Advertisement
ಆದರೆ ಸೆರೆನಾ ನಿರ್ಗಮನದಿಂದ ಅಮೆರಿಕದ ಟೆನಿಸ್ ಅಭಿಮಾನಿಗಳಿಗೇನೂ ನಿರಾಸೆಯಾಗಲಿಲ್ಲ. ಅಮೆರಿಕದವರೇ ಆದ, ನಂ. 22 ಆಟಗಾರ್ತಿ ಜೆನ್ನಿಫರ್ ಬ್ರಾಡಿ ಇದೇ ಮೊದಲ ಬಾರಿಗೆ ಗ್ರ್ಯಾನ್‌ಸ್ಲಾಮ್ ಫೈನಲ್‌ಗೆ ಲಗ್ಗೆ ಹಾಕಿದ್ದಾರೆ. ಇವರು ಜೆಕ್ ಆಟಗಾರ್ತಿ ಕ್ಯಾರೋಲಿನಾ ಮುಕ್ಸೋವಾ ಆಟವನ್ನು 3 ಸೆಟ್‌ಗಳಲ್ಲಿ ಮುಗಿಸಿದರು. ಶನಿವಾರ ವನಿತಾ ಸಿಂಗಲ್ಸ್ ಫೈನಲ್‌ನಲ್ಲಿ ಒಸಾಕಾ-ಬ್ರಾಡಿ ಮುಖಾಮುಖೀ ಆಗಲಿದ್ದಾರೆ.
2019ರ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಆಗಿರುವ ನವೋಮಿ ಒಸಾಕಾ ವಿರುದ್ಧ ಸೆರೆನಾ ವಿಲಿಯಮ್ಸ್ ಯಾವುದೇ ಪ್ರತಿರೋಧ ತೋರದಿದ್ದುದು ಅಚ್ಚರಿಯಾಗಿ ಕಂಡಿತು. ಒಸಾಕಾ 6-3, 6-4 ನೇರ ಸೆಟ್‌ಗಳಿಂದ ಸೆರೆನಾಗೆ ಆಘಾತವಿಕ್ಕಿದರು. ಇದು ಒಸಾಕಾ ಕಾಣುತ್ತಿರುವ 4ನೇ ಗ್ರ್ಯಾನ್‌ಸ್ಲಾಮ್ ಫೈನಲ್. ಹಿಂದಿನ ಮೂರರಲ್ಲೂ ಅವರು ಟ್ರೋಫಿ ಎತ್ತಿದ್ದನ್ನು ಮರೆಯುವಂತಿಲ್ಲ. ಇದರಲ್ಲಿ 2018 ಮತ್ತು 2020ರ ಯುಎಸ್ ಓಪನ್ ಪ್ರಶಸ್ತಿಗಳೂ ಸೇರಿವೆ. ಇಲ್ಲಿನ ಫೈನಲ್‌ನಲ್ಲೊಮ್ಮೆ ಸೆರೆನಾಗೂ ಸೋಲುಣಿಸಿದ್ದರು (2018). 2019ರ ಆಸ್ಟ್ರೇಲಿಯನ್ ಓಪನ್ ಫೈನಲ್‌ನಲ್ಲಿ ಒಸಾಕಾಗೆ ಶರಣಾದವರು ಪೆಟ್ರಾ ಕ್ವಿಟೋವಾ. ಇದನ್ನೂ ಓದಿ:ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ : ಹ್ಯಾಟ್ರಿಕ್ ಹಾದಿಯಲ್ಲಿ ಜೊಕೋವಿಕ್
Related Articles
ಬ್ರಾಡಿ-ಮುಕ್ಸೋವಾ ನಡುವಿನ ಮುಖಾಮುಖೀ ಒಂದು ಗಂಟೆ, 55 ನಿಮಿಷಗಳ ತನಕ ಮುಂದುವರಿಯಿತು. 3 ಸೆಟ್‌ಗಳ ಈ ಸೆಣಸಾಟದಲ್ಲಿ ಬ್ರಾಡಿ 6-4, 3-6, 6-4 ಅಂತರದ ಗೆಲುವು ಒಲಿಸಿಕೊಂಡರು. 2019ರ ಆಸ್ಟ್ರೇಲಿಯನ್ ಓಪನ್‌ನಲ್ಲಿ ಸೆಮಿಫೈನಲ್ ತನಕ ಸಾಗಿದ್ದೇ ಬ್ರಾಡಿ ಅವರ ಈ ವರೆಗಿನ ಅತ್ಯುತ್ತಮ ಗ್ರ್ಯಾನ್‌ಸ್ಲಾಮ್ ಸಾಧನೆಯಾಗಿದೆ. ಇನ್ನೊಂದೆಡೆ ಮುಕ್ಸೋವಾಗೆ ಇದೇ ಮೊದಲ ಗ್ರ್ಯಾನ್‌ಸ್ಲಾಮ್ ಸೆಮಿಫೈನಲ್ ಆಗಿತ್ತು.
Advertisement