Advertisement

ಒಸಾಕಾ ವಿಶ್ವದ ನಂ.1 ಆಟಗಾರ್ತಿ

12:30 AM Jan 29, 2019 | |

ಪ್ಯಾರಿಸ್‌: ಸೋಮವಾರ ಬಿಡುಗಡೆಗೊಂಡ ನೂತನ ಡಬ್ಲ್ಯುಟಿಎ ರ್‍ಯಾಂಕಿಂಗ್‌ನಲ್ಲಿ ಆಸ್ಟ್ರೇಲಿಯನ್‌ ಓಪನ್‌ ಚಾಂಪಿಯನ್‌, ಜಪಾನಿನ ತಾರೆ ನವೋಮಿ ಒಸಾಕಾ ಅಗ್ರಸ್ಥಾನಕ್ಕೇರಿದ್ದಾರೆ. ಒಸಾಕಾ ಈ ಎತ್ತರ ತಲುಪಿದ್ದು ಇದೇ ಮೊದಲು. ಹಾಗೆಯೇ ನಂ.1 ಎನಿಸಿಕೊಂಡ ಜಪಾನಿನ ಹಾಗೂ ಏಶ್ಯದ ಪ್ರಥಮ ಆಟಗಾರ್ತಿ ಎಂಬ ಹೆಗ್ಗಳಿಕೆ ಒಸಾಕಾ ಅವರದ್ದಾಗಿದೆ. ಈವರೆಗೆ ಚೀನದ ಲೀ ನಾ ನಂ.2 ಎನಿಸಿದ್ದೇ ಏಶ್ಯದ ದಾಖಲೆಯಾಗಿತ್ತು.

Advertisement

ಆಸ್ಟ್ರೇಲಿಯನ್‌ ಓಪನ್‌ ಕೂಟದ ಆರಂಭದ ವೇಳೆ ಒಸಾಕಾ ವಿಶ್ವ ರ್‍ಯಾಂಕಿಂಗ್‌ನಲ್ಲಿ 4ನೇ ಸ್ಥಾನದಲ್ಲಿದ್ದರು. ಫೈನಲ್‌ನಲ್ಲಿ ಜೆಕ್‌ ಗಣರಾಜ್ಯದ ಪೆಟ್ರಾ ಕ್ವಿಟೋವಾ ಅವರನ್ನು ಸೋಲಿಸಿ ಪ್ರಶಸ್ತಿ ಜಯಿಸಿದ ಬಳಿಕ ಒಸಾಕಾ ಅಗ್ರಸ್ಥಾನಕ್ಕೆ ನೆಗೆದರು. ರನ್ನರ್‌ ಅಪ್‌ ಕ್ವಿಟೋವಾ 4 ಸ್ಥಾನಗಳ ಜಿಗಿತ ಕಂಡು ದ್ವಿತೀಯ ಸ್ಥಾನಕ್ಕೆ ಬಂದಿದ್ದಾರೆ.

ನವೋಮಿ ಒಸಾಕಾ ವೃತ್ತಿಜೀವನದಲ್ಲಿ ಜಯಿಸಿದ್ದು 3 ಪ್ರಶಸ್ತಿ ಮಾತ್ರ. ಇದರಲ್ಲಿ ಯುಎಸ್‌ ಓಪನ್‌, ಆಸ್ಟ್ರೇಲಿಯನ್‌ ಓಪನ್‌ ಪ್ರಮುಖವಾದುದು. 21 ವರ್ಷದ ಒಸಾಕಾ ದಶಕದ ಬಳಿಕ ಅಗ್ರಸ್ಥಾನ ಸಂಪಾದಿಸಿದ ಕಿರಿಯ ಆಟಗಾರ್ತಿ ಎನಿಸಿಕೊಂಡಿದ್ದಾರೆ. 2010ರಲ್ಲಿ 20ರ ಹರೆಯದಲ್ಲಿ ಕ್ಯಾರೋಲಿನಾ ವೋಜ್ನಿಯಾಕಿ ನಂ. ವನ್‌ ಸ್ಥಾನ ಸಂಪಾದಿಸಿದ್ದರು.

ಹಾಲೆಪ್‌ ಒಂದರಿಂದ ಮೂರಕ್ಕೆ
ಆಸ್ಟ್ರೇಲಿಯನ್‌ ಓಪನ್‌ನ ಪ್ರಿ-ಕ್ವಾರ್ಟರ್‌ ಫೈನಲ್‌ನಲ್ಲಿ ಸೆರೆನಾ ವಿಲಿಯಮ್ಸ್‌ ವಿರುದ್ಧ ಸೋತ ಸಿಮೋನಾ ಹಾಲೆಪ್‌ ಅಗ್ರಸ್ಥಾನದಿಂದ ಕೆಳಕ್ಕಿಳಿದು 3ನೇ ಸ್ಥಾನಕ್ಕೆ ಬಂದಿದ್ದಾರೆ. ಕ್ಯಾರೋಲಿನ್‌ ವೋಜ್ನಿಯಾಕಿ 6 ಸ್ಥಾನ ಹಿಂದೆ ಹೋಗಿದ್ದು, 9ನೇ ಸ್ಥಾನದಲ್ಲಿದ್ದಾರೆ. ಅಮೆರಿಕದ ಡೇನಿಯಲ್‌ ಕಾಲಿನ್ಸ್‌ 12 ಸ್ಥಾನಗಳ ಏರಿಕೆ ಕಂಡು 23ನೇ ಸ್ಥಾನಕ್ಕೇರಿದರೆ, ಸೆರೆನಾ ವಿಲಿಯಮ್ಸ್‌ 5 ಸ್ಥಾನಗಳ ಏರಿಕೆಯೊಂದಿಗೆ 11 ಸ್ಥಾನದಲ್ಲಿದ್ದಾರೆ.

ಆಸ್ಟ್ರೇಲಿಯನ್‌ ಓಪನ್‌ ಕೂಟದ ಸೆಮಿಫೈನಲ್‌ ಪ್ರವೇಶಿಸಿದ್ದ ಜೆಕ್‌ ಗಣರಾಜ್ಯದ ಕ್ಯಾರೋಲಿನಾ ಪ್ಲಿಸ್ಕೋವಾ 3 ಸ್ಥಾನಗಳ ಏರಿಕೆ ಕಂಡು 5ನೇ ಸ್ಥಾನ ಪಡೆದಿದ್ದಾರೆ.

Advertisement

ಆರಕ್ಕಿಳಿದ ಫೆಡರರ್‌
ಪುರುಷರ ವಿಭಾಗದ ಚಾಂಪಿಯನ್‌ ನೊವಾಕ್‌ ಜೊಕೋವಿಕ್‌ ಅಗ್ರಸ್ಥಾನದಲ್ಲೇ ಮುಂದುವರಿದಿದ್ದು, ತನ್ನ ಸ್ಥಾನವನ್ನು ಇನ್ನಷ್ಟು ಭದ್ರಗೊಳಿಸಿದ್ದಾರೆ. ರೋಜರ್‌ ಫೆಡರರ್‌ ಮೂರರಿಂದ 6ನೇ ಸ್ಥಾನಕ್ಕೆ ಜಾರಿದ್ದಾರೆ. ಫೆಡರರ್‌ ಅವರ 3ನೇ ಸ್ಥಾನ ಅಲೆಕ್ಸಾಂಡರ್‌ ಜ್ವೆರೇವ್‌ ಪಾಲಾಗಿದೆ. ಗ್ರೀಕ್‌ನ ಸ್ಟೆಫ‌ನಸ್‌ ಸಿಸಿಪಸ್‌ 12ಕ್ಕೆ ಏರಿದ್ದಾರೆ.

ಟಾಪ್‌-10 ವನಿತಾ ರ್‍ಯಾಂಕಿಂಗ್‌
1.    ನವೋಮಿ ಒಸಾಕಾ    7,030
2.    ಪೆಟ್ರಾ ಕ್ವಿಟೋವಾ    6,290
3.    ಸಿಮೋನಾ ಹಾಲೆಪ್‌    5,582
4.    ಸ್ಲೋನ್‌ ಸ್ಟೀಫ‌ನ್ಸ್‌     5,307
5.    ಕ್ಯಾರೋಲಿನಾ ಪ್ಲಿಸ್ಕೋವಾ    5,100
6.    ಆ್ಯಂಜೆಲಿಕಾ ಕೆರ್ಬರ್‌    4,965
7.    ಎಲಿನಾ ಸ್ವಿಟೋಲಿನಾ    4,940
8.    ಕಿಕಿ ಬರ್ಟೆನ್ಸ್‌    4, 430
9.    ಕ್ಯಾರೋಲಿನ್‌ ವೋಜ್ನಿಯಾಕಿ    3,566
10. ಅರಿನಾ ಸಬಲೆಂಕಾ    3,406

ಟಾಪ್‌-10 ಪುರುಷರ ರ್‍ಯಾಂಕಿಂಗ್‌
1. ನೊವಾಕ್‌ ಜೊಕೋವಿಕ್‌    10,955
2. ರಫೆಲ್‌ ನಡಾಲ್‌    8,320
3. ಅಲೆಕ್ಸಾಂಡರ್‌ ಜ್ವೆರೇವ್‌    6,475
4. ಡೆಲ್‌ ಪೊಟ್ರೊ    5,060
5. ಕೆವಿನ್‌ ಆ್ಯಂಡರ್ಸನ್‌    4,845
6. ರೋಜರ್‌ ಫೆಡರರ್‌    4,600
7. ಕೀ ನಿಶಿಕೊರಿ    4,110
8. ಡೊಮಿನಿಕ್‌ ಥೀಮ್‌    3,960
9. ಜಾನ್‌ ಇಸ್ನರ್‌    3,155
10. ಮರಿನ್‌ ಸಿಲಿಕ್‌    3,140

Advertisement

Udayavani is now on Telegram. Click here to join our channel and stay updated with the latest news.

Next