Advertisement
ತಟ್ಸುಮಗೆ ತಟ್ಟಿದ ಜೊಕೋಮೊದಲ ಸುತ್ತಿನಲ್ಲಿ ಸ್ವಲ್ಪಮಟ್ಟಿನ ಸವಾಲು ಎದುರಿಸಿದ್ದ ಜೊಕೋವಿಕ್ ಬುಧವಾರ ನಡೆದ ದ್ವಿತೀಯ ಸುತ್ತಿನಲ್ಲಿ ಜಪಾನಿನ ವೈಲ್ಡ್‌ಕಾರ್ಡ್ ಪ್ರವೇಶಿಗ ತಟ್ಸುಮ ಅವರನ್ನು ಸುಲಭವಾಗಿ ಮಣಿಸಿ ಮೂರನೇ ಸುತ್ತು ಪ್ರವೇಶಿಸಿದರು. ಅವರು ದಾಖಲೆ ಎಂಟನೇ ಬಾರಿ ಇಲ್ಲಿ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.
ವಿಶ್ವದ ದ್ವಿತೀಯ ರ್‍ಯಾಂಕಿನ ಜೊಕೋವಿಕ್ ಶ್ರೇಷ್ಠಮಟ್ಟದ ಆಟ ಪ್ರದರ್ಶಿಸಿ 6-1, 6-4, 6-2 ಸೆಟ್‌ಗಳಿಂದ ತಟ್ಸುಮ ಅವರನ್ನು ತಟ್ಟಿದರು. 16 ಏಸ್ ಮತ್ತು 31 ಗೆಲುವಿನ ಹೊಡೆತವಿಕ್ಕಿದ ಜೊಕೋ ಮೂರನೇ ಸುತ್ತಿನಲ್ಲಿ ಜಪಾನಿನ ಮತ್ತೋರ್ವ ಆಟಗಾರ ಯೊಶಿಹಿಟೊ ನಿಶಿಯೋಕ ಅವರ ಸವಾಲನ್ನು ಎದುರಿಸಲಿದ್ದಾರೆ. ನಿಶಿಯೋಕ ಇನ್ನೊಂದು ಪಂದ್ಯದಲ್ಲಿ ಬ್ರಿಟನ್‌ನ ಡ್ಯಾನ್ ಇವಾನ್ಸ್ ಅವರನ್ನು ನೇರ ಸೆಟ್‌ಗಳಿಂದ ಸೋಲಿಸಿದ್ದರು.
ಅಮೆರಿಕದ ಟೆನ್ನಿಸ್ ಸ್ಯಾಂಡ್‌ಗೆÅನ್ ಅವರು ಆಸ್ಟ್ರೇಲಿಯನ್ ಓಪನ್‌ನಲ್ಲಿ ಬಲುದೊಡ್ಡ ಗೆಲುವು ಸಾಧಿಸಿ ಮುನ್ನಡೆದಿದ್ದಾರೆ. ಎಂಟನೇ ಶ್ರೇಯಾಂಕದ ಮಾಟೆಯೊ ಬೆರೆಟ್ಟಿನಿ ಅವರನ್ನು ಐದು ಸೆಟ್‌ಗಳ ಸುದೀರ್ಘ ಸೆಣಸಾಟದಲ್ಲಿ ಉರುಳಿಸಿದ್ದಾರೆ. ಕಳೆದ ವರ್ಷದ ಸೆಮಿಫೈನಲಿಸ್ಟ್ ಬೆರೆಟ್ಟಿನಿ 6-7 (7-9), 4-6, 6-4, 6-2, 5-7 ಸೆಟ್‌ಗಳಿಂದ ಸೋತು ಹೊರಬಿದ್ದರು. ಈ ಹೋರಾಟ 3 ತಾಸು ಮತ್ತು 23 ನಿಮಿಷಗಳವರೆಗೆ ಸಾಗಿತ್ತು. ಬೆರೆಟ್ಟಿನಿ ಇಲ್ಲಿ ಸೋತ ಗರಿಷ್ಠ ರ್‍ಯಾಂಕಿನ ಆಟಗಾರರಾಗಿದ್ದಾರೆ. ಕ್ರಿಶ್ಚಿಯನ್ ಧರ್ಮದ ಬಗ್ಗೆ ನಂಬಿಕೆ ಇಟ್ಟುಕೊಂಡಿರುವ ಸ್ಯಾಂಡ್‌ಗೆÅನ್ 2018ರಲ್ಲಿ ಮೆಲ್ಬರ್ನ್ ಪಾರ್ಕ್‌ನಲ್ಲಿ ಕ್ವಾರ್ಟರ್‌ಫೈನಲಿಗೇರಿದ್ದರು. ಆದರೆ ಅವರ ರಾಜಕೀಯ ಅಭಿಪ್ರಾಯ ಮತ್ತು ಬಲಪಂಥೀಯ ಚಟುವಟಿಕೆಯ ಸಂಪರ್ಕವು ವಿವಾದಕ್ಕೆ ಕಾರಣವಾಗಿತ್ತು.
Related Articles
ಮೂರನೇ ಶ್ರೇಯಾಂಕದ ರೋಜರ್ ಫೆಡರರ್ ಸುಲಭ ಗೆಲುವಿನೊಂದಿಗೆ ಮೂರನೇ ಸುತ್ತಿಗೆ ಮುನ್ನಡೆದಿದ್ದಾರೆ. ಎರಡನೇ ಸುತ್ತಿನ ಪಂದ್ಯ ಶೀಘ್ರ ಮುಗಿಯುವ ಉದ್ದೇಶದಿಂದ ಉಗ್ರ ಹೋರಾಟ ನಡೆಸಿದ್ದರು. ಎದುರಾಳಿ ಸರ್ಬಿಯದ ಫಿಲಿಪ್ ಕ್ರ್ಯಾಜಿನೋವಿಕ್ ವಿರುದ್ಧ 6-1, 6-4, 6-1 ಸೆಟ್‌ಗಳ ಜಯ ಸಾಧಿಸಿ ಸಂಭ್ರಮಿಸಿದರು. ಮೂರನೇ ಸೆಟ್‌ನಲ್ಲಿ ಫೆಡರರ್ 2-1 ಮುನ್ನಡೆಯಲ್ಲಿದ್ದಾಗ ಕ್ರ್ಯಾಚಿನೋವಿಕ್ ಗಾಯಕ್ಕಾಗಿ ವೈದ್ಯಕೀಯ ವಿಶ್ರಾಂತಿ ಪಡೆದಿದ್ದರು. ಇದರಿಂದ ಯಾವುದೆ ವ್ಯತ್ಯಾಸವಾಗಲಿಲ್ಲ. 20 ಬಾರಿಯ ಗ್ರ್ಯಾನ್ ಸ್ಲಾಮ್ ಚಾಂಪಿಯನ್ 42ನೇ ವಿಜಯಿ ಹೊಡೆತವಿಕ್ಕಿ 90 ನಿಮಿಷಗಳ ಒಳಗಡೆ ಪಂದ್ಯ ಗೆದ್ದರು. ಫೆಡರರ್ ಮುಂದಿನ ಸುತ್ತಿನಲ್ಲಿ ಸ್ಥಳೀಯ ಭರವಸೆ ಜಾನ್ ಮಿಲ್ಮನ್ ಅವರ ಸವಾಲಿಗೆ ಉತ್ತರಿಸಲಿದ್ದಾರೆ.
Advertisement