Advertisement

ಟಿ20: ಆತಿಥೇಯ ಆಸೀಸ್‌ಗೆ ಲಂಕಾ ಸವಾಲು

10:05 AM Oct 28, 2019 | Team Udayavani |

ಅಡಿಲೇಡ್‌: ಮುಂದಿನ ವರ್ಷ ತನ್ನದೇ ನೆಲದಲ್ಲಿ ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯನ್ನು ಸಂಘಟಿಸಲಿರುವ ಆಸ್ಟ್ರೇಲಿಯ, ರವಿವಾರದಿಂದ ಶ್ರೀಲಂಕಾ ವಿರುದ್ಧ ಚುಟುಕು ಕ್ರಿಕೆಟ್‌ ಸರಣಿಯನ್ನು ಆರಂಭಿಸಲಿದೆ. ವಿಶ್ವಕಪ್‌ಗೆ ಅಭ್ಯಾಸ ನಡೆಸುವುದು ಕಾಂಗರೂ ಪಡೆಯ ಯೋಜನೆ.

Advertisement

ಈವರೆಗೆ ಟಿ20 ಮಾದರಿಯ ಕ್ರಿಕೆಟ್‌ನಲ್ಲಿ ವಿಶೇಷ ಸಾಧನೆಯನ್ನೇನೂ ಮಾಡದ ಆಸ್ಟ್ರೇಲಿಯ, ಈ ಸರಣಿಗಾಗಿ ಬಲಿಷ್ಠ ತಂಡವನ್ನೇ ಪ್ರಕಟಿಸಿದೆ. ನಿಷೇಧ ಮುಕ್ತರಾದ ಬಳಿಕ ಡೇವಿಡ್‌ ವಾರ್ನರ್‌, ಸ್ಟೀವನ್‌ ಸ್ಮಿತ್‌ ಇದೇ ಮೊದಲ ಬಾರಿಗೆ ಟಿ20 ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಇವರಲ್ಲಿ ವಾರ್ನರ್‌ ಫಾರ್ಮ್ ಬಗ್ಗೆ ಅನುಮಾನವಿದೆ. ಕಳೆದ ಆ್ಯಶಸ್‌ ಸರಣಿಯಲ್ಲಿ ವಾರ್ನರ್‌ ತೀವ್ರ ರನ್‌ ಬರಗಾಲದಲ್ಲಿದ್ದರು. ಇವರು ಫಿಂಚ್‌ ಜತೆ ಇನ್ನಿಂಗ್ಸ್‌ ಆರಂಭಿಸಲಿದ್ದಾರೆ. ಗ್ಲೆನ್‌ ಮ್ಯಾಕ್ಸ್‌ವೆಲ್‌, ಅಲೆಕ್ಸ್‌ ಕ್ಯಾರಿ ಬಿರುಸಿನ ಆಟಕ್ಕಿಳಿದರೆ ಕಾಂಗರೂ ಬ್ಯಾಟಿಂಗ್‌ ಕ್ಲಿಕ್‌ ಆಗುವುದರಲ್ಲಿ ಅನುಮಾನವಿಲ್ಲ.

ಆಸ್ಟ್ರೇಲಿಯದ ಬೌಲಿಂಗ್‌ ಸರದಿ ಕೂಡ ಘಾತಕ. ಫಾಸ್ಟ್‌, ಸ್ಪಿನ್‌ ವಿಭಾಗಗಳಲ್ಲಿ ಉತ್ತಮ ಸಮತೋಲನವಿದೆ.

ಲಂಕೆಯೇ ಮೇಲುಗೈ
ಕಳೆದ ಪಾಕಿಸ್ಥಾನ ಪ್ರವಾಸದ ವೇಳೆ ಟಿ20 ಸರಣಿಯನ್ನು ಕ್ಲೀನ್‌ಸಿÌàಪ್‌ ಆಗಿ ವಶಪಡಿಸಿಕೊಂಡ ಶ್ರೀಲಂಕಾ, ಕಾಂಗರೂ ನಾಡಿನಲ್ಲೂ ಕಮಾಲ್‌ ಮಾಡುವ ಯೋಜನೆಯಲ್ಲಿದೆ. ಆಗ ದಸುನ್‌ ಶಣಕ ನಾಯಕರಾಗಿದ್ದರು. ಲಸಿತ ಮಾಲಿಂಗ ಮರಳಿ ಸಾರಥ್ಯ ವಹಿಸಿರುವುದು ಲಂಕೆಯ ಬಲವನ್ನು ಇನ್ನಷ್ಟು ಹೆಚ್ಚಿಸಿದೆ.

ಆಸ್ಟ್ರೇಲಿಯ ವಿರುದ್ಧ ಉತ್ತಮ ದಾಖಲೆ ಹೊಂದಿರುವುದೂ ಶ್ರೀಲಂಕಾ ಪಾಲಿಗೊಂದು ಪ್ಲಸ್‌ ಪಾಯಿಂಟ್‌.

Advertisement

ಆಡಿದ 13 ಟಿ20 ಪಂದ್ಯಗಳಲ್ಲಿ ಎಂಟನ್ನು ಗೆದ್ದಿದೆ. ಉಳಿದ ಐದರಲ್ಲಿ ಆಸೀಸ್‌ ಜಯ ಸಾಧಿಸಿದೆ.

ಅಡಿಲೇಡ್‌ನ‌ಲ್ಲಿ ಆಸ್ಟ್ರೇಲಿಯದ ಟಿ20 ದಾಖಲೆ ಉತ್ತಮವಾಗೇನೂ ಇಲ್ಲ. ಇಲ್ಲಿ ಆಡಿರುವ 4 ಟಿ20 ಪಂದ್ಯ ಗಳಲ್ಲಿ ಆಸ್ಟ್ರೇಲಿಯ ಜಯಿಸಿದ್ದು ಒಂದನ್ನು ಮಾತ್ರ.

Advertisement

Udayavani is now on Telegram. Click here to join our channel and stay updated with the latest news.

Next