Advertisement

ಸೆರೆನಾ ಗೈರಲ್ಲಿ ಯಾರಿಗೆ ಒಲಿದೀತು ಅದೃಷ್ಟ ?

06:45 AM Jan 15, 2018 | |

ಮೆಲ್ಬರ್ನ್: ಸಿಮೋನಾ ಹಾಲೆಪ್‌ ಮತ್ತು ಕ್ಯಾರೋಲಿನ್‌ ವೋಜ್ನಿಯಾಕಿ ಸೋಮ ವಾರದಿಂದ ಆರಂಭವಾಗಲಿರುವ ಪ್ರತಿಷ್ಠಿತ ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ನಲ್ಲಿ ಮೊದಲ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಕನಸಿನೊಂದಿಗೆ ಕಣಕ್ಕಿಳಿ
ಯಲಿದ್ದಾರೆ. ಅಮೆರಿಕದ ಬಲಾಡ್ಯ ಆಟಗಾರ್ತಿ ಸೆರೆನಾ ವಿಲಿಯಮ್ಸ್‌ ಹೊರಗುಳಿದಿರುವುದರಿಂದ ಈ ಇಬ್ಬರು ಆಟಗಾರ್ತಿಯರ ಅದೃಷ್ಟ ಪರೀಕ್ಷೆಗೆ ಇದು ಸಕಾಲ. ಇವರೊಂದಿಗೆ ಸ್ವಿಟೋಲಿನಾ ಕೂಡ ಸ್ಪರ್ಧೆಯಲ್ಲಿದ್ದಾರೆ.

Advertisement

ಪುರುಷರ ಸಿಂಗಲ್ಸ್‌ನಲ್ಲಿ ಹಾಲಿ ಚಾಂಪಿಯನ್‌ ರೋಜರ್‌ ಫೆಡರರ್‌, ನೊವಾಕ್‌ ಜೊಕೋವಿಕ್‌, ಸ್ಟಾನಿಸ್ಲಾಸ್‌ ವಾವ್ರಿಂಕ ಮೇಲೆ ಹೆಚ್ಚಿನ ನಿರೀಕ್ಷೆ ಇರಿಸಿಕೊಳ್ಳಲಾಗಿದೆ.

ಕಳೆದ ವರ್ಷ ಸೆರೆನಾ ಗೈರಿನ ಅಪೂರ್ವ ಅವಕಾಶ ಬಳಸಿಕೊಂಡಿದ್ದ ಜೆಲೆನಾ ಒಸ್ಟಾ ಪೆಂಕೊ, ಸ್ಲೋನ್‌ ಸ್ಟೀಫ‌ನ್ಸ್‌ ಕ್ರಮವಾಗಿ ಫ್ರೆಂಚ್‌ ಓಪನ್‌ ಮತ್ತು ಯುಎಸ್‌ ಓಪನ್‌ನಲ್ಲಿ ಚಾಂಪಿಯನ್‌ ಪಟ್ಟ ಅಲಂಕರಿಸಿದ್ದರು. ಆದರೆ ಅನಂತರದ ದಾಖಲೆಗಳನ್ನು ಗಮನಿಸಿದರೆ ಇವರಿಬ್ಬರಿಗೆ ಮೆಲ್ಬರ್ನ್ನಲ್ಲಿ ರಾಣಿಯಾಗಿ ಮೆರೆಯುವುದು ಅಷ್ಟು ಸುಲಭವಲ್ಲ ಎಂದೇ ಹೇಳಬೇಕು. ಯುಎಸ್‌ ಓಪನ್‌ ಗೆದ್ದ ಬಳಿಕ ಸ್ಟೀಫ‌ನ್ಸ್‌ ಯಾವುದೇ ದೊಡ್ಡ ಸಾಧನೆ ಮಾಡಿಲ್ಲ. ಒಸ್ಟಾಪೆಂಕೊ ಕೂಡ ಇತ್ತೀಚಿನ ಶೆಂಜೆನ್‌ ಮತ್ತು ಸಿಡ್ನಿ ಪಂದ್ಯಾವಳಿಯಲ್ಲಿ ಹಿನ್ನೆಡೆ ಕಂಡಿದ್ದಾರೆ.

ಮುಗುರುಜಾಗೂ ಸಮಸ್ಯೆ
ವಿಂಬಲ್ಡನ್‌ ಚಾಂಪಿಯನ್‌ ಗಾರ್ಬಿನ್‌ ಮುಗು ರುಜಾ ಕೂಡ ಗಾಯದ ಸಮಸ್ಯೆಯಲ್ಲಿದ್ದಾರೆ. ಈ ಎಲ್ಲ ಲೆಕ್ಕಾಚಾರಗಳ ಆಧಾರದಲ್ಲಿ ಹಾಲೆಪ್‌ ಆಸೆಗೆ ಇನ್ನಷ್ಟು ಪುಷ್ಟಿ ಬಂದಂತಾಗಿದೆ. ವೋಜ್ನಿಯಾಕಿ ವಿಜಯಿಯಾಗುವ ಸಾಧ್ಯತೆಯೂ ಇಲ್ಲದಿಲ್ಲ. ಮಾಜಿ ನಂ. 1 ಆಟಗಾರ್ತಿ ವೋಜ್ನಿಯಾಕಿ ಅವರು 2017ರಲ್ಲಿ ಎಂಟು ಫೈನಲ್‌ಗ‌ಳನ್ನು ಪ್ರವೇಶಿಸಿ ಅಗ್ರ ರ್‍ಯಾಂಕಿಂಗ್‌ನತ್ತ ಮರಳುತ್ತಿದ್ದಾರೆ. ಪ್ರಶಸ್ತಿ ಮೇಲೆ ಬಹಳಷ್ಟು ನಿರೀಕ್ಷೆಯನ್ನಿಟ್ಟುಕೊಂಡಿದ್ದು, “ನಾನು ಪ್ರತಿಯೊಂದರಲ್ಲೂ ಸುಧಾರಣೆ ಕಂಡಿ ದ್ದೇನೆ’ ಎಂದಿದ್ದಾರೆ. ಅವರು ಮೊದಲ ಸುತ್ತಿನಲ್ಲಿ ರೊಮೇನಿಯಾದ ಮಿಹೇಲಾ ಬುಜರ್ನೆಸ್ಕಾ ವಿರುದ್ಧ ಸೆಣಸಲಿದ್ದಾರೆ.

36ರ ಹರೆಯದ ಸೆರೆನಾ ಹೆಣ್ಣು ಮಗುವಿಗೆ ತಾಯಿಯಾಗಿದ್ದು, ಇನ್ನೂ ಸಂಪೂರ್ಣ ಫಿಟೆ°ಸ್‌ಗೆ ಮರಳಿಲ್ಲ. ಆದರೂ ಕಳೆದ ತಿಂಗಳಷ್ಟೇ ಅಬು ಧಾಬಿಯಲ್ಲಿ ಟೆನಿಸ್‌ ಅಂಕಣಕ್ಕಿಳಿದು ಬೆರಗು ಮೂಡಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next