Advertisement

ಕೊನೆಗೂ ತವರು ತಲುಪಿದ ಐಪಿಎಲ್ ಆಡಿದ ಆಸ್ಟ್ರೇಲಿಯಾ ಆಟಗಾರರು

02:24 PM May 17, 2021 | Team Udayavani |

ಸಿಡ್ನಿ: ಕೋವಿಡ್ 19 ಕಾರಣದಿಂದ 14ನೇ ಆವೃತ್ತಿಯ ಐಪಿಎಲ್ ಅಮಾನತಾದ ಕಾರಣ ಭಾರತದಿಂದ ಹೊರಟಿದ್ದ ಆಸೀಸ್ ಆಟಗಾರರು ಕೊನೆಗೂ ತವರು ತಲುಪಿದ್ದಾರೆ. ಕೆಲವು ದಿನಗಳಿಂದ ಆಸೀಸ್ ಆಟಗಾರರು ಮಾಲ್ಡೀವ್ಸ್ ನಲ್ಲಿದ್ದರು.

Advertisement

ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಸೇರಿದಂತೆ ಆಟಗಾರರು ಇಂದು ಬೆಳಗ್ಗೆ ಚಾರ್ಟರ್ ವಿಮಾನದ ಮೂಲಕ ಸಿಡ್ನಿ ತಲುಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.

ಇದನ್ನೂ ಓದಿ:ಐಪಿಎಲ್ ಆಡಿದ ಇಂಗ್ಲೆಂಡ್ ಆಟಗಾರರಿಗೆ ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ ನಲ್ಲಿ ಅವಕಾಶವಿಲ್ಲ!

ಮೇ.4ರಂದು ಐಪಿಎಲ್ ಅಮಾನತಾದ ಬಳಿಕ ಮೇ ಆರರಂದು ಆಸೀಸ್ ಆಟಗಾರರನ್ನು ಬಿಸಿಸಿಐ ವಿಶೇಷ ವಿಮಾನದ ಮೂಲಕ ಮಾಲ್ಡೀವ್ಸ್ ಗೆ ಕಳುಹಿಸುವ ವ್ಯವಸ್ಥೆ ಮಾಡಿತ್ತು. ಆಟಗಾರರು, ಕೋಚ್ ಗಳು, ಕಮೆಂಟೇಟರ್ಸ್ ಸೇರಿ 38 ಮಂದಿ ಆಸ್ಟ್ರೇಲಿಯನ್ನರನ್ನು ಕಳುಹಿಸಲಾಗಿತ್ತು.

ಸಿಡ್ನಿ ತಲುಪಿರುವ ಆಸೀಸ್ ಆಟಗಾರರು ಮತ್ತೆ 14 ದಿನಗಳ ಕಾಲ ಕಠಿಣ ಕ್ವಾರಂಟೈನ್ ನಲ್ಲಿರಬೇಕಾಗಿದೆ. ಆ್ಯಡಂ ಜಾಂಪಾ, ಕೇನ್ ರಿಚರ್ಡ್ ಸನ್ ಮೊದಲೇ ಐಪಿಎಲ್ ತೊರೆದು ಆಸ್ಟ್ರೇಲಿಯಾ ತಲುಪಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next