Advertisement

ಆಟೋ ಚಾಲಕ ಮಾಲೀಕರ ಪ್ರತಿಭಟನೆ

04:17 PM Feb 18, 2020 | Team Udayavani |

ಕುಮಟಾ: ಕಳೆದ ಎರಡು ದಿನಗಳಿಂದ ತಾಲೂಕಿನ ಹೊಳೆಗದ್ದೆ ಟೋಲ್‌ ಗೇಟ್‌ನಲ್ಲಿ ಸ್ಥಳೀಯ ವಾಹನಗಳಿಗೂ ಐಆರ್‌ಬಿ ಕಂಪೆನಿ ಶುಲ್ಕ ವಸೂಲಿ ಮಾಡುತ್ತಿರುವುದನ್ನು ವಿರೋಧಿಸಿ ಟ್ಯಾಕ್ಸಿ ಚಾಲಕ ಮಾಲಕರ ಸಂಘ, ಮ್ಯಾಕ್ಸಿ ಕ್ಯಾಬ್‌ ಚಾಲಕ ಮಾಲಕರ ಸಂಘ, ಲಗೇಜ್‌ ರಿಕ್ಷಾ ಚಾಲಕ ಮಾಲಕರ ಸಂಘ ಹಾಗೂ ಸ್ಥಳೀಯರು ಸೋಮವಾರ ಟೋಲ್‌ ಕಚೇರಿಗೆ ಮುತ್ತಿಗೆ ಹಾಕಿ, ಪ್ರತಿಭಟನೆ ನಡೆಸಿದರು.

Advertisement

ಕಾಮಗಾರಿ ಪೂರ್ಣಗೊಳ್ಳದೇ ಟೋಲ್‌ ವಸೂಲಿಗೆ ಮುಂದಾಗಿರುವ ಐಆರ್‌ಬಿ ಕಂಪನಿ ನಡೆಯನ್ನು ವಿರೋಧಿಸಿ, ಕರವೇ ಜಿಲ್ಲಾ ಘಟಕದ ವತಿಯಿಂದ ಕೆಲ ದಿನಗಳ ಹಿಂದೆ ಪ್ರತಿಭಟನೆ ನಡೆಸಲಾಗಿತ್ತು. ಈ ವೇಳೆ ಕಂಪೆನಿ ಅಧಿಕಾರಿಗಳೊಂದಿಗೆ ಸಾಕಷ್ಟು ಚರ್ಚೆ ನಡೆಸಿದ ನಂತರದಲ್ಲಿ ಸ್ಥಳೀಯ ಕೆ.ಎ. 47 ಹಾಗೂ ಕೆ.ಎ. 30 ನೋಂದಣಿ ವಾಹನಗಳಿಗೆ ಶುಲ್ಕ ವಿನಾಯಿತಿ ನೀಡುವುದಾಗಿ ತಿಳಿಸಿದ್ದರು. ಅಲ್ಲದೇ, ಟೋಲ್‌ ನಾಕಾ ಬಳಿ ಫಲಕವನ್ನೂ ಹಾಕಲಾಗಿತ್ತು. ಆದರೆ ಮಾತಿನಂತೆ ನಡೆದುಕೊಳ್ಳದ ಐಆರ್‌ಬಿ ಕಂಪೆನಿ ಏಕಾಏಕಿ ಭಾನುವಾರ ಮುಂಜಾನೆಯಿಂದಸ್ಥಳೀಯ ವಾಹನಗಳಿಂದಲೂ ಟೋಲ್‌ ಆಕರಣೆಗೆ ಮುಂದಾಗಿದೆ. ಕಂಪನಿಯ ಈ ನಡೆಯನ್ನು ವಿರೋಧಿಸಿ, ಸ್ಥಳೀಯ ವಾಹನಿಗರು ಹಾಗೂ ವಿವಿಧ ವಾಹನಗಳ ಚಾಲಕ ಮಾಲಕರ ಸಂಘದವರು ಟೋಲ್‌ ಕಚೇರಿ ಹೊರಗೆ ಮುತ್ತಿಗೆ ಹಾಕಿ, ಪ್ರತಿಭಟನೆ ನಡೆಸಿದರು.

ಈ ವೇಳೆ ಪ್ರತಿಭಟನಾ ಸ್ಥಳಕ್ಕೆ ತಹಶೀಲ್ದಾರ್‌ ಮೇಘರಾಜ ನಾಯ್ಕ ಭೇಟಿ ನೀಡಿ, ಐಆರ್‌ಬಿ ಕಂಪೆನಿ ಅಧಿಕಾರಿಗಳೊಂದಿಗೆ ಚರ್ಚಿಸಿ, ಸಮಸ್ಯೆಗೆ ಪರಿಹಾರ ಹುಡುಕಿಕೊಳ್ಳುವ ಬಗೆಗೆ ಭರವಸೆ ನೀಡಿದರು. ನಂತರದಲ್ಲಿ ಸೋಮವಾರ ಒಂದು ದಿನಗಳ ಕಾಲ ಶುಲ್ಕ ವಸೂಲಾತಿಯಲ್ಲಿ ರಿಯಾಯಿತಿ ನೀಡಲು ಒಪ್ಪಿಗೆ ಸೂಚಿಸಿದ ಐಆರ್‌ಬಿ ಅಧಿಕಾರಿಗಳು, ಈ ವಿಷಯವಾಗಿ ಮನವಿ ಪ್ರತಿ ನೀಡುವಂತೆ ಪ್ರತಿಭಟನಾಕಾರರಿಗೆ ತಿಳಿಸಿ, ಆ ಪ್ರತಿಯನ್ನು ಮೇಲಧಿಕಾರಿಗಳಿಗೆ ಕಳುಹಿಸಿ ಮಂಗಳವಾರ ಮೇಲಧಿಕಾರಿಗಳಿಂದ ಆದೇಶ ಹೊರಬರುತ್ತಲೇ ಮುಂದಿನ ವಿಷಯವನ್ನು ತಿಳಿಸುವುದಾಗಿ ಹೇಳಿದರು.

ಅಧಿಕಾರಿಗಳ ಮಾತಿಗೆ ಸಮ್ಮತಿ ಸೂಚಿಸಿದ ಪ್ರತಿಭಟನಾಕಾರರು ಮಂಗಳವಾರ ಅಧಿಕೃತ ಆದೇಶ ಹೊರಬರುವವರೆಗೆ ಪ್ರತಿಭಟನೆ ಮುಂದೂಡುವುದಾಗಿ ಎಚ್ಚರಿಸಿ, ವಾಪಸ್ಸಾದರು. ನಂತರ ಮಾಧ್ಯಮ ದವರೊಂದಿಗೆ ಜೆಡಿಎಸ್‌ ಮುಖಂಡ ಸೂರಜ ನಾಯ್ಕ ಸೋನಿ ಮಾತನಾಡಿ, ಐಆರ್‌ಬಿ ಕಂಪೆನಿ ಟೋಲ್‌ ವಸೂಲಿಗೆ ಮುಂದಾಗಿರುವುದು ಜನಸಾಮಾನ್ಯರಿಗೆ ಮಾಡುತ್ತಿರುವ ಅನ್ಯಾಯ. ಅದರಲ್ಲೂ ಸ್ಥಳಿಯರಿಂದ ಹಣ ವಸೂಲಿ ಮಾಡಲೇಬಾರದು. ಕುಮಟಾ ಹೊನ್ನಾವರದ ಮಧ್ಯ ಈವರೆಗೆ ಏ. 40 ರಷ್ಟು ಕಾಮಗಾರಿಯೂ ನಡೆದಿಲ್ಲ. ಯಾವುದೇ ಕಾರಣಕ್ಕೂ ಸ್ಥಳಿಯರು ಯಾರೂ ಹಣ ಪಾವತಿಸಬಾರದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next