Advertisement

ಹೋರಾಡಿ ಸೋತ ಭಾರತ: ವೈಟ್ ವಾಶ್ ತಪ್ಪಿಸಿಕೊಂಡ ಆಸೀಸ್

05:42 PM Dec 08, 2020 | Mithun PG |

ಸಿಡ್ನಿ: ಮೂರನೇ ಟಿ20 ಪಂದ್ಯವನ್ನು  ಗೆದ್ದು ಸರಣಿಯನ್ನು ಕ್ಲೀನ್ ಸ್ವೀಪ್  ಮಾಡುವ ವಿರಾಟ್ ಪಡೆ ಕನಸು ಭಗ್ನವಾಗಿದ್ದು, ಅಂತಿಮ ಪಂದ್ಯದಲ್ಲಿ ಆಸೀಸ್ ಪಡೆ 12 ರನ್ ಗಳಿಂದ ಭರ್ಜರಿ ಜಯಸಾಧಿಸಿದೆ. 186 ರನ್ ಗಳ ಗುರಿ ಬೆನ್ನತ್ತಿದ ಕೊಹ್ಲಿ ಬಾಯ್ಸ್,  20 ಓವರ್ ಗಳಲ್ಲಿ 174 ರನ್ ಗಳಿಸಲಷ್ಟೇ ಶಕ್ತರಾದರು.

Advertisement

ಗುರಿ ಬೆನ್ನತ್ತಿದ ಭಾರತಕ್ಕೆ ಆರಂಭದಲ್ಲೇ ಆಘಾತ ಎದುರಾಗಿತ್ತು. ಮ್ಯಾಕ್ಸ್ ವೆಲ್ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಮುಂದಾದ ಕೆ. ಎಲ್ ರಾಹುಲ್, ಸ್ಮಿತ್ ಗೆ ಕ್ಯಾಚ್ ನೀಡಿ ಶೂನ್ಯಕ್ಕೆ ನಿರ್ಗಮಿಸಿದರು.

ನಂತರ ಶಿಖರ್ ಧವನ್ ಜೊತೆಗೂಡಿದ ನಾಯಕ ವಿರಾಟ್ ಕೊಹ್ಲಿ, ಆಸೀಸ್ ಬೌಲರ್ ಗಳ ಬೆವರಿಳಿಸಿದರು. ಈ ಜೋಡಿ ಎರಡನೇ ವಿಕೆಟ್ ಗೆ 74 ರನ್ ಗಳ ಜೊತೆಯಾಟ ನಡೆಸಿತು. 28 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಧವನ್, ಸ್ವೆಪ್ಸನ್ ಬೌಲಿಂಗ್ ನಲ್ಲಿ ಡೆನಿಯಲ್ ಸ್ಯಾಮ್ಸ್ ಗೆ ಕ್ಯಾಚ್ ನೀಡಿ ಹೊರನಡೆದರು.

ಭಾರತದ ಮಧ್ಯಮ ಕ್ರಮಾಂಕ ಈ ಪಂದ್ಯದಲ್ಲೂ ಬ್ಯಾಟಿಂಗ್ ನಲ್ಲಿ ಎಡವಿತು. ಸಂಜು ಸ್ಯಾಮ್ಸನ್ ಕೇವಲ 10 ರನ್ ಗಳಿಸಿದರೇ, ಶ್ರೇಯಸ್ ಆಯ್ಯರ್ ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿದರು.  ನಂತರ ನಾಯಕ ಕೊಹ್ಲಿಯನ್ನು ಕೂಡಿಕೊಂಡ ಕಳೆದರೆಡು ಪಂದ್ಯಗಳ  ಹೀರೋ ಹಾರ್ದಿಕ್ ಪಾಂಡ್ಯ ಅಬ್ಬರಿಸುವ ಮುನ್ಸೂಚನೆ ನೀಡಿದರು. 2 ಭರ್ಜರಿ ಸಿಕ್ಸರ್ ಹಾಗೂ 1 ಬೌಂಡರಿ ಮೂಲಕ ನಾಯಕನಿಗೆ ಉತ್ತಮ ಸಾಥ್ ನೀಡಿದ ಪಾಂಡ್ಯ,  20 ರನ್ ಗಳಿಸಿದ್ದಾಗ ಫಿಂಚ್ ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು.

ಇದನ್ನೂ ಓದಿ: ಪಂಜಾಬ್ ನಲ್ಲಿ ಮತ್ತೆ ಉಗ್ರ ಚಟುವಟಿಕೆಗೆ ಸಂಚು: ಐಎಸ್ ಐಗೆ ಭಿಂದ್ರನ್ ವಾಲೆ ಸೋದರಳಿಯನ ಸಾಥ್!

Advertisement

ಒಂದೆಡೆ ವಿಕೆಟ್ ಉರುಳುತ್ತಿದ್ದರೂ  ಏಕಾಂಗಿ ಹೋರಾಟ ನಡೆಸಿದ ಕೊಹ್ಲಿ ಅರ್ಧಶತಕದ ಸಂಭ್ರಮ ಆಚರಿಸಿಕೊಂಡರು.  3 ಸಿಕ್ಸರ್ ಹಾಗೂ 4 ಬೌಂಡರಿಗಳ ಸಹಾಯದಿಂದ 85 ರನ್ ಗಳಿಸಿದ್ದ ವೇಳೆ ಟೈ ಎಸೆತದಲ್ಲಿ ಸ್ಯಾಮ್ಸ್ ಗೆ ಕ್ಯಾಚ್ ನೀಡಿ ಶತಕದ ಸಂಭ್ರಮ ತಪ್ಪಿಸಿಕೊಂಡರು.  ಕೊಹ್ಲಿ ಪೆವಿಲಿಯನ್ ಸೇರಿದ ಕೂಡಲೇ ಆಸೀಸ್ ತಂಡವನ್ನು ವೈಟ್ ವಾಶ್ ಮಾಡುವ ಭಾರತದ ಕನಸು ಕಮರಿತು.

ಕೊನೆಯಲ್ಲಿ ವಾಷಿಂಗ್ಟನ್ ಸುಂದರ್ 1 ಸಿಕ್ಸರ್ ಸಿಡಿಸಿ ಔಟಾದರೇ, ಶಾರ್ದೂಲ್ ಠಾಕೂರ್ 2 ಸಿಕ್ಸರ್ ಮೂಲಕ ಗೆಲ್ಲುವ ಭರವಸೆ ಮೂಡಿಸಿದ್ದರು.  ಆದರೇ ಅಂತಿಮವಾಗಿ ಭಾರತ ಸಿಗದಿತ ಓವರ್ ಗಳಲ್ಲಿ 174 ರನ್ ರನ್ ಗಳಿಸಲಷ್ಟೇ ಶಕ್ತವಾಯಿತು. ಆ ಮೂಲಕ 12 ರನ್ ಗಳಿಂದ ಸೋಲನ್ನಪ್ಪಿತು.

ಆಸ್ಟ್ರೇಲಿಯಾ ಪರ ಸ್ವೆಪ್ಸನ್ 3 ವಿಕೆಟ್ ಪಡೆದು ಮಿಂಚಿದರೇ, ಮ್ಯಾಕ್ಸ್ ವೆಲ್, ಅಬೋಟ್, ಟೈ ಹಾಗೂ ಝಂಪಾ ತಲಾ ಒಂದು ವಿಕೆಟ್ ಪಡೆದರು.

ಇದನ್ನೂ ಓದಿ:  ಎವರೆಸ್ಟ್‌ ಈಗ ಮತ್ತಷ್ಟು ಎತ್ತರ; ಶಿಖರದ ಪರಿಷ್ಕೃತ ಮಾಹಿತಿ ಬಿಡುಗಡೆ!

Advertisement

Udayavani is now on Telegram. Click here to join our channel and stay updated with the latest news.

Next