Advertisement
ಆದರೆ ಯುಎಸ್ ಓಪನ್ ಚಾಂಪಿಯನ್ ಖ್ಯಾತಿಯ ಡೊಮಿನಿಕ್ ಥೀಮ್, ಕಳೆದ ಸಲದ ಫೈನಲಿಸ್ಟ್ ಗಾರ್ಬಿನ್ ಮುಗುರುಜಾ ಸೋತು ಹೊರಬಿದ್ದಿದ್ದಾರೆ.
Related Articles
Advertisement
ಕಳೆದ ಸಲದ ಫೈನಲ್‌ನಲ್ಲಿ ಎಡವಿದ ಥೀಮ್ ಈ ಬಾರಿ 4ನೇ ಸುತ್ತಿನಲ್ಲೇ ಆಟ ಮುಗಿಸಿದರು. ಬಲ್ಗೇರಿಯಾದ ಗ್ರಿಗರ್ ಡಿಮಿಟ್ರೋವ್ 6-4, 6-4, 6-0 ಅಂತರದಿಂದ ಥೀಮ್ ಆಟವನ್ನು ಕೊನೆಗೊಳಿಸಿದರು. ಡಿಮಿಟ್ರೋವ್ ಅವರ ಮುಂದಿನ ಎದುರಾಳಿ ರಶ್ಯದ ಅಸ್ಲಾನ್ ಕರತ್ಸೇವ್. ಮೊದಲ ಗ್ರ್ಯಾನ್‌ಸ್ಲಾಮ್ ಆಡುತ್ತಿರುವ ಕರತ್ಸೇವ್ 5 ಸೆಟ್‌ಗಳ ಸೆಣಸಾಟದ ಬಳಿಕ ಕೆನಡಾದ ಫೆಲಿಕ್ಸ್ ಔಗರ್ ಅಲಿಯಾಸಿಮ್ ಅವರನ್ನು ಮಣಿಸಿದರು. ಅಂತರ 3-6, 1-6, 6-3, 6-3, 6-4.
ಸೆರೆನಾ ವರ್ಸಸ್ ಹಾಲೆಪ್ :
ಸೆರೆನಾ ವಿಲಿಯಮ್ಸ್ 7ನೇ ಶ್ರೇಯಾಂಕದ ಬೆಲರೂಸಿಯನ್ ಆಟಗಾರ್ತಿ ಅರಿನಾ ಸಬಲೆಂಕಾ ಅವರನ್ನು 6-4, 2-6, 6-4ರಿಂದ ಹಿಮ್ಮೆಟ್ಟಿಸಿದರು. ಕ್ವಾರ್ಟರ್ ಫೈನಲ್‌ನಲ್ಲಿ ಸೆರೆನಾ ಎದುರಾಳಿ ಸಿಮೋನಾ ಹಾಲೆಪ್. ರೊಮೇನಿಯದ ಹಾಲೆಪ್ ಪೋಲೆಂಡ್‌ನ ಐಗಾ ಸ್ವಿಯಾಟೆಕ್ ಅವರಿಗೆ 3-6, 6-1, 6-4 ಅಂತರದ ಸೋಲುಣಿಸಿದರು.
ನವೋಮಿ ಒಸಾಕಾ ಸ್ಪೇನಿನ ಮುಗುರುಜಾ ವಿರುದ್ಧ 4-6, 6-4, 7-5 ಅಂತರದ ರೋಚಕ ಜಯ ಸಾಧಿಸಿದರು. ಒಸಾಕಾ ಅವರ ಕ್ವಾ.ಫೈನಲ್ ಎದುರಾಳಿ ತೈವಾನ್‌ನ ಶೀ ಸು ವೀ. ಇವರಿಗೆ ಶರಣಾದವರು ಜೆಕ್‌ನ ಮಾರ್ಕೆಟಾ ವೊಂಡ್ರೂಸೋವಾ.