ಅಡಿಲೇಡ್: ಭಾರತ-ಆಸ್ಟ್ರೇಲಿಯ ನಡುವಿನ ಮೊದಲ ಹೊನಲು ಬೆಳಕಿನ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಕೊಹ್ಲಿ ಪಡೆ ಬ್ಯಾಟಿಂಗ್ ಆಯ್ದುಕೊಂಡಿದೆ.
ಅಡಿಲೇಡ್ ಟೆಸ್ಟ್ ಪಂದ್ಯಕ್ಕೆ ಭಾರತ ಒಂದು ದಿನ ಮುಂಚಿತವಾಗಿಯೇ ತನ್ನ ಆಡುವ ಬಳಗವನ್ನು ಪ್ರಕಟಿಸಿತ್ತು. ಮಾಯಾಂಕ್ ಅಗರ್ವಾಲ್ ಜತೆ ಪೃಥ್ವಿ ಶಾ ಇನ್ನಿಂಗ್ಸ್ ಆರಂಭಿಸುವ ಅವಕಾಶ ಪಡೆದಿದ್ದಾರೆ. ಶುಭಮನ್ ಗಿಲ್ ಅವರನ್ನು ಹೊರಗಿರಿಸಲಾಗಿದೆ. ಆದರೆ ಅಭ್ಯಾಸ ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡದ ಶಾ ಆಯ್ಕೆ ಅಚ್ಚರಿ ಮೂಡಿಸಿದೆ. ಆಡಿದ 4 ಇನ್ನಿಂಗ್ಸ್‌ಗಳಲ್ಲಿ ಗಳಿಸಿದ್ದು 0, 19, 40 ಮತ್ತು 3 ರನ್ ಮಾತ್ರ. ಗಿಲ್ ದ್ವಿತೀಯ ಅಭ್ಯಾಸ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಭರವಸೆಯ ಬ್ಯಾಟಿಂಗ್ ಪ್ರದರ್ಶಿಸಿದ್ದರು (43 ಮತ್ತು 65). ಆದರೆ ಗಿಲ್ ಅವರನ್ನು ವನ್‌ಡೌನ್‌ನಲ್ಲಿ ಆಡಿಸಲಾಗಿತ್ತು.
ಭಾರತದ ಕೀಪರ್ ಯಾರು ಎಂಬ ಪ್ರಶ್ನೆಗೆ ಉತ್ತರವಾದವರು ಅನುಭವಿ ವೃದ್ಧಿಮಾನ್ ಸಾಹಾ. 5 ದಿನಗಳ ಟೆಸ್ಟ್ ಪಂದ್ಯದಲ್ಲಿ ಕೀಪಿಂಗ್ ಕೌಶಲ ಅತೀ ಆಗತ್ಯ ಎಂಬ ಕಾರಣಕ್ಕೆ ಸಾಹಾ ಆಯ್ಕೆಯಾದರು. ರಿಷಭ್ ಪಂತ್ ಅಭ್ಯಾಸ ಪಂದ್ಯದಲ್ಲಿ ಶತಕ ಬಾರಿಸಿದ ಬಳಿಕ ಕೀಪಿಂಗ್ ಸ್ಪರ್ಧೆ ತೀವ್ರಗೊಂಡಿತ್ತು. ಭಾರತ ನಾಲ್ಕೇ ಮಂದಿ ಸ್ಪೆಷಲಿಸ್ಟ್ ಬೌಲರ್‌ಗಳೊಂದಿಗೆ ಕಣಕ್ಕಿಳಿಯಲಿದೆ. ಮೂವರು ವೇಗಿ, ಒಂದು ಸ್ಪಿನ್ ಬೌಲಿಂಗ್ ಕಾಂಬಿನೇಶನ್ ಇರಲಿದೆ. ಇವರೆಂದರೆ ಶಮಿ, ಬುಮ್ರಾ, ಉಮೇಶ್ ಯಾದವ್ ಮತ್ತು ಅಶ್ವಿನ್. ಆಲ್‌ರೌಂಡರ್ ಕೊರತೆ ಭಾರತ ತಂಡದ ಸಮಸ್ಯೆಯಾಗಿದೆ.
ಇದು ಟೆಸ್ಟ್ ಇತಿಹಾಸದ 15ನೇ ಡೇ-ನೈಟ್ ಪಂದ್ಯ. ಆಸ್ಟ್ರೇಲಿಯಕ್ಕೆ ಎಂಟನೆಯ ಪಂದ್ಯ. ತವರಲ್ಲಿ ಆಡಿದ ಎಲ್ಲ 7 ಪಂದ್ಯಗಳಲ್ಲೂ ಕಾಂಗರೂ ಗೆಲುವಿನ ಸಾಧನೆಗೈದಿದೆ. ಅಡಿಲೇಡ್‌ನ ನಾಲ್ಕೂ ಪಂದ್ಯಗಳಲ್ಲಿ ಜಯಭೇರಿ ಮೊಳಗಿಸಿದೆ.
ಭಾರತಕ್ಕೆ ಇದು ಕೇವಲ ಎರಡನೇ ಹಗಲು-ರಾತ್ರಿ ಟೆಸ್ಟ್. ವಿದೇಶದಲ್ಲಿ ಮೊದಲನೆಯದು. ಕಳೆದ ವರ್ಷ ಈಡನ್ ಗಾರ್ಡನ್ಸ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಮೊದಲ ಪಿಂಕ್ ಬಾಲ್ ಟೆಸ್ಟ್ ಆಡಿದ ಕೊಹ್ಲಿ ಪಡೆ ಇದನ್ನು ಇನ್ನಿಂಗ್ಸ್ ಹಾಗೂ 46 ರನ್ನುಗಳಿಂದ ಗೆದ್ದಿತ್ತು.
ತಂಡ:
ವಿರಾಟ್ ಕೊಹ್ಲಿ (ನಾ), ಮಾಯಾಂಕ್ ಅಗರ್ವಾಲ್, ಪೃಥ್ವಿ ಶಾ, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಹನುಮಾ ವಿಹಾರಿ, ವೃದ್ಧಿಮಾನ್ ಸಹಾ (ವಿ.ಕೀ), ಆರ್ ಅಶ್ವಿನ್, ಉಮೇಶ್ ಯಾದವ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ.
updating….