Advertisement
ಸೋಮವಾರದ ತೃತೀಯ ಸುತ್ತಿನ ಕದನದಲ್ಲಿ ಅವರು ಟೈಬ್ರೇಕರ್ ಹೋರಾಟದಲ್ಲಿ ಮೇಲುಗೈ ಸಾಧಿಸಿ 7-6 (7-4), 7-5, 7-6 (7-3) ಅಂತರದ ಅಸಾಮಾನ್ಯ ಗೆಲುವಿನೊಂದಿಗೆ ಕ್ವಾರ್ಟರ್ ಫೈನಲಿಗೆ ನೆಗೆದರು.
Related Articles
Advertisement
14ರಷ್ಟು ಕೆಳ ಶ್ರೇಯಾಂಕದೊಂದಿಗೆ ಮೆಲ್ಬರ್ನ್ ಪಾರ್ಕ್‌ನಲ್ಲಿ ಆಡಲಿಳಿದ ಜೊಕೋವಿಕ್ ಒಟ್ಟು 6 ಸಲ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಆಗಿ ಮೂಡಿಬಂದಿದ್ದರು. ಕೊನೆಯ ಸಲ ಇಲ್ಲಿ ಪ್ರಶಸ್ತಿ ಎತ್ತಿದ್ದು 2016ರಲ್ಲಿ.
ಸುಂಗ್ ಆಸ್ಟ್ರೇಲಿಯನ್ ಓಪನ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ಏರಿಹೋದ ಮೊದಲ ದಕ್ಷಿಣ ಕೊರಿಯಾ ಆಟಗಾರ. ಇಲ್ಲಿ ಅವರು ಮತ್ತೂಬ್ಬ “ಅಪರಿಚಿತ ಆಟಗಾರ’ ಅಮೆರಿಕದ ಟೆನ್ನಿಸ್ ಸ್ಯಾಂಡ್‌ಗೆÅನ್ ವಿರುದ್ಧ ಹೋರಾಡಬೇಕಿದೆ. ಸ್ಯಾಂಡ್‌ಗೆÅನ್ 5 ಸೆಟ್‌ಗಳ ಮ್ಯಾರಥಾನ್ ಹೋರಾಟದ ಬಳಿಕ ಡೊಮಿನಿಕ್ ಥೀಮ್ ಅವರನ್ನು 6-2, 4-6, 7-6 (7-4), 6-7 (7-9), 6-3 ಅಂತರದಿಂದ ಮಣಿಸುವಲ್ಲಿ ಯಶಸ್ವಿಯಾದರು.
ಫೆಡರರ್ ಗೆಲುವಿನ ಓಟಹಾಲಿ ಚಾಂಪಿಯನ್ ರೋಜರ್ ಫೆಡರರ್ ಪ್ರಶಸ್ತಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮತ್ತೂಂದು ಹೆಜ್ಜೆ ಮುಂದಿರಿಸಿ ಕ್ವಾರ್ಟರ್ ಫೈನಲ್ ಮುಟ್ಟಿದರು. ಆದರೆ 80ನೇ ರ್‍ಯಾಂಕಿಂಗ್ ಆಟಗಾರ, ಹಂಗೇರಿಯ ಮಾರ್ಟನ್ ಫುಕೊÕàವಿಕ್ ಅವರೆದುರು ಗೆಲುವು ನಿರೀಕ್ಷಿಸಿದಷ್ಟು ಸುಲಭವಾಗಿರಲಿಲ್ಲ. ಅಂತರ 6-4, 7-6 (7-3), 6-2. ಫೆಡರರ್ ಪಾಲಿಗೆ ಇದು 14ನೇ ಆಸ್ಟ್ರೇಲಿಯನ್ ಓಪನ್ ಕ್ವಾರ್ಟರ್ ಫೈನಲ್. 1977ರ ಬಳಿಕ ಇಲ್ಲಿ ಎಂಟರ ಸುತ್ತು ಪ್ರವೇಶಿಸಿದ ಅತಿ ಹಿರಿಯ ಆಟಗಾರನೆಂಬ ದಾಖಲೆ ಈಗ ಫೆಡರರ್ ಪಾಲಾಗಿದೆ. ಅಂದು ಕೆನ್ ರೋಸ್‌ವಾಲ್ ಈ ಸಾಧನೆ ಮಾಡಿದ್ದರು. ರೋಜರ್ ಫೆಡರರ್ ಅವರ ಕ್ವಾರ್ಟರ್ ಫೈನಲ್ ಎದುರಾಳಿ ಜೆಕ್ ಗಣರಾಜ್ಯದ ಥಾಮಸ್ ಬೆರ್ಡಿಶ್. ಇನ್ನೊಂದು ಪಂದ್ಯದಲ್ಲಿ ಬೆರ್ಡಿಶ್ ಇಟೆಲಿಯ ಫ್ಯಾಬಿಯೊ ಫೊಗಿನಿ ವಿರುದ್ಧ 6-1, 6-4, 6-4 ಅಂತರದ ಗೆಲುವು ಸಾಧಿಸಿದರು.