Advertisement

Convict;ಚೀನಾಕ್ಕಾಗಿ ರಹಸ್ಯವಾಗಿ ಕೆಲಸ: ಉದ್ಯಮಿಗೆ ಶಿಕ್ಷೆ ವಿಧಿಸಿದ ಆಸ್ಟ್ರೇಲಿಯ ಕೋರ್ಟ್

08:24 PM Dec 20, 2023 | Team Udayavani |

ಮೆಲ್ಬೋರ್ನ್: ಚೀನಾದ ಕಮ್ಯುನಿಸ್ಟ್ ಪಕ್ಷಕ್ಕಾಗಿ ರಹಸ್ಯವಾಗಿ ಕೆಲಸ ಮಾಡಿದ್ದಕ್ಕಾಗಿ ಆಸ್ಟ್ರೇಲಿಯದ ಉದ್ಯಮಿಯೊಬ್ಬರನ್ನು ದೋಷಿ ಎಂದು ಆಸ್ಟ್ರೇಲಿಯದ ಮೆಲ್ಬೋರ್ನ್ ನ್ಯಾಯಾಲಯ ತೀರ್ಪು ನೀಡಿದೆ. ದೇಶದ ವಿದೇಶಿ ಪ್ರಭಾವದ ಕಾನೂನುಗಳ ಅಡಿಯಲ್ಲಿ ಈ ರೀತಿಯಲ್ಲಿ ನೀಡಿದ ಮೊದಲ ತೀರ್ಪು ಆಗಿದೆ ಎಂದು ಬುಧವಾರ ಸಿಎನ್ಎನ್ ವರದಿ ಮಾಡಿದೆ.

Advertisement

ಆಸ್ಟ್ರೇಲಿಯದ ಉದ್ಯಮಿ ಮೆಲ್ಬೋರ್ನ್‌ನಲ್ಲಿರುವ ಚೀನೀ ಸಮುದಾಯದ ಪ್ರಮುಖ ವ್ಯಕ್ತಿ ಡಿ ಸಾನ್ಹ್ ಡುವಾಂಗ್(68) ಅವರಿಗೆ ವಿದೇಶಿ ಹಸ್ತಕ್ಷೇಪದ ಕೃತ್ಯಕ್ಕೆ ತಯಾರಿಗಾಗಿ ತೀರ್ಪುಗಾರರ ತಂಡದಿಂದ ಶಿಕ್ಷೆ ವಿಧಿಸಲಾಗಿದೆ. ಅಪರಾಧಕ್ಕೆ ಗರಿಷ್ಠ 10 ವರ್ಷಗಳ ಜೈಲು ಶಿಕ್ಷೆಯನ್ನು ಹೊಂದಿರಲಿದೆ.

ದೇಶೀಯ ರಾಜಕೀಯದಲ್ಲಿ ವಿದೇಶಿ ಪ್ರಭಾವವನ್ನು ಎದುರಿಸಲು 2018 ರಲ್ಲಿ ಆಸ್ಟ್ರೇಲಿಯ ಪರಿಚಯಿಸಿದ ಕಾನೂನುಗಳ ಅಡಿಯಲ್ಲಿ ಡುವಾಂಗ್ ಮೊದಲ ಅಪರಾಧಿ ಎಂದು ಸಿಎನ್ ಎನ್ ವರದಿ ಮಾಡಿದೆ.

ಆಸ್ಟ್ರೇಲಿಯ ರಾಜಕೀಯದ ಮೇಲೆ ಪ್ರಭಾವ ಬೀರಲು ಬೀಜಿಂಗ್‌ನ ಪ್ರಯತ್ನಗಳನ್ನು ಒಳಗೊಂಡ ಹಗರಣಗಳ ಸರಣಿಯ ನಂತರ ಬಂದ ಶಾಸನವು ದೇಶದ ಅತಿದೊಡ್ಡ ವ್ಯಾಪಾರ ಪಾಲುದಾರ ಚೀನಾದೊಂದಿಗೆ ಉದ್ವಿಗ್ನತೆಯನ್ನು ಹೆಚ್ಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next