ಕೊರಟಗೆರೆ: ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಹೊನ್ನಾರನಹಳ್ಳಿ ಗ್ರಾಮದಲ್ಲಿ ಪ್ರಯಾಣಿಕರನ್ನು ಆಟೋಗೆ ಹತ್ತಿಸಿಕೊಳ್ಳುವ ವಿಚಾರಕ್ಕೆ ಲಕ್ಷ್ಮೀಕಾಂತ್ ಎಂಬಾತ ಕಲ್ಲಿನಿಂದ ಆನಂದ್ ಕುಮಾರ್ ತಲೆಗೆ ಹೊಡೆದು ಗಾಯಗೊಳಸಿರುವ ಘಟನೆ ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ರಿಕ್ಷಾಕ್ಕೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಆನಂದ್ ಕುಮಾರ್ ತಲೆಗೆ ಲಕ್ಷ್ಮೀಕಾಂತ್ ಕಲ್ಲಿನಿಂದ ಹೊಡೆದು ಗಂಭೀರವಾಗಿ ಗಾಯಗೊಳಿಸಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿ ಗಾಯಾಳು ಆನಂದ್ ಕುಮಾರ್ ನೀಡಿದ ದೂರಿನ ಮೇರೆಗೆ ಆರೋಪಿ ಲಕ್ಷ್ಮೀಕಾಂತ್ ನನ್ನು ಪೋಲಿಸರು ಬಂಧಿಸಿದ್ದಾರೆ.
ಕೊರಟಗೆರೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪಿಎಸ್ಐ ಪ್ರದೀಪ್ ಸಿಂಗ್ ಎಎಸ್ಐ ಮಂಜುನಾಥ್, ಮುಖ್ಯಪೇದೆಗಳಾದ ಸಂಜೀವ್, ರಂಗರಾಜು, ಜಯಪ್ರಕಾಶ್ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
Related Articles
ಇದನ್ನೂ ಓದಿ: Road Mishap: ಬೈಕ್- ಕ್ಯಾಂಟರ್ ನಡುವೆ ಭೀಕರ ಅಪಘಾತ: ಪತಿ ಸ್ಥಳದಲ್ಲೇ ಮೃತ್ಯು, ಪತ್ನಿ ಗಂಭೀರ