Advertisement

World Cup:ಶಕಿಬ್‌ ಇಲ್ಲದ ಬಾಂಗ್ಲಾಕ್ಕೆ ಆಸ್ಟ್ರೇಲಿಯದ ಸವಾಲು

11:31 PM Nov 10, 2023 | Team Udayavani |

ಪುಣೆ: ಈಗಾಗಲೇ ಸೆಮಿ ಫೈನಲ್‌ ಪ್ರವೇಶಿಸಿರುವ ಆಸ್ಟ್ರೇಲಿಯ, ಶನಿವಾರದ ತನ್ನ ಕೊನೆಯ ಲೀಗ್‌ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದೆ. ಬಾಂಗ್ಲಾ ಈಗಾಗಲೇ ಕೂಟದಿಂದ ಹೊರಬಿದ್ದಿರುವ ತಂಡ. ಇಲ್ಲಿ ನಾಯಕ ಶಕಿಬ್‌ ಅಲ್‌ ಹಸನ್‌ ಗೈರಲ್ಲಿ ಆಡಲಿಳಿಯುತ್ತಿದೆ.

Advertisement

ಅಫ್ಘಾನಿಸ್ಥಾನ ವಿರುದ್ಧ ಗ್ಲೆನ್‌ ಮ್ಯಾಕ್ಸ್‌ ವೆಲ್‌ ತೋರ್ಪಡಿಸಿದ ಅಸಾಮಾನ್ಯ ಬ್ಯಾಟಿಂಗ್‌ ಸಾಹಸದಿಂದ ಕಲ್ಪನೆಗೂ ಮೀರಿದ ಗೆಲುವನ್ನು ಸಾಧಿಸಿದ ಆಸ್ಟ್ರೇಲಿಯ ತನ್ನ ಸೆಮಿಫೈನಲ್‌ ಸ್ಥಾನ ವನ್ನು ಖಾತ್ರಿಗೊಳಿಸಿತ್ತು. ಕೊನೆಯ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಬಗ್ಗು ಬಡಿದು ಈ ಸ್ಥಾನಕ್ಕೆ ಇನ್ನೂ ಹೆಚ್ಚಿನ ಗೌರವ ಸಲ್ಲಿಸುವುದು ಪ್ಯಾಟ್‌ ಕಮಿನ್ಸ್‌ ತಂಡದ ಗುರಿ ಆಗಿರುವುದರಲ್ಲಿ ಅನುಮಾನವಿಲ್ಲ.

ನಿರ್ಣಾಯಕ ಹಂತ ತಲುಪಿದ ಬಳಿಕ ಆಸ್ಟ್ರೇಲಿಯವನ್ನು ತಡೆಯು ವುದು ಕಷ್ಟ ಎಂಬ ಮಾತಿದೆ. ಅದು ಈಗಾಗಲೇ ಬಹಳಷ್ಟು ವಿಶ್ವಕಪ್‌ಗ್ಳಲ್ಲಿ ಸಾಬೀತಾಗಿದೆ ಕೂಡ. ಮೊನ್ನೆ ಅಫ್ಘಾನ್‌ ವಿರುದ್ಧ ಇನ್ನೇನು ಸೋತು ತೀವ್ರ ಮುಖಭಂಗ ಅನುಭವಿಸಬೇಕಿದ್ದ ಆಸ್ಟ್ರೇಲಿಯ, ಪಂದ್ಯಕ್ಕೆ ಹೇಗೆ ಮರಳಿತು ಎಂಬುದನ್ನು ಇಡೀ ಜಗತ್ತು ಕಂಡಿದೆ. ಹೀಗಾಗಿ ಈ ಪಂದ್ಯಾವಳಿಯಿಂದ ನಿರ್ಗಮಿಸಿದ ಮೊದಲ ತಂಡವಾದ ಬಾಂಗ್ಲಾದೇಶವನ್ನು ಬಗ್ಗುಬಡಿಯು ವುದು ಆಸೀಸ್‌ಗೆ ಅಸಾಧ್ಯವೇನಲ್ಲ.

ಇನ್ನೊಂದೆಡೆ ಬಾಂಗ್ಲಾದೇಶ ಪಾಲಿಗೆ ಈ ಪಂದ್ಯ 2025ರ ಚಾಂಪಿಯನ್ಸ್‌ ಟ್ರೋಫಿ ಪಂದ್ಯಾವಳಿಯ ಹಿನ್ನೆಲೆಯಲ್ಲಿ ಅತ್ಯಂತ ಮಹತ್ವದ್ದು. ಆತಿಥೇಯ ಪಾಕಿಸ್ಥಾನ ಹಾಗೂ ಉಳಿದ ಅಗ್ರ 7 ತಂಡಗಳಿಗೆ ಇಲ್ಲಿ ಪ್ರವೇಶವಿದೆ. ಸದ್ಯ ಶ್ರೀಲಂಕಾವನ್ನು 3 ವಿಕೆಟ್‌ಗಳಿಂದ ಮಣಿಸಿ 8ನೇ ಸ್ಥಾನಿಯಾಗಿದೆ. ಇದೇ ಸ್ಥಾನ ಕಾಯ್ದುಕೊಂಡರೆ ಬಾಂಗ್ಲಾ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಆಡಲಿದೆ. ಸೋತು ರನ್‌ರೇಟ್‌ನಲ್ಲಿ ಶ್ರೀಲಂಕಾಕ್ಕಿಂತ ಕೆಳಗಿಳಿದರೆ ಕಷ್ಟ.

ಶ್ರೀಲಂಕಾ ವಿರುದ್ಧದ ನಿರ್ಣಾ ಯಕ ಪಂದ್ಯದಲ್ಲಿ ಗೆದ್ದರೂ ಬಾಂಗ್ಲಾ ದೇಶದ ಇಮೇಜ್‌ಗೆ ತುಸು ಹಾನಿ ಯಾದದ್ದು ಸುಳ್ಳಲ್ಲ. ಏಂಜೆಲೊ ಮ್ಯಾಥ್ಯೂಸ್‌ ವಿರುದ್ಧದ ಟೈಮ್ಡ್ ಔಟ್‌ ಪ್ರಕರಣ ಜಾಗತಿಕ ಮಟ್ಟ ದಲ್ಲಿ ಸುದ್ದಿಯಾಯಿತು. ಕ್ರಿಕೆಟ್‌ ನಿಯಮಾವಳಿಯ ಚೌಕಟ್ಟಿನಲ್ಲೇ ಈ ತೀರ್ಪು ಬಂದಿತಾದರೂ ಕ್ರೀಡಾಸ್ಫೂರ್ತಿ ಎಂಬುದು ಮಣ್ಣಾಗಿತ್ತು.
ಶಕಿಬ್‌ ಗೈರು ಬಾಂಗ್ಲಾಕ್ಕೆ ಎದುರಾಗಿ ರುವ ದೊಡ್ಡ ಹೊಡೆತ. ಇವರ ಗೈರಲ್ಲಿ ನಜ್ಮುಲ್‌ ಹುಸೇನ್‌ ಬಾಂಗ್ಲಾದೇಶ ವನ್ನು ಮುನ್ನಡೆಸುತ್ತಿದ್ದಾರೆ. ಆದರೆ ಆಸ್ಟ್ರೇಲಿಯಕ್ಕೆ ಆಘಾತವಿಕ್ಕುವಷ್ಟು ಸಾಮರ್ಥ್ಯವನ್ನು ಈ ತಂಡ ಹೊಂದಿಲ್ಲ ಎಂದೇ ಹೇಳಬೇಕಾಗುತ್ತದೆ.

Advertisement

19-1 ಅಂತರದ ಮೇಲುಗೈ
ಆಸ್ಟ್ರೇಲಿಯದ ಬ್ಯಾಟಿಂಗ್‌ ಸರದಿ ಅತ್ಯಂತ ಬಲಿಷ್ಠವಾಗಿದ್ದರೂ ಅಫ್ಘಾನಿ ಸ್ಥಾನ ವಿರುದ್ಧ ಏನಾಯಿತೆಂಬುದು ಎಲ್ಲರಿಗೂ ತಿಳಿದಿದೆ. 91ಕ್ಕೆ 7 ವಿಕೆಟ್‌ ಕಳೆದುಕೊಂಡು ಹೀನಾಯ ಸೋಲಿ ನತ್ತ ಮುಖ ಮಾಡಿತ್ತು. ಮ್ಯಾಕ್ಸ್‌ ವೆಲ್‌ ಸಿಡಿಯದೇ ಹೋಗಿದ್ದರೆ ಅಫ್ಘಾನ್‌ ವಿರುದ್ಧ ಆಸೀಸ್‌ ಪ್ರತಿಷ್ಠೆಗೆ ಮುಕ್ಕಾಗುತ್ತಿತ್ತು. ಆದರೆ ಆಸೀಸ್‌ ಪಾಲಿಗೆ ಇದೊಂದು ಪಾಠ.
ಬಾಂಗ್ಲಾ ವಿರುದ್ಧ 21 ಪಂದ್ಯ ಆಡಿರುವ ಆಸ್ಟ್ರೇಲಿಯ 19ರಲ್ಲಿ ಗೆದ್ದು ಮೇಲುಗೈ ಸಾಧಿಸಿದೆ. ಬಾಂಗ್ಲಾ ಜಯಿಸಿದ್ದು ಒಂದನ್ನು ಮಾತ್ರ.

Advertisement

Udayavani is now on Telegram. Click here to join our channel and stay updated with the latest news.

Next