ಮನೆಯಲ್ಲಿ ಯಜಮಾನರಿಲ್ಲ; ಕಿರಾಣಿ, ತರಕಾರಿ ತಂದಾಗಿಲ್ಲ; ಅಕ್ಕಿ, ಬೇಳೆ-ಕಾಳು ಖಾಲಿಯಾಗಿದೆ. ಏನು ಮಾಡೋದು ಎಂದು ಹೋಮ್ ಮಿನಿಸ್ಟರ್’ ಚಿಂತಿಸಿಕುಳಿತಿರುವ ಕಾಲ ಬದಲಾಗಿದೆ. ಮನೆ ನಿರ್ವಸುವ ಹೆಣ್ಣು ಅರ್ಥತ್ ಧರ್ಮಪತ್ನಿ ಪತಿ ಮನೆಯಲ್ಲಿಲ್ಲ ಎಂದು ಕಾದು ಕುಳಿತಿರುವುದಿಲ್ಲ. ಅವಲಂಬನೆಯ ದಿನಗಳನ್ನು ಮೀರಿ ಬದುಕುತ್ತಿರುವ ಆಕೆ ಅದೆಲ್ಲ ಕೆಲಸಗಳನ್ನು ತಾನೇ ಮಾಡಿಕೊಳ್ಳುತ್ತಾಳೆ.
ಮಕ್ಕಳನ್ನೂ ತನ್ನೊಟ್ಟಿಗೇ ಕರೆದುಕೊಂಡು ಮಾರುಕಟ್ಟೆಗೆ ಹೋಗಿ ಅಗತ್ಯ ಸಾಮಗ್ರಿಗಳನ್ನೆಲ್ಲ ತಂದುಕೊಳ್ಳುತ್ತಾಳೆ. ನಗರ ಹಾಗೂ ಪಟ್ಟಣ ಪ್ರದೇಶಗಳ ಹೆಚ್ಚಿನ ಮನೆಗಳಲ್ಲಿ ಇದು ಅನಿವಾರ್ಯವೂ ಆಗಿರುತ್ತದೆ. ಇಂಥ ಅಂಶಗಳನ್ನೇ ಗುರಿಯಾಗಿಸಿಕೊಂಡು ಗ್ರಾಹಕರ ಬೇಡಿಕೆಗೆ ತಕ್ಕಂತೆ ಪುರುಷ ಹಾಗೂ ಮಹಿಳೆ ಸಲೀಸಾಗಿ ಓಡಿಸಬಲ್ಲ ಸ್ಕೂಟರ್‌ಗಳನ್ನು ಕಂಪನಿಗಳು ಇತ್ತೀಚೆಗಿನ ದಿನಗಳಲ್ಲಿ ಪರಿಚುಸುತ್ತಲೇ ಬಂದಿವೆ.
ಇಂಥ ಸ್ಕೂಟರ್‌ಗಳ ತಯಾರಿಕೆಗೂ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿವೆ. ಇವುಗಳಲ್ಲಿ “ಕ್ಲಿಕ್’ ಕೂಡ ಒಂದು ಉತ್ತಮ ಸ್ಕೂಟರ್. ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ(ಎಚ್‌ಎಂಎಸ್‌ಐ) ಇದನ್ನು ನಾಲ್ಕು ತಿಂಗಳು ಹಿಂದಷ್ಟೇ ಮಾರುಕಟ್ಟೆಗೆ ಪರಿಚಯಿಸಿದೆ. ಅಷ್ಟೇ ಅಲ್ಲ, “ಕ್ಲಿಕ್’ ನಿರೀಕ್ಷೆಯಂತೆ ಮಾರುಕಟ್ಟೆಯಲ್ಲೂ ಕ್ಲಿಕ್ ಆಗಿದೆ. ಬ್ರಾಂಡ್ ಕಂಪನಿಯ ಸ್ಕೂಟರ್ ಅನ್ನೋದು ಒಂದಾದರೆ, ಮಲ್ಟಿ ಪರ್ಪಸ್ ಸ್ಕೂಟರ್ ಅನ್ನೋದು ಮೆಚ್ಚುಗೆಗೆ ಇನ್ನೊಂದು ಕಾರಣವಾಗಿದೆ.
ವಿನ್ಯಾಸ ಅಚ್ಚುಮೆಚ್ಚು: ಸದ್ಯ ರಸ್ತೆಯ ಮೇಲೆ ಈ ಪ್ರಕಾರದ ಸೆಗ್ಮೆಂಟ್‌ನ ಅನೇಕ ಸ್ಕೂಟರ್‌ಗಳು ಓಡಾಡುತ್ತಿರುವ ಕಾರಣ ತಕ್ಷಣಕ್ಕೆ ಕ್ಲಿಕ್‌ನ ವಿನ್ಯಾಸ ಆಕರ್ಷಣೀಯ ಅನ್ನಿಸದು. ಆದರೆ ಯಾವುದೇ ಸ್ಕೂಟರ್‌ಗೆ ಕಡಿಮೆ ಏನಿಲ್ಲ ಎನ್ನುವಂತೆ ವಿನ್ಯಾಸಗೊಳಿಸಲಾಗಿದೆ. ಹೀರೋ ಪ್ಲೆಸರ್, ಟಿವಿಎಸ್ ಸ್ಕೂಟಿ ಜೆಸ್ಟ್ 110 ಮತ್ತು ಪೆಪ್ ಪ್ಲಸ್, ಹೋಂಡಾ ಆ್ಯಕ್ಟೀವಾ ಐ, ಒಕಿನವಾ ರಿಡ್ಜ್ ಹಾಗೂ ಲೊಹಿಯಾ ಓಮಸ್ಟಾರ್ ಸ್ಕೂಟರ್‌ಗಳಿಗೆ ಸ್ಪರ್ಧೆಯೊಡ್ಡುವ ವಿನ್ಯಾಸವನ್ನು ಕ್ಲಿಕ್ ಹೊಂದಿದೆ.
ಆ್ಯಕ್ಟೀವಾ ಸಾಮರ್ಥ್ಯ: ಹೌದು, ಹೋಂಡಾ ಆ್ಯಕ್ಟೀವಾ 4ಜಿ ಹಾಗೂ ಡಿಯೋದಲ್ಲಿರುವ 110ಸಿಸಿ ಸಾಮರ್ಥ್ಯದ ಎಂಜಿನ್ ಬಳಕೆ ಮಾಡಿರುವ ಕಾರಣ ಕ್ಲಿಕ್ ಓಟದಲ್ಲಿ ಈ ಮಾದರಿ ಸೆಗ್ಮೆಂಟ್‌ನ ಯಾವುದೇ ಸ್ಕೂಟರ್‌ಗಳಿಗೆ ಸವಾಲೊಡ್ಡಬಲ್ಲದು. 8.94ಎನ್‌ಎಂ ಹಾಗೂ 500ಆರ್‌ಪಿಎಂ ಇದರದ್ದು. 4ಸ್ಟ್ರೋಕ್ ಎಂಜಿನ್ ಸಿವಿಟಿ ಸ್ವಯಂಚಾಲಿತ ಗೇರ್ ಬಾಕ್ಸ್ ಇದರದ್ದಾಗಿದೆ.
ಫ್ಯಾಮಿಲಿ ಬೆಸ್ಟ್ ಚಾಯ್ಸ್: ಸಣ್ಣದೊಂದು ಕುಟುಂಬ ಮನೆ ಬಳಕೆಗೆ ಅನುಕೂಲಕರವಾದ ಸ್ಕೂಟರ್ ಬಯಸಿದಲ್ಲಿ ಟಾಪ್ 5 ಆಯ್ಕೆಯಲ್ಲಿ ಇದೂ ಕೂಡ ಒಂದಾಗಿರಲಿದೆ. ಯಾಕೆಂದರೆ ಮಾರುಕಟ್ಟೆಯಿಂದ ಮನೆ ಬಳಕೆ ವಸ್ತುಗಳನ್ನು ಕೊಂಡು ತರಲು ಅನುಕೂಲವಾಗುವ ಕ್ಯಾರಿಯರ್ ಅಳವಡಿಸಿಕೊಳ್ಳಬಹುದಾಗಿದೆ. ಅಷ್ಟೇ ಅಲ್ಲ ಇದಕ್ಕೆ ತಕ್ಕುದಾದ ಮುಂಭಾಗದ ಫೂಟ್‌ರೆಸ್ಟ್ ವಿನ್ಯಾಸಗೊಳಿಸಲಾಗಿದೆ. ಜತೆಗೆ ಇಬ್ಬರು ಆರಾಮವಾಗಿ ಕುಳಿತು ರೈಡ್ ಮಾಡಬಹುದಾದ ಸೀಟನ್ನು ಕ್ಲಿಕ್ ಹೊಂದಿದೆ. 10 ಇಂಚಿನ ಸ್ಟೀಲ್ ವೀàಲ್ ಇದಕ್ಕೆ ಸಹಕಾರಿಯಾಗಬಲ್ಲ ಸಾಮರ್ಥ್ಯದ್ದಾಗಿದೆ.
ಹೈಲೈಟ್ಸ್
– ಗರಿಷ್ಠ ವೇಗ ಗಂಟೆಗೆ 83ಕಿಲೋ ಮೀಟರ್
– ಕರ್ಬ್ ವೇಟ್ 102 ಕಿಲೋಗ್ರಾಂ
– ಇಂಧನ ಶೇಖರಣೆ ಸಾಮರ್ಥ್ಯ 3.5 ಲೀಟರ್
– ಮೈಲೇಜ್ ಪ್ರತಿ ಲೀಟರ್‌ಗೆ 54 ಕಿಲೋ ಮೀಟರ್
– ಆನ್‌ರೋಡ್ ದರ 52-53 ಸಾರ ರೂ.
* ಅಗ್ನಿಹೋತ್ರಿ