Advertisement

ಕ್ರಿಕೆಟ್‌ಗೆ ಕಂಟಕವಾದ ಆಸ್ಟ್ರೇಲಿಯದ ಕಾಡ್ಗಿಚ್ಚು

12:48 AM Dec 23, 2019 | Sriram |

ಸಿಡ್ನಿ: ಆಸ್ಟ್ರೇಲಿಯದ ಪೂರ್ವ ಭಾಗದಲ್ಲಿ ಕಾಣಿಸಿಕೊಂಡಿರುವ ಕಾಡ್ಗಿಚ್ಚಿನಿಂದಾಗಿ ವಾತಾವರಣದಲ್ಲಿ ಹೊಗೆ ತುಂಬಿಕೊಂಡಿದ್ದು, ಗಾಳಿಯ ಗುಣಮಟ್ಟ ಕುಸಿದಿದೆ. ಇದರಿಂದಾಗಿ ಜನಜೀವನ ದುಸ್ತರವಾಗಿರುವುದು ಮಾತ್ರವಲ್ಲದೆ ಕ್ರಿಕೆಟ್‌ ವೇಳಾಪಟ್ಟಿಯೂ ವ್ಯತ್ಯಯವಾಗುವ ಭೀತಿ ತಲೆದೋರಿದೆ.

Advertisement

ಇತ್ತೀಚೆಗೆ ಕ್ಯಾನ್‌ಬೆರಾದ “ಮನುಕ ಓವಲ್‌’ನಲ್ಲಿ ಸಿಡ್ನಿ ಥಂಡರ್‌ ಮತ್ತು ಅಡಿಲೇಡ್‌ ಸ್ಟ್ರೈಕರ್ ನಡುವೆ ನಡೆಯಲಿದ್ದ ಪಂದ್ಯವನ್ನು ವಾತಾವರಣದ ಗುಣಮಟ್ಟ ಕುಸಿದಿರುವ ಕಾರಣ ರದ್ದುಪಡಿಸಲಾಗಿತ್ತು.

ಪಂದ್ಯ ವೀಕ್ಷಿಸಲು ಬಂದವರ ಆರೋಗ್ಯ ಕೆಟ್ಟು ವೈದ್ಯರನ್ನು ಕರೆಸಬೇಕಾಯಿತು ಹಾಗೂ ವೇಗಿಗಳಿಗೆ ಎರಡು ಓವರ್‌ ಎಸೆದಾಗಲೇ ಉಬ್ಬಸ ಬರತೊಡಗಿತ್ತು.

ಹದಗೆಟ್ಟಿರುವ ವಾತಾವರಣ ಎನ್ನುವುದು ಆಸ್ಟ್ರೇಲಿಯ-ನ್ಯೂಜಿಲ್ಯಾಂಡ್‌ ನಡುವೆ ಸಿಡ್ನಿಯಲ್ಲಿ ನಡೆಯಲಿರುವ ಹೊಸ ವರ್ಷದ ಟೆಸ್ಟ್‌ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ. ಸದ್ಯ ವಾತಾವರಣದ ಗುಣಮಟ್ಟ ಸುಧಾರಿಸುವ ಯಾವ ಲಕ್ಷಣವೂ ಗೋಚರಿಸದಿರುವುದರಿಂದ ಈ ಟೆಸ್ಟ್‌ ಸರಣಿಯ ಭವಿಷ್ಯ ಅತಂತ್ರವಾಗಿದೆ. ಕ್ರಿಕೆಟ್‌ ಆಸ್ಟ್ರೇಲಿಯಕ್ಕೆ ಪಂದ್ಯಗಳ ವೇಳಾಪಟ್ಟಿ ಹೊಂದಾಣಿಕೆ ಮಾಡಿಕೊಳ್ಳುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next