Advertisement

ಕೊಹ್ಲಿ ಪಡೆ 105ಕ್ಕೆ ಆಲೌಟ್‌;ಆಸೀಸ್‌ ಗೆ 298 ರನ್‌ ಮುನ್ನಡೆ

11:32 AM Feb 24, 2017 | |

ಪುಣೆ: ಇಲ್ಲಿ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಟೆಸ್ಟ್‌ ಪಂದ್ಯದ 2 ನೇ ದಿನದಾಟದ ಲ್ಲಿ ಮೊದಲ ಇನ್ನಿಂಗ್ಸ್‌ ನಲ್ಲಿ ಭಾರತ ಭಾರೀ ಅಘಾತಕ್ಕೆ ಸಿಲುಕಿದೆ. ಆಸೀಸ್‌ನ ಬಿಗು ದಾಳಿಗೆ ಬಾಲಂಗೋಚಿಗಳಾದ ಭಾರತದ ಬ್ಯಾಟ್ಸ್‌ಮನ್‌ಗಳು ಕೇವಲ 105 ರನ್‌ಗಳಿಗೆ ಆಲೌಟಾಗಿ ಮೊದಲ ಇನ್ನಿಂಗ್ಸ್‌ನಲ್ಲಿ 155 ರನ್‌ ಹಿನ್ನಡೆ ಅನುಭವಿಸಿದೆ. 

Advertisement

ಟೆಸ್ಟ್‌ನಲ್ಲಿ ಪಾರಮ್ಯ ಮೆರೆದು ಮುನ್ನುಗ್ಗುತ್ತಿದ್ದ ವಿರಾಟ್‌ ಕೊಹ್ಲಿ  ಪಡೆ ಪ್ರವಾಸಿ ಬೌಲರ್‌ಗಳ ದಾಳಿಗೆ ನಲುಗಿ ಹೋಯಿತು. ಬಿಗು ದಾಳಿ ನಡೆಸಿದ ಕೀಫೆ 6 ವಿಕೆಟ್‌ ಕಿತ್ತರು. ಸ್ಟಾರ್ಕ್‌ 2 ವಿಕೆಟ್‌, ಹ್ಯಾಜಲ್‌ವುಡ್‌, ಲಿಯೋನ್‌ ತಲಾ 1 ವಿಕೆಟ್‌ ಪಡೆದರು. 

ಆಸೀಸನ್ನು 260 ರನ್‌ಗಳಿಗೆ ಆಲೌಟ್‌ ಮಾಡಿದ ಭಾರತ 50 ರನ್‌ ಗಳಿಸುವ ಒಳಗೆ 3 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. 
26 ರನ್‌ ಆಗುವಷ್ಟರಲ್ಲಿ  ಆರಂಭಿಕ ಆಟಗಾರ  10 ರನ್‌ಗಳಿಸಿದ್ದ ಮುರಳಿ ವಿಜಯ್‌ ಔಟಾದರು. ಪೂಜಾರ 6 ರನ್‌ಗಳಿಸಿ ಪೆವಿಲಿಯನ್‌ಗೆ ಮರಳಿದರೆ. ನಾಯಕ ವಿರಾಟ್‌ ಕೊಹ್ಲಿ  ಶೂನ್ಯಕ್ಕೆ ಔಟಾಗುವ ಮೂಲಕ ಭಾರೀ ನಿರಾಶರಾದರು. 

ಆರಂಭಿಕ ಆಟಗಾರ ಕೆ.ಎಲ್‌.ರಾಹುಲ್‌ 64  ಮತ್ತು ರೆಹಾನೆ 13 ರನ್‌ ಗಳಿಸಿದ್ದು ಗರಿಷ್ಠ  ಸ್ಕೋರ್‌ ಆಗಿತ್ತು. 

ನಿನ್ನೆ ಕೊನೆ ವಿಕೆಟ್‌ಗೆ ಅಬ್ಬರಿಸಿದ್ದ ಸ್ಟಾರ್ಕ್‌ 57 ರಿಂದ ಆಟ ಮುಂದುವರಿಸಿ 60 ಕ್ಕೆ ಔಟಾದರು. 

Advertisement

ಭಾರತದ ಪರ ಉಮೇಶ್‌ ಯಾದವ್‌ 4 , ಆರ್‌.ಅಶ್ವಿ‌ನ್‌ 3 ,ಜಡೇಜಾ 2 ಮತ್ತು ಜಯಂತ್‌ 1 ವಿಕೆಟ್‌ ಪಡೆದರು. 

2 ನೇ ಇನ್ನಿಂಗ್ಸ್‌ ಆರಂಭಿಸಿದ ಆಸೀಸ್‌ ನ ಮೊದಲ ವಿಕೆಟ್‌ 10 ರನ್‌ಗೆ ಪತನವಾಯಿತು. 10 ರನ್‌ಗಳಿಸಿದ್ದ ವಾರ್ನರ್‌,ಮಾರ್ಶ್‌(0) ಅವರನ್ನು ಅಶ್ವಿ‌ನ್‌ ಎಲ್‌ಬಿ ಮೂಲಕ ಪೆವಿಲಿಯನ್‌ಗೆ ಅಟ್ಟಿದರು. ಹ್ಯಾಂಡ್ಸ್‌ಕೊಂಬ್‌ 19 ರನ್‌ಗಳಿಸಿ ಔಟಾದರೆ, ರೆನ್‌ಶಾ 31 ರನ್‌ಗಳಿಸಿ ಔಟಾದರು. 

 2 ನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್‌ ನಷ್ಟಕ್ಕೆ 143 ರನ್‌ಗಳಿಸಿದೆ. ನಾಯಕ ಸ್ಮಿತ್‌ 59 ರನ್‌ಗಳಿಸಿ ತಾಳ್ಮೆಯ ಆಟವಾಡುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next