Advertisement
2018ರಲ್ಲಿ ಕ್ವಾರ್ಟರ್ ಫೈನಲ್‌ನಲ್ಲಿ ಎಡವಿದ್ದ ನಡಾಲ್, ಈ ಹಾದಿಯಲ್ಲಿ ಜೆಕ್ ಆಟಗಾರ ಥಾಮಸ್ ಬೆರ್ಡಿಶ್ ಅವರನ್ನು ಎದುರಿಸಲಿದ್ದಾರೆ. ಬೆರ್ಡಿಶ್ ಆರ್ಜೆಂಟೀನಾದ ಡೀಗೊ ಶಾರ್ಟ್ಸ್ಮನ್ ವಿರುದ್ಧ 5-7, 6-3, 7-5, 6-4 ಅಂತರದ ಗೆಲುವು ಒಲಿಸಿಕೊಂಡರು.
ಹಾಲಿ ಚಾಂಪಿಯನ್ ರೋಜರ್ ಫೆಡರರ್ ಕೂಡ 3ನೇ ಸುತ್ತು ದಾಟಿದ್ದಾರೆ. ಅವರು ಅಮೆರಿಕದ 21ರ ಹರೆಯದ ಟಯ್ಲರ್ ಫ್ರಿಟ್ಜ್ ವಿರುದ್ಧ 6-2, 7-5, 6-2 ಅಂತರದಿಂದ ಗೆಲುವು ಸಾಧಿಸಿದರು. ಇದು “ರಾಡ್ ಲೆವರ್ ಅರೆನಾ’ದಲ್ಲಿ ಫೆಡರರ್ ಆಡಿದ 100ನೇ ಪಂದ್ಯವೆಂಬುದು ವಿಶೇಷ. ಅವರ ಮುಂದಿನ ಎದುರಾಳಿ ಗ್ರೀಕ್‌ನ 14ನೇ ಶ್ರೇಯಾಂಕಿತ ಸ್ಟೆಫನಸ್ ಸಿಸಿಪಸ್. ಡಿಮಿಟ್ರೋವ್ ಮುನ್ನಡೆ
ಬಲ್ಗೇರಿಯಾದ ಗ್ರಿಗರ್ ಡಿಮಿಟ್ರೋವ್ ಅಂತಿಮ 16ರ ಸುತ್ತು ತಲುಪಿದ್ದಾರೆ. 3ನೇ ಸುತ್ತಿನ ಸೆಣಸಾಟದಲ್ಲಿ ಅವರು ಇಟಲಿಯ ಥಾಮಸ್ ಫ್ಯಾಬಿಯಾನೊ ವಿರುದ್ಧ 7-6 (7-5), 6-4, 6-4 ಅಂತರದಿಂದ ಮೇಲುಗೈ ಸಾಧಿಸಿದರು. ಇವರ ಮುಂದಿನ ಎದುರಾಳಿ ಅಮೆರಿಕದ ಫ್ರಾನ್ಸೆಸ್ ಟಿಯಾಫೊ. ಇಟಲಿಯ ಆ್ಯಂಡ್ರಿಯಾಸ್ ಸೆಪ್ಪಿ ವಿರುದ್ಧ ಟಿಯಾಫೊ 5 ಸೆಟ್‌ಗಳ ಕಾದಾಟದ ಬಳಿಕ ಜಯ ಕಾಣುವಲ್ಲಿ ಯಶಸ್ವಿಯಾದರು. ರವಿವಾರ ಟಿಯಾಫೊ ಅವರ 21ನೇ ಬರ್ತ್‌ಡೇ ಆಗಿದ್ದು, ಗೆದ್ದರೆ ಅದೊಂದು ಸ್ಮರಣೀಯ ಉಡುಗೊರೆಯಾಗಲಿದೆ.