ಮೆಲ್ಬರ್ನ್: ಭಾರತದ ಸಿಂಗಲ್ಸ್ ಆಟಗಾರ ಪ್ರಜ್ಞೇಶ್ ಗುಣೇಶ್ವರನ್ ಅವರ ಅದೃಷ್ಟ ಒಂದೇ ದಿನದಲ್ಲಿ ಬದಲಾಗಿದೆ. ಶುಕ್ರವಾರ ಆಸ್ಟ್ರೇಲಿಯನ್ ಓಪನ್ ಅರ್ಹತಾ ಸುತ್ತಿನ ಅಂತಿಮ ಪಂದ್ಯದಲ್ಲಿ ಸೋತು ಪ್ರಧಾನ ಸುತ್ತು ಪ್ರವೇಶಿಸುವ ಅವಕಾಶವನ್ನು ಕಳೆದುಕೊಂಡಿದ್ದ ಪ್ರಜ್ಞೇಶ್, ಶನಿವಾರ ಮತ್ತೆ ಪ್ರಧಾನ ಸುತ್ತಿನಲ್ಲಿ ಆಡುವ ಅರ್ಹತೆಯನ್ನು ಸಂಪಾದಿಸಿದ್ದಾರೆ!
ನೇರ ಪ್ರವೇಶ ಪಡೆದ 5 ಮಂದಿ ಆಟಗಾರರು ನಾನಾ ಕಾರಣಗಳಿಂದ ಹೊರಗುಳಿದ ಕಾರಣ 5 “ಲಕ್ಕಿ ಲಾಸರ್’ಗಳಿಗೆ ಪ್ರಧಾನ ಸುತ್ತಿನ ಬಾಗಿಲು ತೆರೆಯಿತು.
ಇವರಲ್ಲಿ ಪ್ರಜ್ಞೇಶ್ ಕೂಡ ಒಬ್ಬರು. ಎಡಗೈ ಆಟಗಾರನಾಗಿರುವ ಅವರು ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಜಪಾನಿನ ತತ್ಸುಮ ಇಟೊ ವಿರುದ್ಧ ಸೆಣಸಲಿದ್ದಾರೆ. ಭಾರತೀಯನಿಗಿಂತ 22 ರ್‍ಯಾಂಕಿಂಗ್ ಕೆಳಗಿರುವ ಇಟೊ (145), ವೈಲ್ಡ್‌ಕಾರ್ಡ್ ಮೂಲಕ ಪ್ರವೇಶ ಪಡೆದಿದ್ದಾರೆ. ಇಲ್ಲಿ ಗೆದ್ದರೆ ಪ್ರಜ್ಞೇಶ್‌ಗೆ ವಿಶ್ವದ ನಂ.2 ಆಟಗಾರ ನೊವಾಕ್ ಜೊಕೋವಿಕ್ ಸವಾಲು ಎದುರಾಗುವ ಸಾಧ್ಯತೆ ಇದೆ.
ಜೊಕೋ ವಿಚಾರ ಮತ್ತೆ…
“ಸದ್ಯ ನಾನು ಮೊದಲ ಸುತ್ತಿನ ಪಂದ್ಯದತ್ತ ಮಾತ್ರ ಗಮನ ಹರಿಸುತ್ತಿದ್ದೇನೆ. ಇಟೊ ಅನುಭವಿ ಟೆನಿಸಿಗ. ಅವರು ಟಾಪ್-100 ರ್‍ಯಾಂಕಿಂಗ್ ಯಾದಿಯನ್ನೂ ಅಲಂಕರಿಸಿದ್ದಾರೆ. ಮೊದಲ ಸುತ್ತು ದಾಟಬೇಕಾದರೆ ಅವರೆದುರು ಉತ್ತಮ ಮಟ್ಟದ ಪ್ರದರ್ಶನ ನೀಡಬೇಕಿದೆ. ಅನಂತರ ದ್ವಿತೀಯ ಸುತ್ತು ಹಾಗೂ ಜೊಕೋವಿಕ್ ವಿಚಾರ…’ ಎಂದಿದ್ದಾರೆ ಪ್ರಜ್ಞೆàಶ್ ಗುಣೇಶ್ವರನ್.