Advertisement
ಪುರುಷರ ಸಿಂಗಲ್ಸ್‌ನಲ್ಲಿ ನೆಚ್ಚಿನ ಆಟಗಾರ ರಫೆಲ್ ನಡಾಲ್ ಮತ್ತು ಮ್ಯಾಟಿಯೊ ಬೆರೆಟಿನಿ ಸೆಣಸಾಡಲಿದ್ದಾರೆ.
Related Articles
Advertisement
ಇದನ್ನೂ ಓದಿ:ವನಿತಾ ಟಿ20 ರ್‍ಯಾಂಕಿಂಗ್: ಶಫಾಲಿ ವರ್ಮ ಮತ್ತೆ ನಂ.1
ನಡಾಲ್ 7ನೇ ಸೆಮಿಫೈನಲ್ನೊವಾಕ್ ಜೊಕೋವಿಕ್ ಗೈರಲ್ಲಿ ಈ ಕೂಟದ ಫೇವರಿಟ್ ಆಟಗಾರನಾಗಿರುವ ರಫೆಲ್ ನಡಾಲ್ ಕಾಣುತ್ತಿರುವ 7ನೇ ಆಸ್ಟ್ರೇಲಿಯನ್ ಓಪನ್ ಸೆಮಿಫೈನಲ್ ಇದಾಗಿದೆ. ಕೆನಡಾದ ಯುವ ಟೆನಿಸಿಗ ಡೆನ್ನಿಸ್ ಶಪೊವಲೋವ್ ವಿರುದ್ಧ ನಡೆಸಿದ 4 ಗಂಟೆ, 8 ನಿಮಿಷಗ ಮ್ಯಾರಥಾನ್ ಹೋರಾಟದ ಬಳಿಕ ಅವರು ಕ್ವಾರ್ಟರ್ ಫೈನಲ್ ಹಂತ ದಾಟಿದರು. ಗೆಲುವಿನ ಅಂತರ 6-3, 6-4, 4-6, 3-6, 6-3. 21ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ರಫೆಲ್ ನಡಾಲ್ ಕೊನೆಯ ಸಲ ಇಲ್ಲಿ ಕಿರೀಟ ಏರಿಸಿಕೊಂಡದ್ದು 2009ರಲ್ಲಿ. ಅವರ ಸೆಮಿಫೈನಲ್ ಎದುರಾಳಿ ಇಟಲಿಯ 7ನೇ ಶ್ರೇಯಾಂಕದ ಮ್ಯಾಟಿಯೊ ಬೆರೆಟಿನಿ. 5 ಸೆಟ್‌ಗಳ ಇನ್ನೊಂದು ಕ್ವಾರ್ಟರ್ ಫೈನಲ್ ಕಾದಾಟದಲ್ಲಿ ಅವರು ಫ್ರಾನ್ಸ್‌ನ ಗೇಲ್ ಮಾನ್‌ಫಿಲ್ಸ್ ವಿರುದ್ಧ 6-4, 6-4, 3-6, 3-6, 6-2 ಆಂತರದ ಗೆಲುವು ಒಲಿಸಿಕೊಂಡರು. ಸಾನಿಯಾ ಜೋಡಿ ನಿರ್ಗಮನ
ಮಿಕ್ಸೆಡ್ ಡಬಲ್ಸ್‌ನಲ್ಲಿ ಸಾನಿಯಾ ಮಿರ್ಜಾ ಮತ್ತು ಅಮೆರಿಕದ ರಾಜೀವ್ ರಾಮ್ ಜೋಡಿ ಕ್ವಾರ್ಟರ್ ಫೈನಲ್‌ನಲ್ಲಿ ಸೋತು ಕೂಟದಿಂದ ನಿರ್ಗಮಿಸಿದೆ. ಇದರೊಂದಿಗೆ ಸಾನಿಯಾ ಮಿರ್ಜಾ ಅವರ ಆಸ್ಟ್ರೇಲಿಯನ್ ಓಪನ್‌ಗೆ ಪೂರ್ಣ ವಿರಾಮ ಬಿದ್ದಿದೆ. ಪ್ರಸಕ್ತ -ತುವಿನ ಬಳಿಕ ಸಾನಿಯಾ ಟೆನಿಸ್‌ಗೆ ಗುಡ್‌ಬೈ ಹೇಳಲಿರುವುದರಿಂದ ಇದು ಅವರ ಕೊನೆಯ “ಮೆಲ್ಬರ್ನ್ ಪಾರ್ಕ್’ ಪಂದ್ಯವೆನಿಸಿತು. ಮಂಗಳವಾರ ನಡೆದ ಜಿದ್ದಾಜಿದ್ದಿ ಮುಖಾಮುಖಿಯಲ್ಲಿ ಆತಿಥೇಯ ಆಸ್ಟ್ರೇಲಿಯದ ಜಾಸನ್ ಕ್ಯುಬ್ಲಿರ್-ಜೇಮಿ ಫೋರ್ಲಿಸ್ ವಿರುದ್ಧ ಇಂಡೋ-ಅಮೆರಿಕನ್ ಜೋಡಿ 4-6, 6-7 (5-7) ಅಂತರದಿಂದ ಪರಾಭವಗೊಂಡಿತು.
ಇದಕ್ಕೂ ಮುನ್ನ ಸಾನಿಯಾ ಮಿರ್ಜಾ ವನಿತಾ ಡಬಲ್ಸ್‌ನ ಮೊದಲ ಸುತ್ತಿನಲ್ಲೇ ಪರಾಭವಗೊಂಡಿದ್ದರು. ಇಲ್ಲಿ ಸಾನಿಯಾರ ಜತೆಗಾರ್ತಿ ಆಗಿದ್ದವರು ಉಕ್ರೇನಿನ ನಾದಿಯಾ ಕಿಶೆನೋಕ್.