Advertisement
ಓಲ್ಡ್ ಟ್ರಾಫೋರ್ಡ್ ಅಂಗಳದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ಗೆ ಮೊದಲ ಓವರ್ ನಲ್ಲೇ ಸ್ಟಾರ್ಕ್ ಆಘಾತ ನೀಡಿದರು. ರಾಯ್ ಮತ್ತು ರೂಟ್ ತಾವೆದುರಿಸಿದ ಮೊದಲ ಎಸೆತದಲ್ಲೇ ಔಟಾದರು. ತಂಡಕ್ಕೆ ಆಧಾರವಾದ ಜಾನಿ ಬೆರಿಸ್ಟೋ ಶತಕ ಬಾರಿಸಿದರು. 126 ಎಸೆತ ಎದುರಿಸಿದ ಬೆರಿಸ್ಟೋ 112 ರನ್ ಬಾರಿಸಿದರು. ಕೊನೆಯಲ್ಲಿ ಸ್ಯಾಮ್ ಬಿಲ್ಲಿಂಗ್ ಮತ್ತು ಕ್ರಿಸ್ ವೋಕ್ಸ್ ಅರ್ಧಶತಕ ಬಾರಿಸಿ ತಂಡದ ಮೊತ್ತ 300 ದಾಟುವಂತೆ ನೋಡಿಕೊಂಡರು.
Related Articles
Advertisement
ಖಾತೆಯೇ ತೆರೆದಿರದ ಅಲೆಕ್ಸ್ ಕ್ಯಾರಿ ಜೋಫ್ರಾ ಆರ್ಚರ್ ಎಸೆತಕ್ಕೆ ಔಟಾದರು. ಆದರೆ ಆ ಎಸೆತ ನೋ ಬಾಲ್ ಆಗಿತ್ತು. ಇಲ್ಲಿಂದ ಆಸೀಸ್ ಆಟವೇ ಬದಲಾಯಿತು. ನಿಧಾನವಾಗಿ ಇನ್ನಿಂಗ್ಸ್ ಕಟ್ಟಿದ ಜೋಡಿ ಆಸೀಸ್ ಗೆ ಮತ್ತೆ ಗೆಲುವಿನ ಆಸೆ ಚಿಗುರಿಸಿದರು. ಕ್ಯಾರಿ 106 ರನ್ ಗಳಿಸಿದರೆ, ಮ್ಯಾಕ್ಸ್ ವೆಲ್ 108 ರನ್ ಗಳಿಸಿದರು. ಇವರಿಬ್ಬರು 212 ರನ್ ಜೊತೆಯಾಟ ನಡೆಸಿದರು.
ಕೊನೆಯ ಓವರ್ ನಲ್ಲಿ ಹತ್ತು ರನ್ ಗಳಿಸಬೇಕಾದಾಗ ಸ್ಟಾರ್ಕ್ ಸಿಕ್ಸರ್ ಮತ್ತು ಬೌಂಡರಿ ಬಾರಿಸಿ ಜಯ ಸಾಧಿಸಿದರು. ಇಂಗ್ಲೆಂಡ್ ಪರ ಕ್ರಿಸ್ ವೋಕ್ಸ್, ಜೋ ರೂಟ್ ಎರಡು ವಿಕೆಟ್ ಪಡೆದರೆ, ಆರ್ಚರ್ ಮತ್ತು ರಶೀದ್ ತಲಾ ಒಂದು ವಿಕೆಟ್ ಕಬಳಿಸಿದರು.
2-1 ಅಂತರದಲ್ಲಿ ಸರಣಿ ಗೆದ್ದ ಟಿ20 ಸೋಲಿನ ಸೇಡು ತೀರಿಸಿಕೊಂಡಿತು. ಗ್ಲೆನ್ ಮ್ಯಾಕ್ಸ್ ವೆಲ್ ಪಂದ್ಯಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.