Advertisement

ಚೀನ ಕೆಮರಾಗಳಿಗೆ ವಿದಾಯ 

10:58 PM Feb 09, 2023 | Team Udayavani |

ಕ್ಯಾನ್‌ಬೆರಾ: ಆಸ್ಟ್ರೇಲಿಯಾದ ಸರಕಾರಿ ಕಚೇರಿಗಳಲ್ಲಿ ಅಳವಡಿಸಲಾಗಿದ್ದ ಚೀನ ನಿರ್ಮಿತ ಸಿಸಿಟಿವಿ ಕೆಮರಾಗಳನ್ನು ತೆಗೆಯಲು ನಿರ್ಧರಿಸಲಾಗಿದೆ.  ಅಮೆರಿಕ, ಭಾರತ ಸಹಿತ  ಹಲವು ರಾಷ್ಟ್ರಗಳಿಗೆ ಬಲೂನ್‌ ಮೂಲಕ ಚೀನ ಬೇಹುಗಾರಿಕೆ ನಡೆಸಿದೆ ಎಂಬ ಅಂಶ ದೃಢ ಪಟ್ಟಿರುವಂತೆಯೇ ಈ ಕ್ರಮ ಕೈಗೊಳ್ಳಲಾಗಿರುವುದು ಗಮನಾರ್ಹ.

Advertisement

ಸೈಬರ್‌ ಸೆಕ್ಯುರಿಟಿ ಸಚಿವ ಜೇಮ್ಸ್‌ ಪ್ಯಾಟರ್ಸನ್‌ ಈ ಬಗ್ಗೆ ಮಾತನಾಡಿ ಚೀನದ ಹಿಕ್‌ವಿಷನ್‌ ಹಾಗೂ ದಹುವಾ ಸಂಸ್ಥೆ

ಗಳು ಅಭಿವೃದ್ಧಿಪಡಿಸಿರುವ 913 ಸಿ.ಸಿ.ಕೆಮರಾಗಳನ್ನು ಸರಕಾರದ 250 ಕಚೇರಿಗಳಲ್ಲಿ ಅಳವಡಿಸಲಾಗಿದೆ.ಉಪಕರಣ ಗಳಲ್ಲಿ ಬೇಹುಗಾರಿಕೆಗೆ ಸಂಬಂಧಿಸಿದ ತಂತ್ರಜ್ಞಾನ ಬಳಕೆಯಾಗಿರುವ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದಿದ್ದಾರೆ. ಅಮೆರಿಕ ಮತ್ತು ಯು.ಕೆ. ಸರಕಾರಗಳು ಹಿಕ್‌ವಿಷನ್‌ ಹಾಗೂ ದಹುವಾ ಕಂಪೆನಿಗಳ ಉತ್ಪನ್ನಗಳಿಗೆ ಈಗಾಗಲೇ ನಿಷೇಧ ಹೇರಿವೆ.

ಅಮೆರಿಕ ವಿರುದ್ಧ ಆಕ್ರೋಶ: ಇದೇ ವೇಳೆ, ಚೀನದ ಬಲೂನ್‌ಗಳು ಗೂಢಚರ್ಯೆ ಮಾಡುತ್ತಿವೆ ಎಂದು ಆರೋಪ ಮಾಡುವ ಮೂಲಕ ಅಮೆರಿಕ, ಚೀನದ ವಿರುದ್ಧ ಮಾಹಿತಿ ಯುದ್ಧ ಸಾರುತ್ತಿದೆ ಎಂದು  ಆ ದೇಶದ ವಿದೇಶಾಂಗ ಸಚಿವಾಲಯ ದೂರಿದೆ. ಬೇಹುಗಾರಿಕೆ ಬಲೂನ್‌ಗಳನ್ನು ಚೀನ ಹಲವು ವರ್ಷಗಳಿಂದ ಬಳಸುತ್ತಿದೆ ಎಂದಿರುವ ಅಮೆರಿಕದ ಆರೋಪ ಸುಳ್ಳು ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next