ಗ್ರಾಮಸ್ಥರು ಪ್ರತಿಷ್ಠಾಪನೆ ಮಾಡಿದ್ದಾರೆ. ಸಾರ್ವಜನಿಕರ ಸ್ಥಳದಲ್ಲಿ ಗಣೇಶ ಮೂರ್ತಿಯನ್ನು
ಪ್ರತಿಷ್ಠಾಪಿಸುವುದು ಸಹಜ. ಈ ಗ್ರಾಮದಲ್ಲಿ ಕೆರೆ ಮಧ್ಯೆ ಪ್ರತಿಷ್ಠಾಪಿಸಿರುವುದು ವಿಶೇಷವಾಗಿದೆ. ಮರದ ಪೋಲುಗಳ ಸಹಾಯದಿಂದ ಚಪ್ಪರ ನಿರ್ಮಿಸಿ ಗಣೇಶನನ್ನು ಪ್ರತಿಷ್ಠಾಪಿಸಿದ್ದಾರೆ. ಗ್ರಾಮಸ್ಥರು ಗಣೇಶನ ಬಳಿಗೆ ಹೋಗಿ ಪೂಜೆ ಸಲ್ಲಿಸಲು ಅನುಕೂಲ ಮಾಡಿಕೊಡುವುದರ ಜೊತೆಗೆ ವಿದ್ಯುತ್ ದೀಪಾಂಲಕಾರವನ್ನೂ ಮಾಡಲಾಗಿದೆ. ರಾತ್ರಿ ವೇಳೆ ಈ ಸ್ಥಳ ನೋಡುಗರ ಕಣ್ಣಿಗೆ ಹಬ್ಬವನ್ನುಂಟು ಮಾಡಿದೆ. ಗ್ರಾಮದಲ್ಲಿ ಕೆರೆ ಬತ್ತಿ ಹೋಗಿದ್ದ ಹಿನ್ನೆಲೆಯಲ್ಲಿ ಕೆರೆಗೆ ನೀರು ತುಂಬಿ ಅಂತರ್ಜಲ ವೃದ್ಧಿಯಾಗಲೆಂಬ ದೃಷ್ಟಿಯಿಂದ ಕೆರೆಯ ಮಧ್ಯೆದಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಿ ದಿನನಿತ್ಯ
ಪೂಜೆ ಸಲ್ಲಿಸುತ್ತಿದ್ದಾರೆ. ಗ್ರಾಮದ ರೈತರಿಗೆ ಬಂದಿರುವ ಕಷ್ಟ-ಕಾರ್ಪಣ್ಯಗಳು ದೂರವಾಗಲಿ. ವಿಶ್ವೇಶ್ವರಯ್ಯ ನಾಲೆಯ ಕೊನೆ ಭಾಗದಲ್ಲಿರುವ ಗ್ರಾಮದ ರೈತರ ಜಮೀನುಗಳಿಗೆ ಸರಾಗವಾಗಿ ನೀರು ಹರಿದು ಬೆಳೆ ಬೆಳೆಯಲು ಪೂರಕ ಮಳೆ ಸುರಿಯಲಿ ಎಂದು ಗ್ರಾಮಸ್ಥರು ಗಣೇಶನಲ್ಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ. ಪ್ರಸ್ತುತ ದಿನದಲ್ಲಿ ಮುಚ್ಚುತ್ತಿರುವ ಕೆರೆಗಳನ್ನು ಉಳಿಸಬೇಕೆಂಬ ಸಂದೇಶವನ್ನೂ ಗಣೇಶನ ಮೂಲಕ ಸಾರಲು ಕೆರೆಯ ನಡುವೆ ಗಣೇಶನನ್ನು ಪ್ರತಿಷ್ಠಾಪಿಲಾಗಿದೆ.
Advertisement