Advertisement

ಇಂದೋರ್ ಟೆಸ್ಟ್ ಗೆದ್ದು ತಿರುಗೇಟು ನೀಡಿದ ಆಸ್ಟ್ರೇಲಿಯಾ: ರೋಹಿತ್ ಪಡೆಗೆ ಮುಖಭಂಗ

10:54 AM Mar 03, 2023 | Team Udayavani |

ಇಂದೋರ್: ಬಾರ್ಡರ್- ಗಾವಸ್ಕರ್ ಟ್ರೋಫಿ ಸರಣಿಯಲ್ಲಿ ಮೊದಲ ಬಾರಿ ಆಸ್ಟ್ರೇಲಿಯಾ ತಂಡ ಗೆಲುವಿನ ನಗೆ ಬೀರಿದೆ. ಇಂದೋರ್ ಟೆಸ್ಟ್ ಪಂದ್ಯವನ್ನು 9 ವಿಕೆಟ್ ಅಂತರದಿಂದ ಗೆದ್ದ ಸ್ಟೀವ್ ಸ್ಮಿತ್ ಪಡೆಯು ತಿರುಗೇಟು ನೀಡಿದೆ.

Advertisement

ಗೆಲುವಿಗೆ 76 ರನ್ ಗುರಿ ಪಡೆದ ಆಸೀಸ್ ಕೇವಲ ಒಂದು ವಿಕೆಟ್ ಕಳೆದುಕೊಂಡು ಗೆಲುವಿನ ದಡ ಮುಟ್ಟಿತು. ಮೊದಲ ಓವರ್ ನಲ್ಲೇ ಉಸ್ಮಾನ್ ಖವಾಜಾ ವಿಕೆಟ್ ಕಳೆದುಕೊಂಡರೂ ಮಾರ್ನಸ್ ಲಬುಶೇನ್ ಮತ್ತು ಟ್ರಾವಿಸ್ ಹೆಡ್ ಅವರ ಸಮಯೋಚಿತ ಬ್ಯಾಟಿಂಗ್ ನಿಂದ ಜಯ ಆಸೀಸ್ ಪಾಲಿಗಾಯಿತು.

ಇದನ್ನೂ ಓದಿ:ನಿತ್ಯಾನಂದನಿಗೆ ಭಾರತದಿಂದ ಕಿರುಕುಳ?; ಸ್ಪಷ್ಟನೆ ನೀಡಿದ ವಿಜಯಪ್ರಿಯಾ ನಿತ್ಯಾನಂದ

ಹೆಡ್ ಅಜೇಯ 49 ಮತ್ತು ಲಬುಶೇನ್ ಅಜೇಯ 28 ರನ್ ಗಳಿಸಿದರು. ಸತತ ಮೂರನೇ ಪಂದ್ಯವೂ ಮೂರೇ ದಿನಕ್ಕೆ ಅಂತ್ಯಕಂಡಿತು.

10 ವರ್ಷಗಳಲ್ಲಿ 3 ಸೋಲು: ಭಾರತ ಕಳೆದ 10 ವರ್ಷಗಳಲ್ಲಿ ತವರಿನಲ್ಲಿ ಕೇವಲ ಎರಡು ಟೆಸ್ಟ್ ಗಳಲ್ಲಿ ಸೋಲನ್ನು ಕಂಡಿದೆ. ಈ ಸಂಖ್ಯೆ ಈಗ ಮೂರಕ್ಕೇರಿದೆ. 2021ರ ಫೆಬ್ರವರಿಯಲ್ಲಿ ನಡೆದ ಪಂದ್ಯದಲ್ಲಿ ಭಾರತವು ಇಂಗ್ಲೆಂಡ್‌ ವಿರುದ್ಧ ಹಾಗೂ 2017ರಲ್ಲಿ ಆಸ್ಟ್ರೇಲಿಯ ವಿರುದ್ಧ ಭಾರೀ ಅಂತರದಿಂದ ಸೋಲನ್ನು ಕಂಡಿದೆ. ಪುಣೆಯಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯ 333 ರನ್ನುಗಳಿಂದ ಜಯಭೇರಿ ಬಾರಿಸಿದ್ದರೆ ಇಂಗ್ಲೆಂಡ್‌ ತಂಡವು ಚೆನ್ನೈಯಲ್ಲಿ ನಡೆದ ಪಂದ್ಯದಲ್ಲಿ 227 ರನ್ನುಗಳಿಂದ ಭಾರತವನ್ನು ಸೋಲಿಸಿತು.

Advertisement

ಈಗಾಗಲೇ ಬಾರ್ಡರ್‌-ಗಾವಸ್ಕರ್‌ ಟ್ರೋಫಿಯನ್ನು ಉಳಿಸಿಕೊಂಡಿರುವ ಭಾರತ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನ ಫೈನಲಿ ಗೇರಬೇಕಾದರೆ ಇನ್ನೊಂದು ಪಂದ್ಯದಲ್ಲಿ ಗೆಲ್ಲಬೇಕಾಗಿದೆ. ಫೈನಲ್‌ ಓವಲ್‌ನಲ್ಲಿ ಜೂ. 7ರಿಂದ ಆರಂಭವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next