Advertisement

ಸಾಹಿತಿ ಸಾ.ಶಿ.ಮರುಳಯ್ಯ ಜಾಲತಾಣ ಲೋಕಾರ್ಪಣೆ

12:38 PM Feb 06, 2018 | |

ಬೆಂಗಳೂರು: ಶ್ರೇಷ್ಠ ಪ್ರಾಧ್ಯಾಪಕ ಹಾಗೂ ಪ್ರಖರ ವಾಗ್ಮಿಯಾಗಿದ್ದ ಖ್ಯಾತ ಸಾಹಿತಿ ಸಾ.ಶಿ. ಮರುಳಯ್ಯ ಅತಿ ಹೆಚ್ಚು ಐಎಎಸ್‌, ಕೆಎಎಸ್‌ ಅಧಿಕಾರಿಗಳನ್ನು ಶಿಷ್ಯರನ್ನಾಗಿಸಿ ಕೊಂಡ ಏಕೈಕ ಕನ್ನಡ ಸಾಹಿತಿ ಎಂದು ಕನ್ನಡ ಸಾಹಿತ್ಯ ಪರಿಷತ್‌ ಮಾಜಿ ಅಧ್ಯಕ್ಷ ಜಿ.ಎಸ್‌. ಸಿದ್ಧಲಿಂಗಯ್ಯ ಬಣ್ಣಿಸಿದರು. ನಗರದ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಸಾ.ಶಿ.ಮರುಳಯ್ಯ ಪ್ರತಿಷ್ಠಾನ ಸೋಮವಾರ ಆಯೋಜಿಸಿದ್ದ ಸಮಾರಂಭದಲ್ಲಿ ಸಾ.ಶಿ.ಮ ಅಂತರ್ಜಾಲ ತಾಣ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಸಾ.ಶಿ.ಮ ಅವರ ವಿದ್ಯಾರ್ಥಿ, ಡಿವೈಎಸ್ಪಿ ಜಿನೇಂದ್ರ ಖನಗಾವಿ ಮಾತನಾಡಿ, ಐಎಎಸ್‌ ಕನ್ನಡ ಐಚ್ಛಿಕ ವಿಷಯ ಪೂರ್ಣ ಪಠ್ಯವನ್ನು ಕೇವಲ ಒಂದು ತಿಂಗಳ ಅವಧಿಯಲ್ಲಿ ಮನ ಮುಟ್ಟುವಂತೆ ಬೋಧಿಸುವ ಕೌಶಲ್ಯವನ್ನು ಸಾ.ಶಿ.ಮರುಳಯ್ಯ ಹೊಂದಿದ್ದರು ಎಂದು ಸ್ಮರಿಸಿದರು. 

ಕಸಾಪ ಗೌರವ ಕಾರ್ಯದರ್ಶಿ ಚನ್ನೇಗೌಡ ಮಾತನಾಡಿ, ಸಾಶಿಮ ನಿವೃತ್ತಿ ಬಳಿಕವೂ ವಿದ್ಯಾರ್ಥಿಗಳಿಗಾಗಿ ಶ್ರಮಿಸಿದರಲ್ಲದೇ ನಿಧನ ಹೊಂದಿದ ನಂತರವೂ ತಮ್ಮ ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನಕ್ಕಾಗಿ ದೇಹದಾನ ಮಾಡಿದರು. ಜತೆಗೆ ಕಸಾಪ ಅಧ್ಯಕ್ಷರಾಗಿದ್ದಾಗ ಕನ್ನಡ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next