Advertisement
ಎರಡು ಸೆಟ್‌ಗಳ ಕಠಿನ ಹೋರಾಟದಲ್ಲಿ ಹಾಲೆಪ್ ಆಸ್ಟ್ರೇಲಿಯದ 17ರ ಹರೆಯದ ವೈಲ್ಡ್ ಕಾರ್ಡ್ ಆಟಗಾರ್ತಿ ಡೆಸ್ಟಾನೀ ಐಯವಾ ಅವರನ್ನು 7-6 (7-5), 6-1 ಸೆಟ್‌ಗಳಿಂದ ಸೋಲಿಸಲು ಯಶಸ್ವಿಯಾದರು. ಮೊದಲ ಸೆಟ್‌ನಲ್ಲಿ 2-5ರಿಂದ ಹಿನ್ನಡೆಯಲ್ಲಿದ್ದರೂ ಅದ್ಭುತ ಆಟದ ಪ್ರದರ್ಶನ ನೀಡಿದ ಹಾಲೆಪ್ ನೋವಿನ ನಡುವೆಯೂ ಹೋರಾಡಿ ಗೆಲುವು ಒಲಿಸಿಕೊಂಡರು. ಸ್ನಾಯು ಸೆಳೆತದಿಂದಾಗಿ ಆಟದ ನಡುವೆ ಚಿಕಿತ್ಸೆ ಪಡೆದಿದ್ದರು. ಈ ಹೋರಾಟ ಒಂದು ಗಂಟೆ ಮತ್ತು 51 ನಿಮಿಷಗಳವರೆಗೆ ಸಾಗಿತ್ತು. ಹಾಲೆಪ್ ಮುಂದಿನ ಸುತ್ತಿನಲ್ಲಿ ಕೆನಡದ ಎಗುನಿ ಬೌಶರ್ಡ್ ಅವರನ್ನು ಎದುರಿಸಲಿದ್ದಾರೆ. ಮೆಲ್ಬರ್ನ್ನಲ್ಲಿ ಅವರೊಮ್ಮೆ ಸೆಮಿಫೈನಲ್‌ವರೆಗೆ ತಲುಪಿದ್ದ ಬೌಶರ್ಡ್ 2014ರ ವಿಂಬಲ್ಡನ್‌ನಲ್ಲಿ ಫೈನಲಿಗೇರಿದ್ದರು.
ಮಾಜಿ ಚಾಂಪಿಯನ್ ಮರಿಯಾ ಶರಪೋವಾ ಜರ್ಮನಿಯ ತಜಾನಾ ಮರಿಯಾ ಅವರನ್ನು 6-1, 6-4 ಸೆಟ್‌ಗಳಿಂದ ಸೋಲಿಸಿ ದ್ವಿತೀಯ ಸುತ್ತಿಗೇರಿದ್ದಾರೆ. ಅಲ್ಲಿ ಅವರಿಗೆ ಕಠಿನ ಎದುರಾಳಿ ಸಿಗುವ ಸಾಧ್ಯತೆಯಿದೆ. ಗೆಲುವಿನಿಂದ ಖುಷಿಯಾಗಿದೆ. ಇಲ್ಲಿ ಆಡಲು ಇಷ್ಟಪಡುವೆ ಎಂದು ಶರಪೋವಾ ಹೇಳಿದ್ದಾರೆ. 2016ರಲ್ಲಿ ಇಲ್ಲಿ ಪ್ರಶಸ್ತಿ ಗೆದ್ದಿರುವ ಆ್ಯಂಜೆಲಿಕ್ ಕೆರ್ಬರ್ ಅವರು ಅನ್ನಾ ಲೆನಾ ಫ್ರೈಡ್‌ಸಾಮ್ ಅವರನ್ನು 6-0, 6-4 ಸೆಟ್‌ಗಳಿಂದ ಸೋಲಿಸಿದ್ದಾರೆ. ಕೆರ್ಬರ್ ಮುಂದಿನ ವಾರ 30ನೇ ವರ್ಷಕ್ಕೆ ಕಾಲಿಡಲಿದ್ದಾರೆ. ದ್ವಿತೀಯ ಶ್ರೇಯಾಂಕದ ಕ್ಯಾರೋಲಿನ್ ವೋಜ್ನಿಯಾಕಿ ಅವರು ರೊಮಾನಿಯಾದ ಮಿಹೇಲಾ ಬುಝನೆಸ್ಕಾ ಅವರನ್ನು 6-2, 6-3 ಸೆಟ್‌ಗಳಿಂದ ಸೋಲಿಸಿ ದ್ವಿತೀಯ ಸುತ್ತು ತಲುಪಿದ್ದಾರೆ. ಮುಂದಿನ ಸುತ್ತಿನಲ್ಲಿ ಅವರು ಜಪಾನಿನ ಮಿಸಾ ಎಗುಚಿ ಅಥವಾ ಕ್ರೊವೇಶಿಯದ ಜಾನಾ ಫೆಟ್ ಅವರನ್ನು ಎದುರಿಸಲಿದ್ದಾರೆ.
Related Articles
ಮರಿಯಾ ಸಕ್ಕಾರಿ ಅವರನ್ನು 6-2, 6-7 (5-7), 6-4 ಸೆಟ್‌ಗಳಿಂದ ಸೋಲಿಸಿದ್ದರು.
Advertisement