Advertisement
ಆಸ್ಟ್ರೇಲಿಯ ಅತ್ಯಧಿಕ 5 ಸಲ ವಿಶ್ವಕಪ್ ಗೆದ್ದಿರುವ ತಂಡ ಎಂಬುದರಲ್ಲಿ ಎರಡು ಮಾತಿಲ್ಲ. ಹಾಗೆಯೇ ದಕ್ಷಿಣ ಆಫ್ರಿಕಾಕ್ಕೆ ಈವರೆಗೆ ವಿಶ್ವಕಪ್ ಫೈನಲ್ ಕೂಡ ತಲುಪಲಾಗಲಿಲ್ಲ ಎಂಬುದೂ ಸತ್ಯವೇ. ಆದರೆ ಇಲ್ಲಿ ಗತ ಇತಿಹಾಸ ಕಟ್ಟಿಕೊಂಡು ಏನೂ ಮಾಡಲು ಸಾಧ್ಯವಿಲ್ಲ. ಇಲ್ಲಿ ಪ್ರತಿಯೊಂದು ಕೂಡ “ಫ್ರೆಶ್ ಗೇಮ್’. ಆಸ್ಟ್ರೇಲಿಯ ಹೇಗೆ ಸಿಡಿದು ನಿಂತು ತಿರುಗಿ ಬಿದ್ದೀತು, ದಕ್ಷಿಣ ಆಫ್ರಿಕಾ ತನ್ನ ಲಯವನ್ನು ಹೇಗೆ ಕಾಯ್ದುಕೊಂಡು ಬಂದೀತು ಎಂಬುದಷ್ಟೇ ಇಲ್ಲಿ ಮುಖ್ಯ.
ದಕ್ಷಿಣ ಆಫ್ರಿಕಾ ಸಿಡಿದು ನಿಂತದ್ದು ಹೊಸದಿಲ್ಲಿಯ ಬ್ಯಾಟಿಂಗ್ ಟ್ರ್ಯಾಕ್‌ನಲ್ಲಿ ಎಂಬುದು ಕೂಡ ನಿಜವೇ. ಚೇಸಿಂಗ್ ವೇಳೆ ಶ್ರೀಲಂಕಾ ಕೂಡ ಬೆನ್ನಟ್ಟಿಕೊಂಡು ಬಂದು ಮುನ್ನೂರರ ಗಡಿ ದಾಟಿತ್ತು. ಹೀಗಾಗಿ ಇಲ್ಲಿ ಬೌಲಿಂಗ್ ವೈಫಲ್ಯದತ್ತ ಬೆಟ್ಟು ಮಾಡುವ ಹಾಗಿಲ್ಲ. ಗುರುವಾರದ ಪಂದ್ಯ ನಡೆಯುವುದು ಲಕ್ನೋದಲ್ಲಿ. ಇದು ಪ್ರಸಕ್ತ ವಿಶ್ವಕಪ್‌ನಲ್ಲಿ ಲಕ್ನೋದಲ್ಲಿ ಆಡಲಾಗುವ ಮೊದಲ ಪಂದ್ಯ. ಹೀಗಾಗಿ ಇಲ್ಲಿನ ಪಿಚ್ ಹೇಗೆ ವರ್ತಿಸೀತು ಎಂಬ ಕುತೂಹಲವಿದೆ.
Related Articles
Advertisement
ದಕ್ಷಿಣ ಆಫ್ರಿಕಾಕ್ಕೆ ಇಲ್ಲಿ ಮತ್ತೂಂದು ಎಡ್ವಾಂಟೇಜ್ ಇದೆ. ವಿಶ್ವಕಪ್‌ಗ್ೂ ಮುನ್ನ ಆಸ್ಟ್ರೇಲಿಯ ವಿರುದ್ಧ ಆಡಲಾದ 5 ಪಂದ್ಯಗಳ ಏಕದಿನ ಸರಣಿಯಲ್ಲಿ 0-2 ಹಿನ್ನಡೆಯಲ್ಲಿದ್ದ ಹರಿಣಗಳ ಪಡೆ ಕೊನೆಯ ಮೂರೂ ಪಂದ್ಯಗಳಲ್ಲಿ ಜಯಭೇರಿ ಮೊಳಗಿಸಿ ಸರಣಿಯನ್ನು 3-2ರಿಂದ ವಶಪಡಿಸಿಕೊಂಡಿತ್ತು. ಅದು ಲಂಕೆಯನ್ನು ಮಣಿಸಿದ್ದನ್ನು ಗಮನಿಸಿದಾಗ ವಿಶ್ವಕಪ್‌ನಲ್ಲೂ ಇದೇ ಲಯದಲ್ಲಿದ್ದಂತೆ ಭಾಸವಾಗುತ್ತಿದೆ.
ಗ್ರೀನ್ ಬದಲು ಸ್ಟೋಯಿನಿಸ್?ಭಾರತದ ವಿರುದ್ಧ ನಲವತ್ತರ ಗಡಿ ದಾಟಿದ ಆಸೀಸ್ ಆಟಗಾರರೆಂದರೆ ವಾರ್ನರ್ ಮತ್ತು ಸ್ಮಿತ್ ಮಾತ್ರ. ವಿಶ್ವಕಪ್‌ಗೆ ಕೊನೆಯ ಗಳಿಗೆಯಲ್ಲಿ ಸೇರ್ಪಡೆಗೊಂಡ ಲಬುಶೇನ್, ಮಾರ್ಷ್, ಮ್ಯಾಕ್ಸ್‌ವೆಲ್, ಕ್ಯಾರಿ, ಗ್ರೀನ್ ಅವರೆಲ್ಲ ಕ್ರೀಸ್ ಆಕ್ರಮಿಸಿಕೊಳ್ಳುವಲ್ಲಿ ವಿಫಲರಾಗಿ ದ್ದರು. ಗುರುವಾರದ ಪಂದ್ಯಕ್ಕೆ ಗ್ರೀನ್ ಬದಲು ಮಾರ್ಕಸ್ ಸ್ಟೋಯಿನಿಸ್ ಆಡಲಿಳಿಯಬಹುದು. ಅವರು ಐಪಿಎಲ್‌ನಲ್ಲಿ ಲಕ್ನೋ ಪರ ಆಡಿದ್ದು, ಇಲ್ಲಿನ ಟ್ರ್ಯಾಕ್ ಬಗ್ಗೆ ಅರಿತಿರುವುದೇ ಇದಕ್ಕೆ ಕಾರಣ. ಆಸೀಸ್ ಬಲಿಷ್ಠ, ಆದರೆ…
ಆಸ್ಟ್ರೇಲಿಯದ ಬ್ಯಾಟಿಂಗ್, ಬೌಲಿಂಗ್ ಸರದಿಯೆರಡೂ ಬಲಿಷ್ಠ. ಒಂದು ಪಂದ್ಯದಲ್ಲಿ ಸೋತಿತು ಅಂದಮಾತ್ರಕ್ಕೆ ಮಾನಸಿಕ ಒತ್ತಡಕ್ಕೆ ಸಿಲುಕಿ ಝರ್ಜರಿತಗೊಳ್ಳುವ ತಂಡ ಇದಲ್ಲ. ಈ ತಂಡಕ್ಕಿರುವಷ್ಟು ಫೈಟಿಂಗ್ ಸ್ಪಿರಿಟ್ ಬೇರೆ ಯಾವುದೇ ತಂಡಕ್ಕಿಲ್ಲ ಎಂಬುದು ಸತ್ಯ. ಪಂದ್ಯಾವಳಿತ ನಿರ್ಣಾಯಕ ಘಟ್ಟದಲ್ಲಿ ಹೇಗೆ ತಿರುಗಿ ಬೀಳಬೇಕು ಎಂಬ ವಿದ್ಯೆ ಆಸೀಸ್‌ಗೆ ಚೆನ್ನಾಗಿ ಕರಗತ. ಆದರೆ ಸ್ಪಿನ್ ನಿಭಾವಣೆಯಲ್ಲಿ ಯಶಸ್ವಿಯಾದರೆ ಮಾತ್ರ! ಬೇಕಾಗಿದ್ದಾರೆ ಮತ್ತೋರ್ವ ಸ್ಪೆಷಲಿಸ್ಟ್ ಸ್ಪಿನ್ನರ್
ಆಸ್ಟ್ರೇಲಿಯ ಭಾರತದ ಸ್ಪಿನ್ ದಾಳಿಗೆ ನೆಲಕಚ್ಚಿತ್ತು. ಜಡೇಜ, ಕುಲದೀಪ್ ಮತ್ತು ಅಶ್ವಿನ್ ಕಾಂಗರೂಗಳಿಗೆ ಕಂಟಕವಾಗಿ ಕಾಡಿದ್ದರು. ಇನ್ನೊಂದೆಡೆ ಆಸೀಸ್ ಬಳಿ ಆ್ಯಡಂ ಝಂಪ ಹೊರತುಪಡಿಸಿದರೆ “ಸೆಕೆಂಡ್ ಫ್ರಂಟ್‌ಲೈನ್’ ಸ್ಪಿನ್ನರ್ ಇರಲಿಲ್ಲ. ಆಫ್ರಿಕಾ ವಿರುದ್ಧ ಈ ಕೊರತೆ ನೀಗಿಸಿಕೊಳ್ಳಬೇಕಿದೆ.