Advertisement

ಅವನಿಯ ಗರ್ಭದಲ್ಲಿ ಬೃಹತ್‌ ಬಂಗಲೆಯ ದರ್ಬಾರು

10:14 PM Jun 04, 2020 | Sriram |

ಮಣಿಪಾಲ: ವಿಶ್ವ ಹಲವಾರು ಕೌತುಕಗಳ ನೆಲೆಯಾಗಿದ್ದು, ದೇವನ ಸೃಷ್ಟಿ ಮನುಜನ ಯೋಚನೆಗೂ ನಿಲುಕದಾಗಿದೆ. ಇದಕ್ಕೆ ಉದಾಹರಣೆ ಸಾಕಷ್ಟಿದ್ದು, ವೈದ್ಯಕೀತ ಕ್ಷೇತ್ರದಿಂದ ಹಿಡಿದು ಪರಿಸರದಲ್ಲಿ ಜನರ ಅರಿವಿಗೆ ಬಂದಿರುವ ಕೌತುಕಗಳು ಬೆರಳಣಿಕೆಯಷ್ಟಿದ್ದರೆ, ಗೋಚರಕ್ಕೆ ಬಾರದ ಅನಾದಿಕಾಲದ ನೂರಾರು ಅಚ್ಚರಿಯ ಸಂಗತಿಗಳು ಮುನ್ನೆಲೆಗೆ ಬರದೇ ಅವಿತುಕೊಳುತ್ತಿದೆ.

Advertisement

ಇದೀಗ ಅಂತದೇ ಮತ್ತು ಕಥ ಪುರಾಣಗಳಲ್ಲಿ ಕೇಳಿದ ವಿಷಯ ಇಂದಿಗೂ ಜಾರಿಯಲ್ಲಿದೆ ಎಂಬುದಕ್ಕೆ ದೂರಾದ ಆಸ್ಟ್ರೇಲಿಯಾ ಸಾಕ್ಷಿಯಾಗಿದೆ. ಇಲ್ಲಿ ಭೂಮಿಯ ಒಳಗೆ ಮನುಷ್ಯ ಜೀವನ ವಾಸಿಸುತ್ತಿದ್ದು, ಮನುಕುಲಕ್ಕೆ ಧರಣಿ ಮಾತ್ರ ಯೋಗ್ಯವಾದ ವಾಸ ಸ್ಥಳ ಎಂಬ ಊಹೆಗೆ ತೆರ ಎಳೆದಂತಾಗಿದೆ.

ಅವನಿಯ ಗರ್ಭದಲ್ಲಿ ಬೃಹತ್‌ ಬಂಗಲೆ
ಹೌದು, ಆಸ್ಟ್ರೇಲಿಯಾದ ಕೆಲವು ಭಾಗಗಳಲ್ಲಿ ಜನ ಈಗಲೂ ಭೂಮಿಯ ಕೆಳಗೆ (ಅಂಡರ್‌ಗ್ರೌಂಡ್‌) ನಲ್ಲಿ ವಾಸಿಸುತ್ತಿದ್ದು, ಅವನಿಯ ಗರ್ಭದಲ್ಲಿ ಬೃಹತ್‌ ಬಂಗಲೆಗಳನ್ನೇ ನಿರ್ಮಿಸಿಕೊಂಡಿದ್ದಾರೆ.

ದಕ್ಷಿಣ ಆಸ್ಟ್ರೇಲಿಯಾದ ಕೂಬರ್‌ಪೆಡಿ ಎಂಬ ಪ್ರದೇಶದಲ್ಲಿ ಕಣ್ಣು ಹಾಯಿಸಿದಷ್ಟೂ ದೂರ ಕೆಂಪು ಮಣ್ಣು ಅಲ್ಲಲ್ಲಿ ಕೆಲವು ಬೋರ್ಡ್‌ಗಳು, ಮಣ್ಣು ಗುಡ್ಡೆಗಳು ಮಾತ್ರ ಗೋಚರವಾಗಲಿದ್ದು, ಈ ನಗರದಲ್ಲಿ ಜನರ ವಾಸವಿಲ್ಲ ಎಂಬ ಭಾವ ಬಹಳ ಗಾಢವಾಗಿ ಕಾಡುತ್ತದೆ. ಆದರೆ ಈ ಪ್ರದೇಶದಲ್ಲಿ ಜನ ವಾಸವಿದ್ದು, ಎಲ್ಲರೂ ಭೂಮಿಯ ಕೆಳಗೆ ಜೀವನ ನಡೆಸುತ್ತಿದ್ದಾರೆ.

ಕಾರಣವೇನು ?
ಇಲ್ಲಿಯ ಜನ ಭೂಮಿಯ ಒಳಗೆ ಜೀವನ ಸಾಗಿಸುತ್ತಿರುವುದಕ್ಕೆ ಕಾರಣವೂ ಇದೆ. ದಕ್ಷಿಣ ಆಸ್ಟ್ರೇಲಿಯಾದ ಈ ಭಾಗದಲ್ಲಿ ಎರಡೇ ಋತು. ಒಂದು ಬೆಸಗೆ ಕಾಲ ಮತ್ತೂಂದು ಚಳಿಗಾಲ. ಬೇಸಗೆಯಲ್ಲಿ ಇಲ್ಲಿ ವಿಪರೀತವಾದ ಬಿಸಿ. ಹೊರಗೆ ಹೆಜ್ಜೆ ಸಹ ಇಡಲಾಗದು. ಅದೇ ಚಳಿಗಾಲದಲ್ಲಿ ರಕ್ತ ಹೆಪ್ಪುಗಟ್ಟುವಂತಹಾ ಚಳಿ.

Advertisement

ಹಾಗಾಗಿ ಇಲ್ಲಿನ ಜನ ನೆಲದ ಕೆಳಗೆ ಸುರಂಗ ಕೊರೆದು ಮನೆಗಳನ್ನು ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದಾರೆ. ನೆಲದ ಒಳಗೆ ಮನೆ ನಿರ್ಮಿಸಲು ಅನುಕೂರವಾದ ಮಣ್ಣು ಇಲ್ಲಿ ಲಭ್ಯವಿದೆ.

ದಂಡು ದಂಡಾಗಿ ಹರಿದು ಬರುವ ಪ್ರವಾಸಿಗರು
ನೆಲವನ್ನು ತಮಗೆ ಬೇಕಾದಂತೆ ಕೊರದು, ಹಾಲ್‌, ಅಡಿಗೆ ಕೋಣೆ, ಬೆಡ್‌ ರೂಂಗಳಾಗಿ ವಿಂಗಡಿಸಿಕೊಂಡಿದ್ದಾರೆ. ನೆಲದ ಮೇಲೆ ನಿರ್ಮಿಸುವ ಮನೆಗಳಲ್ಲಿ ಇರುವ ಎಲ್ಲಾ ಭೋಗ ವಸ್ತುಗಳು ಇಲ್ಲಿಯೂ ಇವೆ. ಆದರೆ ಅಂಡರ್‌ಗ್ರೌಂಡ್‌ನ‌ಲ್ಲಿ. ಅಂಡರ್‌ಗ್ರೌಂಡ್‌ ನಗರವನ್ನು ನೋಡಲು ಸಾವಿರಾರು ಮಂದಿ ಇಲ್ಲಿಗೆ ಪ್ರತಿ ವರ್ಷ ಭೇಟಿ ನೀಡುತ್ತಾರೆ. ಪ್ರವಾಸಿಗರಿಗಾಗಿ ಹೋಟೆಲ್‌ಗ‌ಳು ಸಹ ಇಲ್ಲಿ ನೆಲದ ಕೆಳಗೆ ನಿರ್ಮಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next