತವನ್ನು ಕೇಂದ್ರೀಕರಿಸಿಕೊಂಡುನಗರದ ಪ್ರಮುಖ ರಸ್ತೆಯಲ್ಲಿ ನಿಗದಿತ ಯಾವುದೇ ಸ್ಥಳಕ್ಕೆ ಪ್ರಯಾಣಿಸಿದರೂ ಕೇವಲ 10 ರೂ. ನಿಗದಿತ ನಿಖರ ಬಾಡಿಗೆ
ಇದೆ. ಪ್ರಮುಖ ರಸ್ತೆಯ ಸಂಚಾರಕ್ಕೆ 10 ರೂ. ನೀಡಿದರೂ, ಬಡಾವಣೆಯಲ್ಲಿ ಹೋಗಲು ಆಟೋ ಚಾಲಕರು ಕೇಳಿದಷ್ಟು
ಹೆಚ್ಚಿನ ಹಣ ನೀಡುವ ವ್ಯವಸ್ಥೆ ಇದೆ.
ಮೀಟರ್ ಅಳವಡಿಕೆ ಮಾಡಿಕೊಂಡಿರುವ ಆಟೋ ಹತ್ತಿದ ಪ್ರಯಾಣಿಕರು ಮೊದಲ 1.5 ಕಿ.ಮೀ. 15 ರೂ. ಹಾಗೂ ಮೊದಲ 3 ಕಿ.ಮೀ. 25 ರೂ. ಬಾಡಿಗೆ ಭರಿಸುವ ಎರಡು ಹಂತದಲ್ಲಿ ನಂತರದ ಪ್ರತಿ ಕಿ.ಮೀ. ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಈ ದರ ಒಂದೂವರೆ ಪಟ್ಟಾಗುತ್ತದೆ. ಅಂದರೆ ಕ್ರಮವಾಗಿ 22.50 ರೂ. ಹಾಗೂ 37.50 ರೂ. ಭರಿಸಬೇಕು ಎಂದು ನಿಗದಿ ಮಾಡಿವೆ. ಹೊಸ ಆಟೋ ಕೊಂಡು ನೋಂದಣಿ ಮಾಡಿಸುವಾಗ ಡಿಜಿಟಲ್ ಮೀಟರ್ ಅಳವಡಿಕೆ ಕಡ್ಡಾಯವಾಗಿದೆ. ಈ ಕಾರಣಕ್ಕೆ ಮೀಟರ್ ಅಳವಡಿಕೆ ಅನಿವಾರ್ಯವಾಗಿದೆ. ಪ್ರಯಾಣಿಕರು ಈಗಿರುವ 10 ರೂ. ಚಾರ್ಜ್ ನೀಡುವುದೇಕ್ಕೇ ಜಗಳ ತೆಗೆಯುತ್ತಿದ್ದು, ಮೀಟರ್ ಚಾರ್ಜ್ ನೀಡಲು ಒಪ್ಪುತ್ತಿಲ್ಲ. ಹೀಗಾಗಿ ಮೀಟರ್ ಅಳವಡಿಕೆ ಸಾಂಕೇತಿಕವಾಗಿದ್ದು, ಪ್ರಯಾಣಿಕರಿಗೂ ಇದರಿಂದ ಒಳಿತಾಗಿಲ್ಲ, ನಮಗೂ ಇದರಿಂದ ಲಾಭವಾಗಿಲ್ಲ ಎಂಬುದು ಆಟೋ ಚಾಲಕರ ಗೊಣಗಾಟ.
Related Articles
ಬಡವರಿಗೆ ಅದರಲ್ಲೂ ನಿತ್ಯವೂ ಕೂಲಿಗೆ ಓಡಾಡುವ ಬಡ ಪ್ರಯಾಣಿಕರಿಗೆ ಕನಿಷ್ಠ 25 ರೂ. ಮೀಟರ್ ಚಾರ್ಜ್ ನೀಡುವಷ್ಟು ಶಕ್ತಿ ಖಂಡಿತಾ ಇಲ್ಲ. ಮಹಾನಗರ ಪಾಲಿಕೆ ಆಗಿದ್ದರೂ ವಿಜಯಪುರ ಮಹಾನಗರ ಮಾತ್ರವಲ್ಲ ಇಡಿ
ಜಿಲ್ಲೆಯೇ ಬಡವರಿಂದ ಕೂಡಿದೆ. ಈಗಿರುವ 10 ರೂ. ಬಾಡಿಗೆ ನೀಡುವುದಕ್ಕೆ ಗೊಣಗುತ್ತಿದ್ದು ಮೀಟರ್ ಅಳವಡಿಕೆ ಬಾಡಿಕೆ ನೀಡಲು ಸಾಧ್ಯವಿಲ್ಲ ಎಂಬುದು ಪ್ರಯಾಣಿಕರ ದೂರು.
Advertisement