Advertisement

ಆಸೀಸ್‌ ಟೆಸ್ಟ್‌ ತಂಡಕ್ಕೆ ಭರ್ಜರಿ ಸರ್ಜರಿ

12:30 AM Jan 10, 2019 | |

ಮೆಲ್ಬರ್ನ್: ಭಾರತದೆದುರು ಮೊದಲ ಸಲ ತವರಿನಲ್ಲಿ ಸರಣಿ ಸೋತು ತೀವ್ರ ಮುಖಭಂಗ ಅನುಭವಿಸಿರುವ ಆಸ್ಟ್ರೇಲಿಯ ತನ್ನ ಟೆಸ್ಟ್‌ ತಂಡಕ್ಕೆ ಮೇಜರ್‌ ಸರ್ಜರಿ ಮಾಡಿದೆ. ಭಾರತದೆದುರು ವಿಫ‌ಲರಾದ ಎಲ್ಲ ಆಟಗಾರರನ್ನೂ ಸಾರಾಸಗಟಾಗಿ ತಂಡದಿಂದ ಹೊರದಬ್ಬಿದೆ.

Advertisement

ಮುಂಬರುವ ಶ್ರೀಲಂಕಾ ಎದುರಿನ ಟೆಸ್ಟ್‌ ಸರಣಿಗಾಗಿ ತಂಡವನ್ನು ಅಂತಿಮಗೊಳಿಸಿರುವ ಆಸ್ಟ್ರೇಲಿಯ, ಆರಂಭಕಾರ ಆರನ್‌ ಫಿಂಚ್‌ ಅವರನ್ನು ಕೈಬಿಟ್ಟಿದೆ. ವಿಕ್ಟೋರಿಯಾದ ಯುವ ಕ್ರಿಕೆಟಿಗ, 20ರ ಹರೆಯದ ವಿಲ್‌ ಪುಕೋವ್‌ಸ್ಕಿ ಅವರಿಗೆ ಅವಕಾಶವಿತ್ತಿದೆ.

ಫಿಂಚ್‌ ಜತೆಗೆ ಶಾನ್‌ ಮಾರ್ಷ್‌, ಮಿಚೆಲ್‌ ಮಾರ್ಷ್‌ ಮತ್ತು ಪೀಟರ್‌ ಹ್ಯಾಂಡ್ಸ್‌ಕಾಂಬ್‌ ಅವರಿಗೆ ಗೇಟ್‌ಪಾಸ್‌ ನೀಡಲಾಗಿದೆ. ಜೋ ಬರ್ನ್ಸ್, ಮ್ಯಾಟ್‌ ರೆನ್‌ಶಾ ಅವರನ್ನು ಮರಳಿ ಸೇರಿಸಿಕೊಂಡಿದೆ. ಆದರೆ ಬೌಲಿಂಗ್‌ ವಿಭಾಗದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ವಿಲ್‌ ಪುಕೋವ್‌ಸ್ಕಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ವನ್‌ಡೌನ್‌ ಕ್ರಮಾಂಕದಲ್ಲಿ ಆಡಲಿಳಿಯುತ್ತಾರೆ. ಕಳೆದ ಅಕ್ಟೋಬರ್‌ನಲ್ಲಿ ನಡೆದ ಶೆಫೀಲ್ಸ್‌ ಶೀಲ್ಡ್‌ ಕ್ರಿಕೆಟ್‌ನಲ್ಲಿ ವೆಸ್ಟರ್ನ್ ಆಸ್ಟ್ರೇಲಿಯ ವಿರುದ್ಧ 243 ರನ್‌ ಬಾರಿಸಿ ಗಮನ ಸೆಳೆದಿದ್ದರು. ಈವರೆಗೆ 8 ಪಂದ್ಯಗಳಿಂದ 49ರ ಸರಾಸರಿಯಲ್ಲಿ 600ರಷ್ಟು ರನ್‌ ಹೊಡೆದಿದ್ದಾರೆ.

ಜ. 24ರಿಂದ ಬ್ರಿಸ್ಬೇನ್‌ನಲ್ಲಿ ಸರಣಿಯ ಮೊದಲ ಟೆಸ್ಟ್‌ ಆರಂಭವಾಗಲಿದೆ.

Advertisement

ಆಸ್ಟ್ರೇಲಿಯ ತಂಡ: ಟಿಮ್‌ ಪೇನ್‌ (ನಾಯಕ), ಮಾರ್ಕಸ್‌ ಹ್ಯಾರಿಸ್‌, ಜೋ ಬರ್ನ್ಸ್, ವಿಲ್‌ ಪುಕೋವ್‌ಸ್ಕಿ, ಉಸ್ಮಾನ್‌ ಖ್ವಾಜಾ, ಮಾರ್ನಸ್‌ ಲಬುಶೇನ್‌, ಮ್ಯಾಟ್‌ ರೆನ್‌ಶಾ, ಟ್ರ್ಯಾವಿಸ್‌ ಹೆಡ್‌, ಪ್ಯಾಟ್‌ ಕಮಿನ್ಸ್‌, ನಥನ್‌ ಲಿಯೋನ್‌, ಮಿಚೆಲ್‌ ಸ್ಟಾರ್ಕ್‌, ಪೀಟರ್‌ ಸಿಡ್ಲ್, ಜೋಶ್‌ ಹ್ಯಾಝಲ್‌ವುಡ್‌.

Advertisement

Udayavani is now on Telegram. Click here to join our channel and stay updated with the latest news.

Next