Advertisement
ಶನಿವಾರ ನಡೆಯುವ ಫೈನಲ್ ಹೋರಾಟದಲ್ಲಿ ರಿಬಕಿನಾ ಅವರು ಬೆಲಾರಸ್‌ನ ಅರ್ಯಾನಾ ಸಬಲೆಂಕಾ ಅವರ ಸವಾಲನ್ನು ಎದುರಿಸಲಿದ್ದಾರೆ. ಗುರುವಾರ ನಡೆದ ಇನ್ನೊಂದು ಸೆಮಿಫೈನಲ್ ಹೋರಾಟದಲ್ಲಿ ಸಬಲೆಂಕಾ ಅವರು ಶ್ರೇಯಾಂಕರಹಿತ ಆಟಗಾರ್ತಿ ಪೊಲೆಂಡಿನ ಮ್ಯಾಗಾx ಲಿನೆಟ್ ಅವರನ್ನು 7-6 (7-1), 6-2 ಸೆಟ್‌ಗಳಿಂದ ಸೋಲಿಸಿ ಫೈನಲಿಗೇರಿದ್ದರು.
2012 ಮತ್ತು 2013ರಲ್ಲಿ ಇಲ್ಲಿ ಪ್ರಶಸ್ತಿ ಜಯಿಸಿದ್ದ ಅಜರೆಂಕಾ ಕೂಡ ಮೊದಲ ಸೆಟ್‌ನಲ್ಲಿ ಪ್ರಬಲ ಹೋರಾಟ ಸಂಘಟಿಸಿದ್ದರು. ಆದರೆ ರಿಬಕಿನಾ ಅವರ ಅದ್ಭುತ ಆಟದೆದುರು ಅವರ ಆಟ ನಡೆಯಲಿಲ್ಲ. ಅಂತಿಮವಾಗಿ ರಿಬಕಿನಾ 7-6 (4), 6-3 ಸೆಟ್‌ಗಳಿಂದ ಜಯ ಸಾಧಿಸಿ ಪ್ರಶಸ್ತಿ ಸುತ್ತಿಗೆ ತಲುಪಿದರು. ರಿಬಕಿನಾ ಕಳೆದ ಎರಡು ವಾರಗಳಲ್ಲಿ ಅಜರೆಂಕಾ ಸಹಿತ ನಂಬರ್ ವನ್ ಐಗಾ ಸ್ವಿಯಾಟೆಕ್, 17ನೇ ರ್‍ಯಾಂಕಿನ ಜೆಲೆನಾ ಒಸ್ಟಾಪೆಂಕೊ ಮತ್ತು ಡೆನಿಲೆ ಕಾಲಿನ್ಸ್ ಅವರನ್ನು ಸೋಲಿಸಿದ್ದರು.
Related Articles
Advertisement
ರಷ್ಯಾದಲ್ಲಿ ಜನನರಷ್ಯಾದ ಮಾಸ್ಕೋದಲ್ಲಿ ಜನಿಸಿದ್ದ ರಿಬಕಿನಾ 2018ರಿಂದ ಕಝಕಸ್ತಾನವನ್ನು ಪ್ರತಿನಿಧಿಸುತ್ತಿದ್ದಾರೆ. ತಮ್ಮ ಟೆನಿಸ್ ಬಾಳ್ವೆಗೆ ಹಣ ನೀಡಿ ಸಹಕರಿಸುವುದಾಗಿ ಕಝಕಸ್ತಾನ ಭರವಸೆ ನೀಡಿದ್ದರಿಂದ ಅವರು ಆ ದೇಶವನ್ನು ಇದೀಗ ಪ್ರತಿನಿಧಿಸುತ್ತಿದ್ದಾರೆ.