Advertisement

“ಸ್ವತ್ಛತೆ ಅರಿವಿನಿಂದ ಮಲೇರಿಯಾ ನಿಯಂತ್ರಣ’

12:16 PM Apr 28, 2017 | Team Udayavani |

ಉಡುಪಿ: ಮಲೇರಿಯಾ ಪ್ರಕರಣಗಳು ಕಡಿಮೆಯಾಗುತ್ತಿರುವುದು ಆರೋಗ್ಯದಾಯಕ ಬೆಳವಣಿಗೆ. ಆದರೂ ಸಂಪೂರ್ಣ ತಡೆಗಟ್ಟುವಲ್ಲಿ ವಿಫ‌ಲವಾಗಿದ್ದೇವೆ. ನಾವು ಸ್ವತ್ಛತೆಯ ಬಗ್ಗೆ ಆಸಕ್ತಿ ವಹಿಸಿದರೆ ಖಂಡಿತ ಈ ರೋಗದ ನಿಯಂತ್ರಣ ಸಾಧ್ಯ. ಗ್ರಾಮೀಣ ಪ್ರದೇಶ, ನಗರ ಪ್ರದೇಶಗಳಲ್ಲಿ ಈ ಬಗ್ಗೆ ಅರಿವು ಮೂಡಿಸುವ ಕಾರ್ಯ ಹೆಚ್ಚಾಗಲಿ ಎಂದು ಜಿ. ಪಂ. ಅಧ್ಯಕ್ಷ ದಿನಕರ ಬಾಬು ಹೇಳಿದರು. 

Advertisement

ಅವರು ಗುರುವಾರ ಜಿಲ್ಲಾಡಳಿತ, ಜಿ. ಪಂ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ವಿಭಾಗದ ಸಂಯುಕ್ತಾಶ್ರಯದಲ್ಲಿ ಅಜ್ಜರಕಾಡಿನ ಐಎಂಎ ಭವನದಲ್ಲಿ ನಡೆದ ವಿಶ್ವ ಮಲೇರಿಯಾ ದಿನಾಚರಣೆ ಯನ್ನು ಉದ್ಘಾಟಿಸಿ ಮಾತನಾಡಿದರು. 

ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ ಮಾತನಾಡಿ ಇತ್ತೀಚಿನ ವರ್ಷಗಳಲ್ಲಿ ಮಲೇರಿಯಾ ತನ್ನ ಹಿಂದಿನ ಭೀಕರತೆಯನ್ನು ಕಳೆದುಕೊಂಡಿದೆ. ಭಾರತ ತಾಂತ್ರಿಕತೆಯಲ್ಲೂ ಮುಂದುವರಿಯುತ್ತಿದ್ದು, ಅದರಿಂದ ಇಂತಹ ರೋಗಗಳ ನಿರ್ಮೂಲನೆ ಸಾಧ್ಯವಾಗುತ್ತಿದೆ. ಆದರೆ ಮತ್ತೂಂದೆಡೆಯಿಂದ ಹೊಸ ಹೊಸ ರೋಗಗಳು ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ. ವೈದ್ಯರು, ಆಸ್ಪತ್ರೆ ಸಿಬಂದಿ ಒಳ್ಳೆಯ ರೀತಿಯಲ್ಲಿ ರೋಗಿಗಳೊಂದಿಗೆ ವರ್ತಿಸಿದರೆ ಶೇ. 25ರಷ್ಟು ರೋಗ ಗುಣವಾದಂತೆ ಎಂದರು.
 
ನಗರಸಭಾಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸರ್ಜನ್‌ ಡಾ| ಮಧುಸೂದನ್‌ ನಾಯ್ಕ ಉಪಸ್ಥಿತರಿದ್ದರು. 

ಒಳಿತಿಗಾಗಿ ಮಲೇರಿಯಾ ಕೊನೆಗೊಳಿಸಿ ಎನ್ನುವ ಘೋಷ ವಾಕ್ಯದಡಿ ಆರಂಭವಾದ ಈ ಜಾಥವನ್ನು ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್‌ ರಾವ್‌ ಉದ್ಘಾಟಿಸಿದರು. ಉಡುಪಿಯ ಮದರ್‌ ಆಫ್ ಸಾರೋ ಚರ್ಚ್‌ ಆವರಣದಿಂದ ಐಎಂಎ ಭವನದವರೆಗೆ ನಡೆದ ಜಾಥದಲ್ಲಿ ಸ. ಕಿ. ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರ, ನ್ಯೂ ಸಿಟಿ ಆಫ್ ನರ್ಸಿಂಗ್‌, ವಿದ್ಯಾರತ್ನ ಆಫ್ ನರ್ಸಿಂಗ್‌, ಚ್ಯವನ ಇನ್‌ಸ್ಟಿಟ್ಯೂಟ್‌ ಆಫ್ ಪ್ಯಾರಾ ಮೆಡಿಕಲ್‌ ಸೈಯನ್ಸ್‌, ಲೋಂಬಾರ್ಡ್‌ ಮೆಮೋರಿಯಲ್‌ ಸ್ಕೂಲ್‌ ಆಫ್ ನರ್ಸಿಂಗ್‌ನ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. 

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ| ಪ್ರೇಮಾನಂದ ಸ್ವಾಗತಿಸಿದರು. 

Advertisement

“ಮಲೇರಿಯಾ ಪ್ರಕರಣ ಇಳಿಕೆ’
ಕರಾವಳಿ ಪ್ರದೇಶಗಳಾದ ಉಡುಪಿ, ದ.ಕನ್ನಡ ಜಿಲ್ಲೆಗಳಲ್ಲಿ ಮಲೇರಿಯಾ ಪ್ರಕರಣ ಹೆಚ್ಚಿದ್ದು, ಅದರಲ್ಲೂ ಪ್ರಮುಖವಾಗಿ ಉಡುಪಿ ನಗರ, ಮಲ್ಪೆಯಂತಹ ಪ್ರದೇಶಗಳಲ್ಲಿ ಈ ರೋಗದ ಪ್ರಮಾಣ ಮತ್ತಷ್ಟು ಜಾಸ್ತಿಯಿದೆ. ನಿಂತ ನೀರು, ವಲಸೆ ಕಾರ್ಮಿಕರಿಂದ ಈ ರೋಗ ಹರಡುವ ಸಾಧ್ಯತೆ ಹೆಚ್ಚಿದೆ. ವಾರಕ್ಕೊಮ್ಮೆ ಡ್ರೈ ಡೇ ಎಂದು ಮಾಡಿ ನೀರು ನಿಲ್ಲದಂತೆ ತಡೆಗಟ್ಟಿ. ವಲಸೆ ಕಾರ್ಮಿಕರು ಆರಂಭದಲ್ಲೇ ರಕ್ತ ಪರೀಕ್ಷೆ ನಡೆಸಬೇಕು. ಕಳೆದ 10 ವರ್ಷಗಳಲ್ಲಿ ಜಿಲ್ಲೆಯಲ್ಲಿ ಮಲೇರಿಯಾ ಪ್ರಕರಣಗಳು ಗಣನೀಯವಾಗಿ ಇಳಿಕೆಯಾಗಿವೆ. 2007 ರಲ್ಲಿ 1293 ಇದ್ದರೆ, 2012ರಲ್ಲಿ ಅ.ತೀ ಹೆಚ್ಚು 2217 ಪ್ರಕರಣ ಕಂಡು ಬಂದರೆ ಆ ಬಳಿಕ ಇಳಿಕೆ ಕಂಡು ಕಳೆದ ವರ್ಷ 1168 ಪ್ರಕರಣವಷ್ಟೇ ಕಂಡು ಬಂದಿದೆ. ಈ ವರ್ಷ 74 ಪ್ರಕರಣವಷ್ಟೇ ಪತ್ತೆಯಾಗಿವೆ. ಕಳೆದ ವರ್ಷ ಮಾರ್ಚ್‌ ವರೆಗೆ 214 ಹಾಗೂ 2015ರಲ್ಲಿ 178 ಪ್ರಕರಣ ಕಂಡು ಬಂದಿತ್ತು ಎಂದು ಜಿಲ್ಲಾ ಆರೋಗ್ಯಧಿಕಾರಿ ಡಾ| ರೋಹಿಣಿ ಮಾಹಿತಿ ನೀಡಿದರು.
 

Advertisement

Udayavani is now on Telegram. Click here to join our channel and stay updated with the latest news.

Next